• Home
  • »
  • News
  • »
  • sports
  • »
  • IND vs NZ 2022: ಅರ್ಷದೀಪ್​-ಸಿರಾಜ್ ದಾಳಿಗೆ ತತ್ತರಿಸಿದ ಕಿವೀಸ್​, ಟೀಂ ಇಂಡಿಯಾಗೆ ಸ್ಪರ್ಧಾತ್ಮಕ ಟಾರ್ಗೆಟ್

IND vs NZ 2022: ಅರ್ಷದೀಪ್​-ಸಿರಾಜ್ ದಾಳಿಗೆ ತತ್ತರಿಸಿದ ಕಿವೀಸ್​, ಟೀಂ ಇಂಡಿಯಾಗೆ ಸ್ಪರ್ಧಾತ್ಮಕ ಟಾರ್ಗೆಟ್

IND vs NZ

IND vs NZ

IND vs NZ 2022: ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್​ ತಂಡವು 19.4 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 160 ರನ್ ಗಳಿಸುವ ಮೂಲಕ ಭಾರತಕ್ಕೆ 161 ರನ್ ಟಾರ್ಗೆಟ್ ನೀಡಿದೆ. 

  • Share this:

ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ಕ್ರಿಕೆಟ್ ತಂಡಗಳು ನೇಪಿಯರ್‌ನಲ್ಲಿ ಸರಣಿಯ ಮೂರನೇ ಮತ್ತು ಕೊನೆಯ ಟಿ20 ಪಂದ್ಯ ನೇಪಿಯರ್‌ನ ಮ್ಯಾಕ್ಲೀನ್ ಪಾರ್ಕ್‌ನಲ್ಲಿ (Mclean Park) ಇಂದು ಮುಖಾಮುಖಿಯಾಗಿದ್ದು, ಸರಣಿ ಗೆಲುವಿಗಾಗಿ ಭಾರತ ಭರ್ಜರಿ ಫೈಟ್​ ನೀಡುತ್ತಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್​ ತಂಡವು 19.4 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 160 ರನ್ ಗಳಿಸುವ ಮೂಲಕ ಭಾರತಕ್ಕೆ 161 ರನ್ ಟಾರ್ಗೆಟ್ ನೀಡಿದೆ.


ಕಿವೀಸ್​ಗೆ ಆಸರೆಯಾದ ಫಿಲಿಪ್ಸ್-ಕಾನ್ವೆ:


ಇನ್ನು, ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ನ್ಯೂಜಿಲ್ಯಾಂಡ್​ ತಂಡವು 19.4 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು. ಕಿವೀಸ್​ ಪರ ಡೆವೊನ್ ಕಾನ್ವೇ 49 ಎಸೆತದಲ್ಲಿ 2 ಸಿಕ್ಸ್ ಮತ್ತು 5 ಪೋರ್​ ಮೂಲಕ 59 ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್ 33 ಎಸೆತದಲ್ಲಿ 3 ಸಿಕ್ಸ್ ಮತ್ತು 5 ಬೌಂಡರಿ ನೆರವಿನಿಂದ 54 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಉಳಿದಂತೆ ಫಿನ್ ಅಲೆನ್ 3 ರನ್, ಮಾರ್ಕ್ ಚಾಪ್ಮನ್ 12 ರನ್, ಡೇರಿಲ್ ಮಿಚೆಲ್ 10 ರನ್, ಜಿಮ್ಮಿ ನೀಶಮ್ ಶೂನ್ಯ, ಮಿಚೆಲ್ ಸ್ಯಾಂಟ್ನರ್ 1 ರನ್, ಇಶ್ ಸೋಧಿ 0 ರನ್, ಟಿಮ್ ಸೌಥಿ 6 ರನ್, ಲಾಕಿ ಫರ್ಗುಸನ್ 5 ರನ್ ಮತ್ತು ಆಡಮ್ ಮಿಲ್ನೆ ಶೂನ್ಯಕ್ಕೆ ವಿಕೆಟ್ ಒಪ್ಪಿದರು.ಸಿರಾಜ್-ಅರ್ಷದೀಪ್​ ಬೆಂಕಿ ಬೌಲಿಂಗ್:


ಇನ್ನು, ಟಾಸ್​ ಸೋತು ಮೊದಲು ಬೌಲಿಂಗ್ ಮಾಡಿದ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿತು. ಭಾರತದ ಪರ ಅರ್ಷದೀಪ್ ಸಿಂಗ್​ 4 ಓವರ್ ಮಾಡಿ 37 ರನ್ ನೀಡಿ 4 ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್ ಸಹ 4 ಓವರ್​ಗೆ ಕೇವಲ 17 ರನ್ ನೀಡಿ 4 ವಿಕೆಟ್​ ಪಡೆದು ಮಿಂಚಿದರು. ಹರ್ಷಲ್ ಪಟೇಳ್ ಸಹ 1 ವಿಕೆಟ್ ಪಡೆದರು.


ಸಂಜು ಸ್ಯಾಮ್ಸನ್​ಗೆ ನೋ ಚಾನ್ಸ್:


ಪದೇ ಪದೇ ಸಂಜು ಸ್ಯಾಮ್ಸನ್​ಗೆ ಸ್ಥಾನ ನಿಡದಿರುವುದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಾದರೂ ಸಂಜು ಸ್ಯಾಮ್ಸನ್​ ಅವರಿಗೆ ಅವಕಾಶ ದೊರಕಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಕಳೆದ ಪಂದ್ಯದಲ್ಲಿಯೂ ಅವರಿಗೆ ಚಾನ್ಸ್ ದೊರಕಲಿಲ್ಲ. ಜೊತೆಗೆ ಉಮ್ರಾನ್ ಮಲಿಕ್ ಅವರಿಗೆ ಅವಕಾಶ ದೊರಕುವ ಸಾಧ್ಯತೆ ಇತ್ತು ಎಂಬ ಊಹೆಯೂ ಇದೀಗ ಸುಳ್ಳಾಗಿದೆ. ಅವರಿಗೂ ಇಂದಿನ ಪಂದ್ಯದಲ್ಲಿ ಚಾನ್ಸ್ ದೊರಕಲಿಲ್ಲ.


ಇದನ್ನೂ ಓದಿ: Team India: ಕ್ರಿಕೆಟ್​ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದ ಟೀಂ ಇಂಡಿಯಾ


ಭಾರತ-ಕಿವೀಸ್​ ಪ್ಲೇಯಿಂಗ್​ 11:


ಭಾರತ ತಂಡ: ಇಶಾನ್ ಕಿಶನ್, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ (ನಾಯಕ), ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಸಿರಾಜ್.


ನ್ಯೂಜಿಲ್ಯಾಂಡ್​ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ (ವಾರ), ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಲಾಕಿ ಫರ್ಗುಸನ್ ಮತ್ತು ಆಡಮ್ ಮಿಲ್ನೆ.

Published by:shrikrishna bhat
First published: