• Home
  • »
  • News
  • »
  • sports
  • »
  • Sanju Samson: ಮತ್ತೆ ಸಂಜು ಸ್ಯಾಮ್ಸನ್​ ಕಡೆಗಣನೆ, ಟೀಂ ಇಂಡಿಯಾ ವಿರುದ್ಧ ಫ್ಯಾನ್ಸ್ ಗರಂ

Sanju Samson: ಮತ್ತೆ ಸಂಜು ಸ್ಯಾಮ್ಸನ್​ ಕಡೆಗಣನೆ, ಟೀಂ ಇಂಡಿಯಾ ವಿರುದ್ಧ ಫ್ಯಾನ್ಸ್ ಗರಂ

ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್

IND vs NZ 2nd ODI: ಎರಡನೇ ODIನಲ್ಲಿ ಸ್ಯಾಮ್ಸನ್ ಅವರನ್ನು ಆಡುವ XI ನಿಂದ ಕೈಬಿಟ್ಟ ನಂತರ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಬಿಸಿಸಿಐ ಮತ್ತು ಟೀಂ ಇಂಡಿಯಾ ಆಯ್ಕೆ ಕುರಿತು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • Share this:

ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ ಎರಡನೇ ಏಕದಿನ ಪಂದ್ಯ ಇಂದು ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್ ಸ್ಟೇಡಿಯಂನಲ್ಲಿ (Seddon Park) ಆರಂಭವಾಗಿದೆ. ಈ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ಟಾಸ್ ಗೆದ್ದು ಟೀಂ ಇಂಡಿಯಾವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತ್ತು. ಆದರೆ ಟಾಸ್ ವೇಳೆ ಭಾರತ ತಂಡದ ನಾಯಕ ಶಿಖರ್ ಧವನ್ (Shikhar Dhawan) ತಂಡದಲ್ಲಿ ಬದಲಾವಣೆಗಳನ್ನು ಪ್ರಕಟಿಸಿದಾಗ ಅನೇಕರು ಆಶ್ಚರ್ಯಚಕಿತರಾದರು. ಏಕೆಂದರೆ ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಧವನ್ ಎರಡು ಬದಲಾವಣೆ ಮಾಡಿದ್ದಾರೆ. ಶಾರ್ದೂಲ್ ಠಾಕೂರ್ ಬದಲಿಗೆ ದೀಪಕ್ ಚಹಾರ್ ಗೆ ಅವಕಾಶ ನೀಡಿದರು. ದೀಪಕ್ ಹೂಡಾ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವಾಗ, ಕಳೆದ ಪಂದ್ಯದಲ್ಲಿ 36 ರನ್ ಗಳಿಸಿದ್ದ ಸಂಜು ಸ್ಯಾಮ್ಸನ್ (Sanju Samson) ಅವರನ್ನು ತಂಡದಿಂದ ಹೊರಗಿಟ್ಟರು. ಇದರಿಂದಾಗಿ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ.


ಸಂಜು ಸ್ಯಾಮ್ಸನ್​ಗೆ ಮತ್ತದೇ ಅನ್ಯಾಯ:


ಆಕ್ಲೆಂಡ್‌ನ ಮೊದಲ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ಕೇವಲ 15 ರನ್ ಗಳಿಸಿದ್ದರು. ಆದರೆ ಅದೇ ಸಮಯದಲ್ಲಿ ಸಂಜು ಸ್ಯಾಮ್ಸನ್ 38 ಎಸೆತಗಳಲ್ಲಿ 36 ರನ್ ಗಳಿಸಿದರು. T20 ಕ್ರಿಕೆಟ್‌ನಲ್ಲಿಯೂ ಸಹ, ಪಂತ್ ಅವರ ಕಳಪೆ ಪ್ರದರ್ಶನದ ಹೊರತಾಗಿಯೂ ಆಗಾಗ್ಗೆ ಅವಕಾಶಗಳನ್ನು ನೀಡಲಾಗುತ್ತದೆ. ಆದರೆ ಸಂಜು ಸ್ಯಾಮ್ಸನ್ ವಿಷಯದಲ್ಲಿ  ಮಾತ್ರ ಪದೇ ಪದೇ ಅನ್ಯಾಯವಾಗುತ್ತಿದೆ. ಅಷ್ಟೇ ಏಕೆ ಏಕದಿನ ಸರಣಿಯಲ್ಲೂ ಒಂದೇ ಒಂದು ಪಂದ್ಯ ಆಡಿ ಡ್ರೆಸ್ಸಿಂಗ್ ರೂಂನಲ್ಲಿ ಕೂರಬೇಕಾದ ಸ್ಥಿತಿ ಬಂದಿದ್ದು ತಂಡದ ಆಯ್ಕೆ ಬಗ್ಗೆ ಅಭಿಮಾನಿಗಳು ಬಿಸಿಸಿಐಗೆ ಪ್ರಶ್ನೆ ಮಾಡಿದ್ದಾರೆ. ಇಷ್ಟೇ ಅಲ್ಲ, ಸಂಜು ಸ್ಯಾಮ್ಸನ್ ಅವರ ಹ್ಯಾಶ್‌ಟ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.


ಟೀಂ ಇಂಡಿಯಾ ಆಯ್ಕೆ ವಿರುದ್ಧ ಕ್ರೀಡಾಭಿಮಾನಿಗಳ ಆಕ್ರೋಶ:


ಎರಡನೇ ODIನಲ್ಲಿ ಸ್ಯಾಮ್ಸನ್ ಅವರನ್ನು ಆಡುವ XI ನಿಂದ ಕೈಬಿಟ್ಟ ನಂತರ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಬಿಸಿಸಿಐ ಮತ್ತು ಟೀಂ ಇಂಡಿಯಾ ಆಯ್ಕೆ ಕುರಿತು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ,  'ಒಬ್ಬ ಕೀಪರ್‌ನೊಂದಿಗೆ ಮಾತ್ರ ಹೋಗಬೇಕಾದರೆ, ಸಂಜು ಸ್ಯಾಮ್ಸನ್‌ಗೆ ಮಾತ್ರ ಆಯ್ಕೆ ಉತ್ತಮವಲ್ಲವೇ? ಏಕೆ ಫಾರ್ಮ್‌ನಿಂದ ಹೊರಗಿರುವ ರಿಷಬ್ ಪಂತ್? ಕೇವಲ ಉಪನಾಯಕ ಎಂಬ ಕಾರಣಕ್ಕೆ ತಾನೇ?‘ ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಮತ್ತೊಬ್ಬ ಅಭಿಮಾನಿ ‘ಸಂಜು ಸ್ಯಾಮ್ಸನ್ ಈಗ ಸುಲಭ ಗುರಿ’ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಯೊಬ್ಬರು, ' ಮತ್ತೆ ಏಕೆ ಕೈಬಿಡಲಾಗಿದೆ?' ಇದರೊಂದಿಗೆ ಅಭಿಮಾನಿ ಕೋಪದ ಎಮೋಜಿಯನ್ನು ಹಾಕಿದ್ದಾರೆ.


ಉತ್ತಮ ಫಾರ್ಮ್​ನಲ್ಲಿರುವ ಸಂಜು:


ಸ್ಯಾಮ್ಸನ್ ಅವರ ODI ವೃತ್ತಿಜೀವನದ ಬಗ್ಗೆ ಮಾತನಾಡುತ್ತಾ,  ಅವರು 11 ಪಂದ್ಯಗಳನ್ನು ಆಡುವಾಗ 66.0 ಸರಾಸರಿಯಲ್ಲಿ 10 ಇನ್ನಿಂಗ್ಸ್‌ಗಳಲ್ಲಿ 330 ರನ್ ಗಳಿಸಿದ್ದಾರೆ. ಅವರು ಏಕದಿನ ಕ್ರಿಕೆಟ್‌ನಲ್ಲಿ ಎರಡು ಅರ್ಧಶತಕಗಳನ್ನು ಹೊಂದಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಏಕದಿನ ಕ್ರಿಕೆಟ್‌ನಲ್ಲಿ 104.76 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಆದರೂ ಸಹ ಫಾರ್ಮ್​ನಲ್ಲಿ ಇರದ ಪಂತ್​ಗೆ ಅವಕಾಶ ದೊರಕುತ್ತಿದೆ.


ಇದನ್ನೂ ಓದಿ: Virat Kohli: ಈ ಇನ್ನಿಂಗ್ಸ್ ನನಗೆ ಯಾವಾಗಲೂ ವಿಶೇಷ, ನಿವೃತ್ತಿ ಸೂಚನೆ ನೀಡಿದ್ರಾ ಕಿಂಗ್ ಕೊಹ್ಲಿ?


ಸ್ಯಾಮ್ಸನ್​ ಆಯ್ಕೆ ಆಗದಿರಲು ಕಾರಣವೇನು?:


ಇದೀಗ ಎಲ್ಲರಲ್ಲಿಯೂ ಮೂಡಿರುವ ಸಾಮಾನ್ಯ ಪ್ರಶ್ನೆ ಎಂದರೆ ಅದು ಸಂಜು ಸ್ಯಾಮ್ಸನ್​ ಆಯ್ಕೆ ಆಗದಿರಲು ಕಾರಣವೇನು ಎಂದು. ಅದಕ್ಕೆ ಉತ್ತರ ಹುಡುಕುತ್ತಾ ಹೋದಲ್ಲಿ ಸಿಲ್ಲಿ ಉತ್ತರಗಳೇ ದೊರಕುತ್ತದೆ ಎಂದು ಹೇಳಬಹುದು. ಅದರಲ್ಲಿ ಪ್ರಮುಖವಾಗಿ ರಿಷಭ್ ಪಂತ್​ ಈಗಾಗಲೇ ತಂಡದ ಉಪನಾಯಕರಾಗಿರುವುದರಿಂದ ಅವರನ್ನು ಕಿವೀಸ್ ವಿರುದ್ಧ ತಂಡದಿಂದ ಕೈಬಿಡಲಾಗದು. ಅದರಂತೆ ಕಳೆದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್​ನಲ್ಲಿ ಉತ್ತಮವಾಗಿ ಕಂಡಬಂದರೂ ಸಹ ಬೌಲಿಂಗ್​ನಲ್ಲಿ ಎಡವಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಅರನೇ ಬೌಲರ್ ಅಗತ್ಯವಿದ್ದ ಕಾರಣ ಓರ್ವ ಬ್ಯಾಟರ್ ಅನ್ನು ಹೊರಗಿಡುವುದು ಅನಿವಾರ್ಯವಾಗಿತ್ತು ಎಂದು ಮೂಲಗಳು ತಿಳಿಸುತ್ತಿವೆ. ಇದರಿಂದ ಸಂಜು ಅವಕಾಶ ವಂಚಿತರಾದರು.

Published by:shrikrishna bhat
First published: