ಭಾರತ ಮತ್ತು ನ್ಯೂಜಿಲ್ಯಾಂಡ್ (IND vs NZ) ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಇಂದು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Rajiv Gandhi International Cricket Stadium, Hyderabad) ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಕಿವೀಸ್ ತಂಡಕ್ಕೆ 350 ರನ್ಗಳ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡವು ನಿಗದಿತ 49.2 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 337 ರನ್ಗಳಿಸುವ ಮೂಲಕ 12 ರನ್ಗಳಿಂದ ಸೋಲನ್ನಪ್ಪಿತು. ಈ ಮೂಲಕ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ವ್ಯರ್ಥವಾದ ಬ್ರೇಸ್ವೆಲ್ ಏಕಾಂಗಿ ಹೋರಾಟ:
ಇನ್ನು, ಭಾರತ ನೀಡಿದ ಟಾರ್ಗೆಟ್ ಬೆನ್ನತ್ತಿದ ಕಿವೀಸ್ 49.2 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 337 ರನ್ಗಳಿಸುವ ಮೂಲಕ 12 ರನ್ಗಳಿಂದ ಸೋಲನ್ನಪ್ಪಿತು. ನ್ಯೂಜಿಲ್ಯಾಂಡ್ ಆರಂಭದಲ್ಲಿ ಪಟಟಪನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆಲ್ರೌಂಡರ್ ಮೈಕೆಲ್ ಬ್ರೇಸ್ವೆಲ್ ಅದ್ಭುತ ಶತಕದ ಬಳಿಕ ತಂಡ ಗೆಲುವಿನ ಸನಿಹಕ್ಕೆ ಬಂದಿತ್ತು. ಬ್ರೇಸ್ವೆಲ್ 78 ಎಸೆತದಲ್ಲಿ 10 ಸಿಕ್ಸ್ ಮತ್ತು 12 ಪೋರ್ ಮೂಲಕ 140 ರನ್ ಗಳಿಸಿದರು. ಉಳಿದಂತೆ, ಕಿವೀಸ್ ಪರ ಫಿನ್ ಅಲೆನ್ 40 ರನ್, ಡೆವೊನ್ ಕಾನ್ವೇ 10 ರನ್, ಹೆನ್ರಿ ನಿಕೋಲ್ಸ್ 18 ರನ್, ಡೇರಿಲ್ ಮಿಚೆಲ್ 9 ರನ್, ಟಾಮ್ ಲ್ಯಾಥಮ್ 24 ರನ್, ಗ್ಲೆನ್ ಫಿಲಿಪ್ಸ್ 11 ರನ್, ಮಿಚೆಲ್ ಸ್ಯಾಂಟ್ನರ್ 57 ರನ್, ಸಿಪಲ್ ಶೂನ್ಯ, ಲಾಕಿ ಫರ್ಗುಸನ್ 8 ರನ್ ಗಳಿಸಿದರು.
Michael Bracewell's heroic innings goes in vain as India edge the Kiwis in a high-scoring ODI in Hyderabad 🤯#INDvNZ | 📝: https://t.co/raJtMjMaEn pic.twitter.com/S3TU8hLGMr
— ICC (@ICC) January 18, 2023
ಇನ್ನು, ಟೀಂ ಇಂಡಿಯಾ ಪರ ಭವಲರ್ಗಳು ಸಂಘಟಿತ ಬೌಲಿಂಗ್ ದಾಳಿ ನಡೆಸುವ ಮೂಲಕ ನ್ಯೂಜಿಲ್ಯಾಂಡ್ ತಂಡಕ್ಕೆ ಆರಂಭಿಕ ಹಂತದಲ್ಲಿಯೇ ಆಘಾತ ನೀಡಿತು. ಭಾರತದ ಪರ ಮೊಹಮ್ಮದ್ ಸಿರಾಜ್ 10 ಓವರ್ ಎಸೆದು 46 ರನ್ ನೀಡಿ ಪ್ರಮುಖ 4 ವಿಕೆಟ್ ತೆಗೆದು ಮಿಂಚಿದರು. ಉಳಿದಂತೆ, ಕುಲ್ದೀಪ್ ಯಾದವ್ 2 ವಿಕೆಟ್, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಶುಭ್ಮನ್ ಗಿಲ್ ಭರ್ಜರಿ ದ್ವಿಶತಕ:
ಭಾರತದ ಪರ ಇಂದು ಆರಂಬಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತೆ ನಿರಾಸೆ ಮೂಡಿಸಿದರು. ಅವರು 38 ಎಸೆತದಲ್ಲಿ 2 ಸಿಕ್ಸ್ ಮತ್ತು 4 ಫೋರ್ ಮೂಲಕ 34 ರನ್ ಗಳಿಸುವ ಮೂಲಕ ಮತ್ತೆ ಬೇಗ ವಿಕೆಟ್ ಒಪ್ಪಿಸಿದರು. ಆದರೆ ಯುವ ಆಟಗಾರ ಶುಭ್ಮನ್ ಗಿಲ್ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಮಿಂಚಿದರು. ಅಲ್ಲದೇ ಗಿಲ್ ಕಿವೀಸ್ ವಿರುದ್ಧ ದ್ವಿಶತಕ ಸಿಡಿಸಿ ಆರ್ಭಟಿಸಿದರು. ಅವರು, 149 ಬೌಲ್ಗಳಿಗೆ 9 ಸಿಕ್ಸ್ ಮತ್ತು 19 ಫೋರ್ ಮೂಲಕ ಆಕರ್ಷಕ 208 ರನ್ಗಳಿಸಿದರು. ಉಳಿದಂತೆ ವಿರಾಟ್ ಕೊಹ್ಲಿ 8 ರನ್, ಇಶಾನ್ ಕಿಶನ್ 5 ರನ್, ಸೂರ್ಯಕುಮಾರ್ ಯಾದವ್ 31 ರನ್, ಹಾರ್ದಿಕ್ ಪಾಂಡ್ಯ 28 ರನ್, ವಾಷಿಂಗ್ಟನ್ ಸುಂದರ್ 12 ರನ್, ಶಾರ್ದೂಲ್ ಠಾಕೂರ್ 3 ರನ್, ಕುಲ್ದೀಪ್ ಯಾದವ್ 5 ರನ್ ಮತ್ತು ಮೊಹಮ್ಮದ್ ಸಿರಾಜ್ 2 ರನ್ ಗಳಿಸಿದರು.
ದಾಖಲೆ ಬರೆದ ಗಿಲ್:
ಇನ್ನು, ದ್ವಿಶತಕದ ಬಳಿಕ ಶುಭ್ಮನ್ ಗಿಲ್ ಸಾಲು ಸಾಲು ದಾಖಲೆ ಬರೆದಿದ್ದಾರೆ. ಏಕದಿನ ಮಾದರಿಯಲ್ಲಿ ಅತಿವೇಗವಾಗಿ 1000 ರನ್ ಗಳಿಸಿದ ಭಾರತ ತಂಡದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಹೆಸರಿನಲ್ಲಿ ಈ ವಿಶೇಷ ದಾಖಲೆಯಿತ್ತು. ಈ ಇಬ್ಬರೂ ಆಟಗಾರರು ಕ್ರಮವಾಗಿ 24-24 ಇನ್ನಿಂಗ್ಸ್ಗಳಲ್ಲಿ ತಮ್ಮ ಆರಂಭಿಕ 1000 ರನ್ಗಳನ್ನು ಪೂರ್ಣಗೊಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ