• Home
  • »
  • News
  • »
  • sports
  • »
  • IND vs NZ: ಟಿ20 ವಿಶ್ವಕಪ್​ ನಂತರ ಭಾರತ-ನ್ಯೂಜಿಲೆಂಡ್​ ಸರಣಿ, ವೇಳಾಪಟ್ಟಿ ಪ್ರಕಟ

IND vs NZ: ಟಿ20 ವಿಶ್ವಕಪ್​ ನಂತರ ಭಾರತ-ನ್ಯೂಜಿಲೆಂಡ್​ ಸರಣಿ, ವೇಳಾಪಟ್ಟಿ ಪ್ರಕಟ

IND vs NZ

IND vs NZ

IND vs NZ: ಸದ್ಯ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ 2022ರ ಟಿ 20 ವಿಶ್ವಕಪ್ ಗಾಗಿ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದೆ. ಆದರೆ ವಿಶ್ವಕಪ್​ ಬಳಿಕ ಟೀಂ ಇಂಡಿಯಾ ನ್ಯೂಜಿಲೆಂಡ್‌ಗೆ ತೆರಳಲಿದ್ದು, ಕಿವೀಸ್​ ವಿರುದ್ಧ ಏಕದಿನ ಮತ್ತು ಟಿ20 ಸರಣಿಯನ್ನು ಆಡಲಿದೆ.

  • Share this:

ರೋಹಿತ್ ಶರ್ಮಾ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು (Team India) 2022ರ ಟಿ20 ವಿಶ್ವಕಪ್‌ಗಾಗಿ (T20 World Cup) ಪ್ರಸ್ತುತ ಆಸ್ಟ್ರೇಲಿಯಾದಲ್ಲಿದೆ. ಈಗಾಗಲೇ ಟೀಂ ಇಂಡಿಯಾ ಆಸೀಸ್​ನಲ್ಲಿ ವಿಶ್ವಕಪ್​ಗಾಗಿ ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದು, ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ಹೊಸ ರಣತಂತ್ರದೊಂದಿಗೆ ಕಣಕ್ಕಿಳಿಯಲಿದ್ದು, ಈ ಬಾರಿ ವಿಶ್ವಕಪ್​ ಗೆಲ್ಲಲೇ ಬೇಕಾದ ಹಠದಲ್ಲಿದೆ. ಟಿ20 ವಿಶ್ವಕಪ್​ ಅಕ್ಟೋಬರ್​ 16ರಿಂದ ಆರಂಭವಾಗಲಿದ್ದು, ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು (IND vs PAK) ಎದುರಿಸಲಿದೆ. ಆದರೆ ಟಿ20 ವಿಶ್ವಕಪ್ ನಂತರ, ಟೀಂ ಇಂಡಿಯಾ ನ್ಯೂಜಿಲೆಂಡ್ (IND vs NZ) ವಿರುದ್ಧ ಮೂರು ಪಂದ್ಯಗಳ ಟಿ 20 ಮತ್ತು ಏಕದಿನ ಸರಣಿಯಲ್ಲಿ ಸೆಣಸಲಿದೆ.


ಕಿವೀಸ್​ ಪ್ರವಾಸ ಮಾಡಲಿದೆ ಟೀಂ ಇಂಡಿಯಾ:


ಆಸ್ಟ್ರೇಲಿಯಾದಲ್ಲಿ 2022 ರ ಟಿ 20 ವಿಶ್ವಕಪ್ ನಂತರ, ಟೀಂ ಇಂಡಿಯಾ ನ್ಯೂಜಿಲೆಂಡ್‌ಗೆ ತೆರಳಲಿದೆ. ಅಲ್ಲಿ ನವೆಂಬರ್ 18 ರಂದು ಉಭಯ ತಂಡಗಳ ನಡುವೆ ಟಿ 20 ಅಂತರರಾಷ್ಟ್ರೀಯ ಪಂದ್ಯ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವೆ 13 ದಿನಗಳಲ್ಲಿ ಒಟ್ಟು 6 ಕ್ರಿಕೆಟ್ ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಮೂರು T20Iಗಳು ಮತ್ತು 3 ODIಗಳು ಸೇರಿವೆ. T20 ವಿಶ್ವಕಪ್ 2022ರ ಫೈನಲ್ ಪಂದ್ಯವು ನವೆಂಬರ್ 13 ರಂದು ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಆದ್ದರಿಂದ ಕ್ರಿಕ್‌ಬಜ್ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ವಿಶ್ವಕಪ್ ಮುಗಿದ ನಂತರ ಭಾರತದ ನೇರವಾಗಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ.


ಭಾರತ-ಕಿವೀಸ್​ ಸರಣಿ:


ಭಾರತ vs ನ್ಯೂಜಿಲೆಂಡ್ 1 ನೇ T20I ಶುಕ್ರವಾರ ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂನಲ್ಲಿ ನವೆಂಬರ್ 18 ರಂದು ನಡೆಯಲಿದ್ದು, ಎರಡನೇ T20I ಭಾನುವಾರ 20 ನವೆಂಬರ್ ಮೌಂಟ್ ಮೌಂಗನುಯಿ ಬೇ ಓವಲ್‌ನಲ್ಲಿ ನಡೆಯಲಿದೆ. ಮೂರನೇ ಮತ್ತು ಅಂತಿಮ T20I ನೇಪಿಯರ್‌ನ ಮೆಕ್ಲೀನ್ ಪಾರ್ಕ್‌ನಲ್ಲಿ ಮಂಗಳವಾರ, ನವೆಂಬರ್‌ 22ರಂದು ನಡೆಯಲಿದೆ. ನವೆಂಬರ್ 25ರಂದು ಶುಕ್ರವಾರ ಈಡನ್ ಪಾರ್ಕ್‌ನಲ್ಲಿ ಏಕದಿನ ಸರಣಿ ಆರಂಭವಾಗಲಿದೆ. ಎರಡನೇ ಪಂದ್ಯ ಭಾನುವಾರ ಸೆಡೆನ್ ಪಾರ್ಕ್‌ನಲ್ಲಿ ನವೆಂಬರ್ 27 ರಂದು ನಡೆಯಲಿದೆ. ಸರಣಿಯ ಕೊನೆಯ ಪಂದ್ಯ ಬುಧವಾರ, ನವೆಂಬರ್ 30 ರಂದು ಹ್ಯಾಗ್ಲಿ ಓವಲ್‌ನಲ್ಲಿ ನಡೆಯಲಿದೆ.


ಇದನ್ನೂ ಓದಿ: Virat Kohli: ವಿರಾಟ್ ಕೈಯಲ್ಲಿ ದುಬಾರಿ ವಾಚ್, ಕೊಹ್ಲಿ ಒಮ್ಮೆ ಹೇರ್​ ಕಟ್ ಮಾಡೋ ದುಡ್ಡಲ್ಲಿ ಸ್ಪ್ಲೆಂಡರ್ ಬೈಕೇ ಕೊಳ್ಬೋದಿತ್ತಂತೆ!


ನ್ಯೂಜಿಲೆಂಡ್ ವಿರುದ್ಧದ ಭಾರತ ಪ್ರವಾಸದ ವೇಳಾಪಟ್ಟಿ:


ಟಿ20 ಸರಣಿ: 


1 ನೇ T20I - 18 ನವೆಂಬರ್, ವೆಲ್ಲಿಂಗ್ಟನ್‌ನಲ್ಲಿ
2 ನೇ T20I - 20 ನವೆಂಬರ್, ಮೌಂಟ್ ಮೌಂಗನುಯಿ
3 ನೇ T20I - 22 ನವೆಂಬರ್, ನೇಪಿಯರ್


ಏಕದಿನ ಸರಣಿ:


1 ನೇ ODI - 25 ನವೆಂಬರ್, ಆಕ್ಲೆಂಡ್‌ನಲ್ಲಿ
2 ನೇ ODI - 27 ನವೆಂಬರ್, ಹ್ಯಾಮಿಲ್ಟನ್‌ನಲ್ಲಿ
3 ನೇ ODI - 30 ನವೆಂಬರ್, ಕ್ರೈಸ್ಟ್‌ಚರ್ಚ್‌ನಲ್ಲಿ


ಇದನ್ನೂ ಓದಿ: Shubman Gill: ಏಕದಿನ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಶುಭಮನ್ ಗಿಲ್, ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್


ಟಿ20 ವಿಶ್ವಕಪ್‌ಗೆ ಭಾರತ ತಂಡ:


ರೋಹಿತ್ ಶರ್ಮಾ (ಸಿ), ಕೆಎಲ್ ರಾಹುಲ್ (ವಿಸಿ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಆರ್ ಪಂತ್ (ಡಬ್ಲ್ಯುಕೆ), ದಿನೇಶ್ ಕಾರ್ತಿಕ್ (ಡಬ್ಲ್ಯುಕೆ), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ವೈ ಚಾಹಲ್, ಅಕ್ಷರ್ ಪಟೇಲ್, ಬಿ. ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.


ಸ್ಟ್ಯಾಂಡ್-ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

Published by:shrikrishna bhat
First published: