ಭಾರತ ಮತ್ತು ನ್ಯೂಜಿಲ್ಯಾಂಡ್ ಟಿ20 ಅಂತಾರಾಷ್ಟ್ರೀಯ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡ ಕಿವೀಸ್ ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಭಾರತ ನೀಡಿದ್ದ 235 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡವು 12.1 ಓವರ್ಗಲ್ಲಿ 10 ವಿಕೆಟ್ ನಷ್ಟಕ್ಕೆ 66 ರನ್ ಗಳಿಸುವ ಮೂಲಕ ಹೀನಾಯ ಸೋಲನ್ನಪ್ಪಿತು. ಈ ಮೂಲಕ ಭಾರತ ತಂಡ 168 ರನ್ ಗಳ ಭರ್ಜರಿ ಜಯ ದಾಖಲಿಸಿತು.
ಹಾರ್ದಿಕ್ ಭರ್ಜರಿ ಬೌಲಿಂಗ್:
ಇನ್ನು, ಭಾರತೀಯ ಬೌಲರ್ಗಳು ಇಂದು ಕಿವೀಸ್ ವಿರುದ್ಧ ಭರ್ಜರಿ ಬೌಲಿಂಗ್ ದಾಳಿ ನಡೆಸಿದರು. ಟೀಂ ಇಂಡಿಯಾ ಪರ ನಾಯಕ ಹಾರ್ದಿಕ್ ಪಾಂಡ್ಯ 4 ಓವರ್ ಬಾಲ್ ಮಾಡಿ 16 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದರು. ಉಳಿದಂತೆ ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್ ಮತ್ತು ಶಿವಂ ಮಾವಿ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
𝘼𝙣 𝙚𝙢𝙥𝙝𝙖𝙩𝙞𝙘 𝙫𝙞𝙘𝙩𝙤𝙧𝙮!#TeamIndia win the third and final T20I by 1️⃣6️⃣8️⃣ runs and clinch the #INDvNZ series 2️⃣-1️⃣ 👌
Scorecard - https://t.co/1uCKYafzzD #INDvNZ @mastercardindia pic.twitter.com/QXHSx2J19M
— BCCI (@BCCI) February 1, 2023
ಇನ್ನು, ಭಾರತ ನೀಡಿದ ಬೃಹತ್ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡವು 12.1 ಓವರ್ಗಲ್ಲಿ 10 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 168 ರನ್ಗಳ ಬೃಹತ್ ಮೊತ್ತದ ಸೋಲನ್ನು ಅನುಭವಿಸಿತು. ಕಿವೀಸ್ ಪರ ಫಿನ್ ಅಲೆನ್ 3 ರನ್, ಡೆವೊನ್ ಕಾನ್ವೇ 1 ರನ್, ಮಾರ್ಕ್ ಚಾಪ್ಮನ್ ಶೂನ್ಯ, ಗ್ಲೆನ್ ಫಿಲಿಪ್ಸ್ 2 ರನ್, ಡೇರಿಲ್ ಮಿಚೆಲ್ 35 ರನ್, ಮೈಕೆಲ್ ಬ್ರೇಸ್ವೆಲ್ 8 ರನ್, ಮಿಚೆಲ್ ಸ್ಯಾಂಟ್ನರ್ 13 ರನ್, ಇಶ್ ಸೋಧಿ 0 ರನ್, ಲಾಕಿ ಫರ್ಗುಸನ್ 0 ರನ್, ಬೆನ್ ಲಿಸ್ಟರ್ 0 ರನ್ ಮತ್ತು ಬ್ಲೇರ್ ಟಿಕ್ನರ್ 1 ರನ್ ಗಳಸಲಷ್ಟೇ ಶಕ್ತರಾದರು.
ಇದನ್ನೂ ಓದಿ: Shubman Gill: ಚೊಚ್ಚಲ ಶತಕದಿಂದಲೇ ರೋಹಿತ್-ಕೊಹ್ಲಿ ದಾಖಲೆ ಮುರಿದ ಗಿಲ್, ಈಗ ಭಾರತೀಯರಲ್ಲಿ ಇವರೇ ನಂಬರ್ 1
ಶುಭ್ಮನ್ ಗಿಲ್ ಭರ್ಜರಿ ಶತಕ:
ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಶುಭ್ಮನ್ ಗಿಲ್ ಭರ್ಜರಿ ಶತಕ ಸಿಡಿಸಿದರು. ಅದೂ ಸಹ ಈ ಶತಕ ಗಿಲ್ ಚೊಚ್ಚಲ ಟಿ20 ಶತಕ ಸಿಡಿಸಿದರು. ಶುಭ್ಮನ್ ಗಿಲ್ 63 ಎಸೆತದಲ್ಲಿ 7 ಸಿಕ್ಸ್ ಮತ್ತು 12 ಪೋರ್ ಮೂಲಕ 126 ರನ್ ಗಳಿಸಿ ಅಜೇಯರಾಗಿ ಉಳಿದರು. ಉಳಿದಂತೆ ಭಾರತದ ಪರ ಇಶಾನ್ ಕಿಶನ್ 1 ರನ್, ರಾಹುಲ್ ತ್ರಿಪಾಠಿ 44 ರನ್, ಸೂರ್ಯಕುಮಾರ್ ಯಾದವ್ 24 ರನ್, ನಾಯಕ ಹಾರ್ದಿಕ್ ಪಾಂಡ್ಯ 30 ರನ್, ದೀಪಕ್ ಹೂಡ 2 ರನ್ ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಯಶಸ್ವಿಯಾದರು.
ದಾಖಲೆ ಬರೆದ ಗಿಲ್:
ಇನ್ನು, ಚೊಚ್ಚಲ ಶತಕದ ಮೂಲಕ ಶುಭ್ಮನ್ ಗಿಲ್ ದಿಗ್ಗಜ ಆಟಗಾರರ ದಾಖಲೆಯನ್ನು ಮುರಿದಿದ್ದಾರೆ. ಭಾರತೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ಸ್ಕೋರ್ ಮಾಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಪರ ಟಿ20 ಮಾದರಿಯಲ್ಲಿ ಯಾವುದೇ ಬ್ಯಾಟ್ಸ್‌ಮನ್ ಈವರೆಗೂ 126 ರನ್ ಗಳಿಸಲು ಸಾಧ್ಯವಾಗಿರಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ