ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ 3-0 ಅಂತರದಿಂದ ಗೆಲ್ಲುವ ಮೂಲಕ ಕಿವೀಸ್ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಭಾರತ ತಂಡ (Team India) ಸತತ ಸರಣಿ ಗೆಲುವಿನ ಓಟವನ್ನು ಮುಂದುವರೆಸಿದೆ. ಭಾರತ ನೀಡಿದ 386 ರನ್ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲ್ಯಾಂಡ್ (New Zealand) ತಂಡವು 41.2 ಓವರ್ಗಳಲ್ಲಿ ತನ್ನೆಲ್ಲಾ 10 ವಿಕೆಟ್ಗಳನ್ನು ಕಳೆದುಕೊಂಡು 295 ರನ್ ಗಳಿಸಿತು. ಈ ಮೂಲಕ ಭಾರತವು 90 ರನ್ಗಳ ಭರ್ಜರಿ ಜಯ ದಾಖಲಿಸಿದೆ.
ಟೀಂ ಇಂಡಿಯಾ ದಾಳಿಗೆ ಕಿವೀಸ್ ತತ್ತರ:
ಇನ್ನು, ಭಾರತ ನೀಡಿದ 386 ರನ್ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡವು 41.2 ಓವರ್ಗಳಲ್ಲಿ ತನ್ನೆಲ್ಲಾ 10 ವಿಕೆಟ್ಗಳನ್ನು ಕಳೆದುಕೊಂಡು 295 ರನ್ ಗಳಿಸುವ ಮೂಲಕ 90 ರನ್ಗಳ ಸೋಲನ್ನಪ್ಪಿತು. ಕಿವೀಸ್ ಪರ ಟೀಂ ಇಂಡಿಯಾ ವಿರುದ್ಧ ಇಂದು ಡೆವೊನ್ ಕಾನ್ವೇ ಶತಕದ ಆಟವಾಡಿದರು. ಅವರು 100 ಎಸೆತದಲ್ಲಿ 8 ಸಿಕ್ಸ್ ಮತ್ತು 12 ಪೋರ್ ಮೂಲಕ 138 ರನ್ ಗಳಿಸಿ ಮಿಂಚಿದರು. ಉಳಿದಂತೆ ಫಿನ್ ಅಲೆನ್ ಶೂನ್ಯ, ಹೆನ್ರಿ ನಿಕೋಲ್ಸ್ 42 ರನ್, ಡ್ಯಾರಿಲ್ ಮಿಚೆಲ್ 24 ರನ್, ಟಾಮ್ ಲ್ಯಾಥಮ್ 0 ರನ್, ಗ್ಲೆನ್ ಫಿಲಿಪ್ಸ್ 5 ರನ್, ಮೈಕೆಲ್ ಬ್ರೇಸ್ವೆಲ್ 26 ರನ್, ಮಿಚೆಲ್ ಸ್ಯಾಂಟ್ನರ್ 34 ರನ್, ಲಾಕಿ ಫರ್ಗುಸನ್ 7 ರನ್, ಜಾಕೋಬ್ ಡಫಿ ಶೂನ್ಯ ಮತ್ತು ಬ್ಲೇರ್ ಟಿಕ್ನರ್ 0 ರನ್ ಗಳಿಸಿದರು.
India rise to the top of the @MRFWorldwide ICC Men's ODI Team Rankings with a 3-0 whitewash over New Zealand 💥
Details 👇#INDvNZhttps://t.co/w06fqEcylw
— ICC (@ICC) January 24, 2023
ನ್ಯೂಜಿಲ್ಯಾಂಡ್ ಪರ ಇಂದು ಭಾರತೀಯ ಬೌಲರ್ಗಳು ಭರ್ಜರಿ ಪ್ರದರ್ಶನ ನೀಡಿದರು. ಭಾರತದ ಪರ ಶಾರ್ದೂಲ್ ಠಾಕೂರ್ ಮತ್ತು ಕುಲ್ದೀಪ್ ಯಾದವ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಚಹಾಲ್ 2 ಮತ್ತು ಉಮ್ರಾನ್ ಮಲಿಕ್ 1, ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: Shubman Gill: ಬಾಬರ್ ಅಜಮ್ ದಾಖಲೆ ಮುರಿದ ಗಿಲ್! ಶುಭ್ಮನ್ ಅಬ್ಬರಕ್ಕೆ ರೆಕಾರ್ಡ್ಗಳೆಲ್ಲಾ ಉಡೀಸ್
ರೋಹಿತ್-ಗಿಲ್ ಭರ್ಜರಿ ಶತಕ:
ನಾಯಕ ರೋಹಿತ್ ಶರ್ಮಾ ಸುಮಾರು 3 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ರೋಹಿತ್ 85 ಎಸೆತದಲ್ಲಿ 6 ಸಿಕ್ಸ್ ಮತ್ತು 9 ಪೋರ್ ಮೂಲಕ 101 ರನ್ ಗಳಿಸಿದರೆ, ಶುಭ್ಮನ್ ಗಿಲ್ 78 ಎಸೆತದಲ್ಲಿ 5 ಸಿಕ್ಸ್ ಮತ್ತು 13 ಪೋರ್ಗಳ ಮೂಲಕ 112 ರನ್ ಗಳಿಸಿ ಮಿಂಚಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ 38 ಎಸೆತದಲ್ಲಿ 3 ಸಿಕ್ಸ್ ಮತ್ತು 3 ಬೌಂಡರಿ ಮೂಲಕ 54 ರನ್ ಗಳಿಸಿದರು. ಇನ್ನು, ವಿರಾಟ್ ಕೊಹ್ಲಿ 36 ರನ್, ಇಶಾನ್ ಕಿಶನ್ 17 ರನ್, ಸೂರ್ಯಕುಮಾರ್ ಯಾದವ್ 14 ರನ್, ಶಾರ್ದೂಲ್ ಠಾಕೂರ್ 25 ರನ್, ಕುಲ್ದೀಪ್ ಯಾದವ್ 3 ರನ್ ಮತ್ತು ಉಮ್ರಾನ್ ಮಲಿಕ್ 2 ರನ್ ಗಳಿಸಿದರು.
ಬೌಲಿಂಗ್ನಲ್ಲಿ ಎಡವಿದ ಕಿವೀಸ್:
ಇನ್ನು, ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡ ಭಾರತೀಯರ ಬ್ಯಾಟಿಂಗ್ಗೆ ತತ್ತರಿಸಿತು. ಕಿವೀಸ್ ಪರ ಜಾಕೋಬ್ ಡಫಿ 10 ಓವರ್ ಬಾಲ್ ಮಾಡಿ 100 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಬ್ಲೇರ್ ಟಿಕ್ನರ್ 3 ವಿಕೆಟ್ ಮತ್ತು ಮೈಕೆಲ್ ಬ್ರೇಸ್ವೆಲ್ 1 ವಿಕೆಟ್ ಪಡೆದರು. ಈ ಮೂಲಕ ಕಿವೀಸ್ ಬೌಲಿಂಗ್ ಈ ಸರಣಿಯಲ್ಲಿ ಸಂಪೂರ್ಣ ವಿಫಲವಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ