• Home
  • »
  • News
  • »
  • sports
  • »
  • IND vs NZ: ಟಾಸ್​ ಗೆದ್ದ ನ್ಯೂಜಿಲ್ಯಾಂಡ್​, ಮತ್ತೆ ಸಂಜು-ಉಮ್ರಾನ್​​ಗೆ ಸಿಗದ ಅವಕಾಶ; ಇಲ್ಲಿದೆ ಪ್ಲೇಯಿಂಗ್​ 11

IND vs NZ: ಟಾಸ್​ ಗೆದ್ದ ನ್ಯೂಜಿಲ್ಯಾಂಡ್​, ಮತ್ತೆ ಸಂಜು-ಉಮ್ರಾನ್​​ಗೆ ಸಿಗದ ಅವಕಾಶ; ಇಲ್ಲಿದೆ ಪ್ಲೇಯಿಂಗ್​ 11

IND vs NZ

IND vs NZ

IND vs NZ 2022: ಈಗಾಗಲೇ ಟಾಸ್​ ಗೆದ್ದಿರುವ ನ್ಯೂಜಿಲ್ಯಾಂಡ್​ ತಂಡದ ನಾಯಕ ಸೌಥಿ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಭಾರತ ತಂಡ ಈ ಬಾರಿ ಚೇಸಿಂಗ್​ ಮಾಡಲಿದ್ದು, ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ.

  • Share this:

ಭಾರತ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳು ನೇಪಿಯರ್‌ನಲ್ಲಿ ಸರಣಿಯ ಮೂರನೇ ಮತ್ತು ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇಂದು ನೇಪಿಯರ್‌ನ ಮ್ಯಾಕ್ಲೀನ್ ಪಾರ್ಕ್‌ನಲ್ಲಿ (Mclean Park) ಆತಿಥೇಯ ನ್ಯೂಜಿಲೆಂಡ್ (India vs New Zealand) ವಿರುದ್ಧ ಸೆಣಸಲಿದೆ. ಈಗಾಗಲೇ ಟಾಸ್​ ಗೆದ್ದಿರುವ ನ್ಯೂಜಿಲ್ಯಾಂಡ್​ ತಂಡದ ನಾಯಕ ಸೌಥಿ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಭಾರತ ತಂಡ ಈ ಬಾರಿ ಚೇಸಿಂಗ್​ ಮಾಡಲಿದ್ದು, ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ.


ತಂಡದಲ್ಲಿ ಒಂದು ಬದಲಾವಣೆ:


ಇನ್ನು, ಕಿವೀಸ್​ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾಋತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಅದರಂತೆ ವಾಷಿಂಗ್ಟನ್ ಸುಂದರ್ ಬದಲಿಗೆ ಹರ್ಷಲ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಸಂಜು ಸ್ಯಾಮ್ಸನ್​ಗೆ ಇಂದಿನ ಪಂದ್ಯದಲ್ಲಿಯೂ ಅವಕಾಶ ನೀಡಲಾಗಿಲ್ಲ. ಬದಲಿಗೆ ಶ್ರೇಯಸ್ ಅಯ್ಯರ್​ಗೆ ಮತ್ತೊಂದು ಚಾನ್ಸ್ ನೀಡಲಾಗಿದೆ. ಇದನ್ನು ಹೊರತುಪಡಿಸಿ ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇಂದೂ ಸಹ ಆಡಲಿದೆ.ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು?:


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಟಿ20 ಸರಣಿಯ 2ನೇ ಪಂದ್ಯವು ಇಂದು ನ್ಯೂಜಿಲ್ಯಾಂಡ್​ನ ನೇಪಿಯರ್‌ನ ಮ್ಯಾಕ್ಲೀನ್ ಪಾರ್ಕ್‌ನಲ್ಲಿ ಆರಂಭವಾಗಿದೆ. ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದು. ಹಾಗೂ ಪಂದ್ಯದ ನೇರಪ್ರಸಾರವನ್ನು ಡಿಡಿ ಸ್ಪೋರ್ಟ್ಸ್​ನಲ್ಲಿ ವೀಕ್ಷಿಸಬಹುದು.


ಮತ್ತೆ ಸಂಜು-ಉಮ್ರಾನ್​ಗೆ ಇಲ್ಲ ಅವಕಾಶ:


ಪದೇ ಪದೇ ಸಂಜು ಸ್ಯಾಮ್ಸನ್​ಗೆ ಸ್ಥಾನ ನಿಡದಿರುವುದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಾದರೂ ಸಂಜು ಸ್ಯಾಮ್ಸನ್​ ಅವರಿಗೆ ಅವಕಾಶ ದೊರಕಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಕಳೆದ ಪಂದ್ಯದಲ್ಲಿಯೂ ಅವರಿಗೆ ಚಾನ್ಸ್ ದೊರಕಲಿಲ್ಲ. ಆದರೆ ಇಂದಿನ ಕೊನೆ ಪಂದ್ಯದಲ್ಲಾದರೂ ಅವಕಾಶ ದೊರಕಲಿದೆಯೇ ಎಂದು ಭಾವಿಸಲಾಗಿತ್ತು. ಆದರೆ ಇಂದಿನ ಪಂದ್ಯದಲ್ಲಿತಯೂ ಅವಕಾಶ ದೊರಕಲಿಲ್ಲ. ಅಲ್ಲದೇ ಇಂದಿನ ಮೈದಾನ ವೇಗಿಗಳಿಗೆ ಹೆಚ್ಚು ಅನುಕೂಲವಾಗಿದೆ. ಹೀಗಾಗಿ ಉಮ್ರಾನ್ ಮಲಿಕ್ ಅವರಿಗೆ ಅವಕಾಶ ದೊರಕುವ ಸಾಧ್ಯತೆ ಇತ್ತು ಎಂಬ ಊಹೆಯೂ ಇದೀಗ ಸುಳ್ಳಾಗಿದೆ. ಅವರಿಗೂ ಇಂದಿನ ಪಂದ್ಯದಲ್ಲಿ ಚಾನ್ಸ್ ದೊರಕಲಿಲ್ಲ.


ಇದನ್ನೂ ಓದಿ: IND vs NZ: ರೋಹಿತ್ ದಾಖಲೆ ಮೇಲೆ ಸೂರ್ಯ ಕಣ್ಣು! ಬೇಕಿರುವುದು ಕೇವಲ 9 ಎಸೆತ


ಪಿಚ್​ ವರದಿ:


ಮೆಕ್ಲೀನ್ ಪಿಚ್ (ಮ್ಯಾಕ್ಲೀನ್ ಪಾರ್ಕ್ ಪಿಚ್) ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಇಲ್ಲಿ ಇಲ್ಲಿಯವರೆಗೆ ಒಟ್ಟು 5 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಈ ಸ್ಥಳದಲ್ಲಿ ಹೆಚ್ಚಿನ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಲಾಗಿದೆ. ಆದಾಗ್ಯೂ, ಆಟ ಮುಂದುವರೆದಂತೆ, ವಿಕೆಟ್ ನಿಧಾನವಾಗುತ್ತದೆ. ವಿಶಾಲವಾದ ಮೈದಾನದ ಕಾರಣ ವೇಗದ ಬೌಲರ್‌ಗಳು ಲಾಭ ಪಡೆಯಬಹುದು.


ಭಾರತ-ಕಿವೀಸ್​ ಪ್ಲೇಯಿಂಗ್​ 11:


ಭಾರತ ತಂಡ: ಇಶಾನ್ ಕಿಶನ್, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ (ನಾಯಕ), ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಸಿರಾಜ್.

Published by:shrikrishna bhat
First published: