• Home
  • »
  • News
  • »
  • sports
  • »
  • IND vs NZ: ಗಿಲ್-ರೋಹಿತ್ ಭರ್ಜರಿ ಶತಕ, ಕಿವೀಸ್​ ತಂಡಕ್ಕೆ ಬಿಗ್​ ಟಾರ್ಗೆಟ್​

IND vs NZ: ಗಿಲ್-ರೋಹಿತ್ ಭರ್ಜರಿ ಶತಕ, ಕಿವೀಸ್​ ತಂಡಕ್ಕೆ ಬಿಗ್​ ಟಾರ್ಗೆಟ್​

IND vs NZ

IND vs NZ

IND vs NZ: ಟಾಸ್​ ಸೋತ ಭಾರತ ಮೊದಲು ಬ್ಯಾಟಿಂಗ್​ ಮಾಡುವ ಮೂಲಕ ಕಿವೀಸ್​ ತಂಡಕ್ಕೆ ಬೃಹತ್​ ಮೊತ್ತದ ಟಾರ್ಗೆಟ್​ ನೀಡಿದೆ. ಟೀಂ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385  ರನ್​ಗಳಿಸಿದೆ.

  • Share this:

ಭಾರತ ಮತ್ತು ನ್ಯೂಜಿಲೆಂಡ್ (IND vs NZ) ತಂಡವು ನಡೆಯುತ್ತಿರುವ ಏಕದಿನ ಪಂದ್ಯಗಳ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಇಂದು ಇಂದೋರ್ (Holkar Stadium) ಮೈದಾನದಲ್ಲಿ ನಡೆಯುತ್ತಿದೆ. ಈಗಾಗಲೇ ಟಾಸ್​ ಸೋತ ಭಾರತ ಮೊದಲು ಬ್ಯಾಟಿಂಗ್​ ಮಾಡುವ ಮೂಲಕ ಕಿವೀಸ್​ ತಂಡಕ್ಕೆ ಬೃಹತ್​ ಮೊತ್ತದ ಟಾರ್ಗೆಟ್​ ನೀಡಿದೆ. ಟೀಂ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385  ರನ್​ಗಳಿಸಿದೆ. ಇಂದು ಭಾರತದ ಪರ ಆರಂಭಿಕರಾದ ರೋಹಿತ್ ಶರ್ಮಾ (Rohit Sharma) ಮತ್ತು ಶುಭ್​ಮನ್ ಗಿಲ್ (Shubman Gill)​ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಕಿವೀಸ್ ತಂಡಕ್ಕೆ 386 ರನ್ ಟಾರ್ಗೆಟ್ ನೀಡಿದೆ.


ಗಿಲ್ ​- ರೋಹಿತ್ ಭರ್ಜರಿ ಬ್ಯಾಟಿಂಗ್​:


ಇನ್ನು, ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್​ ಆಸರೆಯಾದರು. ಇಬ್ಬರೂ ದ್ವಿಶತಕದ ಜೊತೆಯಾಟವಾಡುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಸಹಾಯಕರಾದರು. ಭಾರತ 50 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 385 ರನ್ ಗಳಿಸಿದೆ, ಈ ಮೂಲಕ ಕಿವೀಸ್​ ತಂಡಕ್ಕೆ 386 ರನ್ ಟಾರ್ಗೆಟ್​ ನೀಡಿದೆ.ನಾಯಕ ರೋಹಿತ್ ಶರ್ಮಾ ಸುಮಾರು 3 ವರ್ಷಗಳ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ರೋಹಿತ್​ 85 ಎಸೆತದಲ್ಲಿ 6 ಸಿಕ್ಸ್ ಮತ್ತು 9 ಪೋರ್​ ಮೂಲಕ 101 ರನ್​ ಗಳಿಸಿದರೆ, ಶುಭ್​ಮನ್ ಗಿಲ್​ 78 ಎಸೆತದಲ್ಲಿ 5 ಸಿಕ್ಸ್ ಮತ್ತು 13 ಪೋರ್​ಗಳ ಮೂಲಕ 112 ರನ್ ಗಳಿಸಿ ಮಿಂಚಿದರು. ಉಳಿದಂತೆ ಹಾರ್ದಿಕ್​ ಪಾಂಡ್ಯ 38 ಎಸೆತದಲ್ಲಿ 3 ಸಿಕ್ಸ್ ಮತ್ತು 3 ಬೌಂಡರಿ ಮೂಲಕ 54 ರನ್ ಗಳಿಸಿದರು. ಇನ್ನು, ವಿರಾಟ್ ಕೊಹ್ಲಿ 36 ರನ್, ಇಶಾನ್ ಕಿಶನ್ 17 ರನ್, ಸೂರ್ಯಕುಮಾರ್ ಯಾದವ್ 14 ರನ್, ಶಾರ್ದೂಲ್ ಠಾಕೂರ್ 25 ರನ್, ಕುಲ್​ದೀಪ್ ಯಾದವ್ 3 ರನ್ ಮತ್ತು ಉಮ್ರಾನ್ ಮಲಿಕ್​ 2 ರನ್ ಗಳಿಸಿದರು.


ಇದನ್ನೂ ಓದಿ: Rohit Sharma: 1100 ದಿನಗಳ ಬಳಿಕ ಶತಕ, ಕೊಟ್ಟ ಮಾತು ಉಳಿಸಿಕೊಂಡ ರೋಹಿತ್​ ಶರ್ಮಾ


ತತ್ತರಿಸಿದ ಕಿವೀಸ್​ ಬೌಲಿಂಗ್ ದಾಳಿ:


ಇನ್ನು, ಟಾಸ್​ ಗೆದ್ದು ಮೊದಲು ಬೌಲಿಂಗ್ ಮಾಡಿದ ನ್ಯೂಜಿಲ್ಯಾಂಡ್​ ತಂಡ ಭಾರತೀಯರ ಬ್ಯಾಟಿಂಗ್​ಗೆ ತತ್ತರಿಸಿತು. ಕಿವೀಸ್ ಪರ ಜಾಕೋಬ್ ಡಫಿ 10 ಓವರ್​ ಬಾಲ್ ಮಾಡಿ 100 ರನ್ ನೀಡಿ 3 ವಿಕೆಟ್​ ಪಡೆದರು. ಉಳಿದಂತೆ ಬ್ಲೇರ್ ಟಿಕ್ನರ್ 3 ವಿಕೆಟ್​ ಮತ್ತು ಮೈಕೆಲ್ ಬ್ರೇಸ್‌ವೆಲ್ 1 ವಿಕೆಟ್​ ಪಡೆದರು.
ಭಾರತ-ಕಿವೀಸ್ ಪ್ಲೇಯಿಂಗ್ 11:


ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್


ನ್ಯೂಜಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ಕೀಪರ್/ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಜಾಕೋಬ್ ಡಫಿ, ಬ್ಲೇರ್ ಟಿಕ್ನರ್.

Published by:shrikrishna bhat
First published: