• Home
  • »
  • News
  • »
  • sports
  • »
  • IND vs NZ, 1st ODI: ಧವನ್-ಅಯ್ಯರ್ ಭರ್ಜರಿ ಬ್ಯಾಟಿಂಗ್​, ಕಿವೀಸ್​ ತಂಡಕ್ಕೆ ಬೃಹತ್ ಟಾರ್ಗೆಟ್

IND vs NZ, 1st ODI: ಧವನ್-ಅಯ್ಯರ್ ಭರ್ಜರಿ ಬ್ಯಾಟಿಂಗ್​, ಕಿವೀಸ್​ ತಂಡಕ್ಕೆ ಬೃಹತ್ ಟಾರ್ಗೆಟ್

IND vs NZ

IND vs NZ

IND vs NZ, 1st ODI: ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸುವ ಮೂಲಕ ಕಿವೀಸ್ ತಂಡಕ್ಕೆ 307 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ.

  • Share this:

ಶಿಖರ್ ಧವನ್ (Shikhar Dhawan) ನಾಯಕತ್ವದಲ್ಲಿ ಭಾರತ ತಂಡ ಆತಿಥೇಯ ನ್ಯೂಜಿಲೆಂಡ್ (IND vs NZ) ವಿರುದ್ಧ ಏಕದಿನ ಸರಣಿ ಆರಂಭವಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಇಂದು ಆಕ್ಲೆಂಡ್‌ನಲ್ಲಿ (Auckland) ನಡೆಯುತ್ತಿದೆ. ಟಾಸ್ ಗೆದ್ದಿರುವ ನ್ಯೂಜಿಲ್ಯಾಂಡ್​ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಶಿಖರ್ ಧವನ್ ಮತ್ತು ಸ್ರೇಯಸ್​ ಅಯ್ಯರ್ ಬ್ಯಾಟಿಂಗ್​ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸುವ ಮೂಲಕ ಕಿವೀಸ್ ತಂಡಕ್ಕೆ 307 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ. ಆದರೆ ಮತ್ತೆ ಉತ್ತಮ ಅವಕಾಶ ದೊರಕಿದರೂ ರಿಷಭ್ ಪಂತ್​ ವಿಫಲರಾದರು.


ಅಬ್ಬರಿಸಿದ ಧವನ್ -ಅಯ್ಯರ್:


ಇನ್ನು, ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತು. ಭಾರತದ ಪರ ನಾಯಕ ಶಿಖರ್ ಧವನ್ ಮತ್ತು ಶ್ರೇಯಸ್​ ಅಯ್ಯರ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಆರಂಭಿಕರಾಗಿ ಕಣಕ್ಕಿಳಿದ ಧವನ್ ಕಿವೀಸ್​ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು 77 ಎಸೆತದಲ್ಲಿ 13 ಬೌಂಡರಿ ಸಿಡಿಸಿ ಆಕರ್ಷಕ 72 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅವರಂತೆ ಶ್ರೇಯಸ್​ ಅಯ್ಯರ್ ಸಹ 76 ಎಸೆತದಲ್ಲಿ 4 ಸಿಕ್ಸ್ ಮತ್ತು ಫೋರ್​ ಮೂಲಕ ಆಕರ್ಷಕ 80 ರನ್ ಗಳಿಸಿ ಅಬ್ಬರಿಸುವ ಮೂಲಕ ತಂಡದ ಮೊತ್ತ 300ರ ಗಡಿ ದಾಟಲು ಸಹಾಯಕರಾದರು.ಉಳಿದಂತೆ, ಶುಭ್​ಮನ್ ಗಿಲ್​ ಸಹ ಆಕರ್ಷಕ ಅರ್ಧಶತಕ ಸಿಡಿಸಿದರು. ಅವರು ಕಿವೀಸ್​ ವಿರುದ್ಧ 65 ಎಸೆತದಲ್ಲಿ 3 ಪೋರ್​ ಮತ್ತು 1 ಸಿಕ್ಸ್ ನೆರವಿನಿಂದ 50 ರನ್ ಗಳಿಸಿದರು. ರಿಷಭ್ ಪಂತ್ 15 ರನ್, ಸೂರ್ಯಕುಮಾರ್ ಯಾದವ್ 4 ರನ್, ಸಂಜು ಸ್ಯಾಮ್ಸನ್​ 36 ರನ್ ಗಳಿಸಿದರೆ ಅಂತಿಮವಾಗಿ ಕ್ರೀಸ್​ಗೆ ಬಂದ ವಾಷಿಂಗ್ಟನ್​ ಸುಂದರ್​ 16 ಎಸತದಲ್ಲಿ 37 ರನ್ ಗಳಿಸಿ ಮಿಂಚಿದರು.


ಫರ್ಗುಸನ್-ಸೌಥಿ ಭರ್ಜರಿ ಬೌಲಿಂಗ್:


ಟಾಸ್​ ಗೆದ್ದು ಮೊದಲು ಬೌಲಿಂಗ್ ಮಾಡಿದ ನ್ಯೂಜಿಲ್ಯಾಂಡ್​ ತಂಡ ಉತ್ತಮದಾಳಿ ನಡೆಸಿತು. ಕಿವೀಸ್​ ಪರ ಟೀಮ್​ ಸೌಥಿ 10 ಓವರ್​ ಬೌಲ್​ ಮಾಡಿ 73 ರನ್ ನೀಡಿ 3 ವಿಕೆಟ್ ಪಡೆದರೆ, ಲಾಕಿ ಫರ್ಗುಸನ್ ಸಹ 10 ಓವರ್​ಗೆ 59 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಆಡಮ್​ ಮಿಲ್ಲೆ 1 ವಿಕೆಟ್ ಪಡೆದರು.


ಇದನ್ನೂ ಓದಿ: Rishabh Pant: ಮತ್ತೆ ವಿಫಲವಾದ ರಿಷಭ್ ಪಂತ್, ಇವರು ಎಂದಿಗೂ ಬದಲಾಗಲ್ಲ ಎಂದ ಫ್ಯಾನ್ಸ್!


ಭಾರತ-ನ್ಯೂಜಿಲ್ಯಾಂಡ್​ ಪ್ಲೇಯಿಂಗ್​ 11:


ಭಾರತ ತಂಡ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ರಿಷಭ್ ಪಂತ್ (ಉಪನಾಯಕ), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.


ನ್ಯೂಜಿಲೆಂಡ್ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಟಾಮ್ ಲ್ಯಾಥಮ್, ಡಾರೆಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲಾಕಿ ಫರ್ಗುಸನ್.

Published by:shrikrishna bhat
First published: