• Home
  • »
  • News
  • »
  • sports
  • »
  • IND vs NZ: ಎರಡನೇ ODIಗೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ರೋಹಿತ್ ಪಡೆಗೆ ಭಾರೀ ದಂಡ

IND vs NZ: ಎರಡನೇ ODIಗೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ರೋಹಿತ್ ಪಡೆಗೆ ಭಾರೀ ದಂಡ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs NZ: ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಬುಧವಾರ ಹೈದರಾಬಾದ್‌ನಲ್ಲಿ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

  • Share this:

ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ 3 ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯವು ಜನವರಿ 21 ರ ಶನಿವಾರ ರಾಯ್‌ಪುರದಲ್ಲಿ (Shaheed Veer Narayan Singh International Cricket Stadium) ನಡೆಯಲಿದೆ. ಪಂದ್ಯಕ್ಕಾಗಿ ಎರಡೂ ತಂಡಗಳು ರಾಯ್‌ಪುರ ತಲುಪಿದ್ದು, ಎರಡನೇ ಪಂದ್ಯ ಆರಂಭವಾಗುವ ಮುನ್ನವೇ ಟೀಂ ಇಂಡಿಯಾಗೆ (Team India) ಕೆಟ್ಟ ಸುದ್ದಿಯೊಂದು ಕೇಳಿ ಬಂದಿದೆ. ವಾಸ್ತವವಾಗಿ, ಹೈದರಾಬಾದ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ನಿಧಾನಗತಿಯ ಓವರ್‌ ರೇಟ್‌ಗಾಗಿ ಭಾರತ ತಂಡಕ್ಕೆ ಭಾರಿ ದಂಡ ವಿಧಿಸಲಾಗಿದೆ. ಟೀಂ ಇಂಡಿಯಾಗೆ ಪಂದ್ಯ ಶುಲ್ಕದ ಶೇ.60ರಷ್ಟು ದಂಡ ವಿಧಿಸಲಾಗಿದೆ.


ಭಾರತ ತಂಡಕ್ಕೆ ದಂಡ:


ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳ ಜಾವಗಲ್ ಶ್ರೀನಾಥ್ ಈ ದಂಡ ವಿಧಿಸಿದ್ದಾರೆ. ಬುಧವಾರ ನಡೆದ ಸರಣಿಯ ಆರಂಭಿಕ ಏಕದಿನ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಬೌಲ್ ಮಾಡಬೇಕಾದ ಓವರ್‌ಗಳಲ್ಲಿ ಭಾರತ ಮೂರು ಓವರ್‌ಗಳನ್ನು ಕಡಿಮೆ ಮಾಡಿತ್ತು. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹೇಳಿಕೆಯಲ್ಲಿ, "ಐಸಿಸಿ ನೀತಿ ಸಂಹಿತೆಯ ನಿಯಮ 2.22 ರ ಪ್ರಕಾರ ಆಟಗಾರರು ನಿಗದಿತ ಸಮಯದಲ್ಲಿ ಕಡಿಮೆ ಓವರ್​ ಬೌಲಿಂಗ್ ಮಾಡಿದ್ದಲ್ಲಿ, ಪ್ರತಿ ಓವರ್‌ಗೆ ಆಟಗಾರರ ಪಂದ್ಯ ಶುಲ್ಕದ ಕನಿಷ್ಠ ಓವರ್ ರೇಟ್​ನ್ನು ದಂಡವಾಗಿ ವಿಧಿಸಲಾಗುತ್ತದೆ. 20 ಪ್ರತಿಶತ (ಮೂರು ಓವರ್‌ಗಳಲ್ಲಿ 60 ಪ್ರತಿಶತ) ದಂಡ ವಿಧಿಸಿರುವುದಾಗಿ ವರಸದಿಯಾಗಿದೆ.


ತಪ್ಪನ್ನು ಒಪ್ಪಿಕೊಂಡ ರೋಹಿತ್:


ಇನ್ನು, ಭಾರತ ತಂಡದ ನಾಯಕ ರೋಹಿತ್ ಶರ್ಮಾ ನಿಧಾನ ಗತಿಯ ಓವರ್​ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಅವರು ಈ ತಪ್ಪಿಗಾಗಿ ದಂಡವನ್ನು ಕಟ್ಟಲಿದ್ದಾರೆ. ಆದ್ದರಿಂದ ಅಧಿಕೃತ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ. ಆನ್ ಫೀಲ್ಡ್ ಅಂಪೈರ್ ಗಳಾದ ಅನಿಲ್ ಚೌಧರಿ ಮತ್ತು ನಿತಿನ್ ಮೆನನ್, ಮೂರನೇ ಅಂಪೈರ್ ಕೆಎನ್ ಅನಂತಪದ್ಮನಾಭನ್ ಮತ್ತು ನಾಲ್ಕನೇ ಅಂಪೈರ್ ಜಯರಾಮನ್ ಮದನಗೋಪಾಲ್ ಅವರು ಭಾರತ ತಂಡ ನಿಧಾನಗತಿಯ ಬೌಲಿಂಗ್​ ಮಾಡಿದೆ ಎಂದು ಆರೋಪಿಸಿದ್ದರು.


ಇದನ್ನೂ ಓದಿ: IND vs NZ 2nd ODI: ಭಾರತ-ನ್ಯೂಜಿಲ್ಯಾಂಡ್​ 2ನೇ ಪಂದ್ಯ ರದ್ದು? ಇಲ್ಲಿದೆ ಹವಾಮಾನ ವರದಿ


ಈ ಪಂದ್ಯದಲ್ಲಿ ಶುಭಮನ್ ಗಿಲ್ ಅವರ ಅದ್ಭುತ ದ್ವಿಶತಕದ ನೆರವಿನಿಂದ ಭಾರತ 12 ರನ್‌ಗಳ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 23 ವರ್ಷದ 132 ದಿನಗಳ ವಯಸ್ಸಿನಲ್ಲಿ, ಶುಭಮನ್ ಗಿಲ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು.


2ನೇ ಪಂದ್ಯ ರದ್ದು ಎಂಬ ಸುಳ್ಳು ಸುದ್ದಿ:


ಇದರ ನಡುವೆ ಜನವರಿ 21ರಂದು ನಡೆಯಲಿರುವ 2ನೇ ಏಕದಿನ ಪಂದ್ಯವು ಮಳೆಯ ಕಾರಣ ರದ್ದಾಗಬಹುದು ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.  ಆದರೆ ಇದು ಸುಳ್ಳು ಸುದ್ದಿಯಾಗಿದ್ದು, ಪಂದ್ಯದ ದಿನವಾದ ನಾಳೆ ಮಳೆಯಾಗುವ ಸಾಧ್ಯತೆ ಇಲ್ಲ. ಅಕ್ಯುವೆದರ್ ಪ್ರಕಾರ, ಜನವರಿ 21 ರಂದು, ರಾಯ್‌ಪುರದ ಗರಿಷ್ಠ ತಾಪಮಾನ 31 ಮತ್ತು ಕನಿಷ್ಠ ತಾಪಮಾನ 14 ಡಿಗ್ರಿ ಎಂದು ವರದಿಯಾಗಿದೆ.
ಅಂದರೆ ಮಧ್ಯಾಹ್ನದ ವೇಳೆ ತುಂಬಾ ಬಿಸಿಲು ಇರುತ್ತದೆ. ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಅಲ್ಲದೇ ನಾಳಿನ ಪಂದ್ಯವನ್ನು ಅಭಿಮಾನಿಗಳು ಸಂಪೂರ್ಣವಾಗಿ ವೀಕ್ಷಿಸಬಹುದು.


ಭಾರತ ಸಂಭಾವ್ಯ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್.

Published by:shrikrishna bhat
First published: