• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs NZ T20: ಇಂದು ಭಾರತ-ಕಿವೀಸ್​ ಪಂದ್ಯ; ಇಲ್ಲಿದೆ ಪಿಚ್​ ರಿಪೋರ್ಟ್​, ಉಭಯ ತಂಡಗಳ ಬಲಾಬಲ

IND vs NZ T20: ಇಂದು ಭಾರತ-ಕಿವೀಸ್​ ಪಂದ್ಯ; ಇಲ್ಲಿದೆ ಪಿಚ್​ ರಿಪೋರ್ಟ್​, ಉಭಯ ತಂಡಗಳ ಬಲಾಬಲ

IND VS NZ 2023

IND VS NZ 2023

IND vs NZ T20: ಇಂದು ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ​​ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ ನಡೆಯಲಿದೆ.

  • Share this:

ಇಂದು ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ. ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತವರು ಮೈದಾನವಾದ ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ​​(JSCA International Stadium Complex) ಮೈದಾನದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಟಿ20 ಸರಣಿಯ ಮೊದಲ ಪಂದ್ಯ ಸಂಜೆ 7ರಿಂದ ಆರಂಭವಾಗಲಿವೆ. ಮತ್ತೊಮ್ಮೆ ಹಾರ್ದಿಕ್ ಪಾಂಡ್ಯಗೆ (Hardik Pandya) ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಸವಾಲು ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಂಚಿಯ ಪಿಚ್ ರಿಪೋರ್ಟ್​, ಪಿಚ್ ರೆಕಾರ್ಡ್​​ಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಪಿಚ್‌ ರಿಪೋರ್ಟ್​?:


ಜಾರ್ಖಂಡ್‌ನ ಮೈದಾನ ಸ್ಪಿನ್ನರ್‌ಗಳಿಗೆ ತುಂಬಾ ಅನುಕೂಲಕರವಾಗಿದೆ. ಇಲ್ಲಿ ಬೌಲರ್‌ಗಳು ಸಾಕಷ್ಟು ಮೇಲುಗೈ ಸಾಧಿಸುತ್ತಾರೆ. ಅಲ್ಲದೇ ಮೊದಲ ಟಿ20ಯಲ್ಲೂ ಇದೇ ರೀತಿ ಅಂಶಗಳನ್ನು ನಿರೀಕ್ಷಿಸಲಾಗಿದೆ. ಇಲ್ಲಿ ಮೊದಲ ಇನಿಂಗ್ಸ್‌ನ ಒಟ್ಟು ಮೊತ್ತ 160 ರನ್‌ಗಳ ಆಸುಪಾಸಿನಲ್ಲಿದೆ. ಎರಡನೇ ಇನ್ನಿಂಗ್ಸ್‌ನ ಸರಾಸರಿ ಕೇವಲ 110ರ ಆಸುಪಾಸಿನಲ್ಲಿ ರನ್​ ಗಳಿಸಬಹುದಾಗಿದೆ.



ರಾಂಚಿಯ ಪಿಚ್‌ನಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳು 3 ಬಾರಿ ನಡೆದಿವೆ. ಈ ವೇಳೆ ಮೊದಲು ಬ್ಯಾಟ್ ಮಾಡಿದ ತಂಡ ಸೋಲನ್ನಪ್ಪಿದೆ. ಒಟ್ಟು 3 ಪಂದ್ಯಗಳಲ್ಲಿ, ನಂತರ ಬ್ಯಾಟಿಂಗ್ ಮಾಡಿದ ತಂಡ 2 ಬಾರಿ ಗೆದ್ದಿದೆ. ಡ್ಯೂ ಫ್ಯಾಕ್ಟರ್ ಸಹ ಇಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಟಾಸ್​ ಗೆದ್ದ ಮೊದಲ ತಂಡ ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆ ಇದೆ.


ಇದನ್ನೂ ಓದಿ: MS Dhoni: ಧೋನಿ ಫಸ್ಟ್‌ ಸಿನಿಮಾದ ಟೈಟಲ್, ಪೋಸ್ಟರ್ ಲಾಂಚ್; ಈ ಹೀರೋಯಿನ್‌ಗೆ ಚಾನ್ಸ್ ಕೊಟ್ರು ಕ್ಯಾಪ್ಟನ್ ಕೂಲ್!‌


IND vs NZ ಹೆಡ್​ ಟು ಹೆಡ್:


ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಈವರಗೆ 22 ಪಂದ್ಯಗಳಲ್ಲಿ ಮುಖಾಮುಖಿ ಆಗಲಿದೆ. ಇದರಲ್ಲಿ ಭಾರತ 12ರಲ್ಲಿ ಗೆದ್ದರೆ, ನ್ಯೂಜಿಲ್ಯಾಂಡ್​ 9 ಪಂದ್ಯಗಳನ್ನು ಗೆದ್ದಿದೆ. ಅದಲ್ಲದೇ ಭಾರತದಲ್ಲಿ ಉಭಯ ತಂಡಗಳು ಈವರೆಗೆ 8 ಪಂದ್ಯವನ್ನಾಡಿದ್ದು, ಭಾರತ 5 ಮತ್ತು ಕಿವೀಸ್​ 3 ಪಂದ್ಯವನ್ನು ಗೆದ್ದಿದೆ.


ಕಿವೀಸ್​ ವಿರುದ್ಧ ಭಾರತದ ಸರಾಸರಿ ಸ್ಕೋರ್: 166
ಭಾರತದ ವಿರುದ್ಧ ನ್ಯೂಜಿಲ್ಯಾಂಡ್ ಸರಾಸರಿ ಸ್ಕೋರ್: 165
ಭಾರತದ ಪರ ಅತಿ ಹೆಚ್ಚು ವಿಕೆಟ್‌ ಪಡೆದವರು: 10 (ಯುಜ್ವೇಂದ್ರ ಚಾಹಲ್)
ಕಿವೀಸ್ ಪರ ಅತಿ ಹೆಚ್ಚು ವಿಕೆಟ್‌ ಪಡೆದವರು: 22 (ಇಶ್ ಸೋಧಿ)




ಪಂದ್ಯದ ವಿವರ:


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುವುದು.


IND vs NZ ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್​ 11: ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ವಾಷಿಂಗ್ಟನ್ ಸುಂದರ್, ದೀಪಕ್ ಹೂಡಾ, ಉಮ್ರಾನ್ ಮಲಿಕ್, ಶಿವಂ ಮಾವಿ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್.


ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್​ 11: ಫಿನ್ ಅಲೆನ್, ಡೆವೊನ್ ಕಾನ್ವೇ (WK), ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್ (c), ಲಾಕಿ ಫರ್ಗುಸನ್, ಜಾಕೋಬ್ ಡಫಿ, ಹೆನ್ರಿ ಶಿಪ್ಲಿ, ಬ್ಲೇರ್ ಟಿಕ್ನರ್.

Published by:shrikrishna bhat
First published: