• Home
  • »
  • News
  • »
  • sports
  • »
  • IND vs NZ T20: ಕಿವೀಸ್​ ಎದುರು ಶತಕ ಸಿಡಿಸಿ ಅಬ್ಬರಿಸಿದ ಸೂರ್ಯ, ನ್ಯೂಜಿಲ್ಯಾಂಡ್​ಗೆ ಬೃಹತ್ ಮೊತ್ತದ ಟಾರ್ಗೆಟ್

IND vs NZ T20: ಕಿವೀಸ್​ ಎದುರು ಶತಕ ಸಿಡಿಸಿ ಅಬ್ಬರಿಸಿದ ಸೂರ್ಯ, ನ್ಯೂಜಿಲ್ಯಾಂಡ್​ಗೆ ಬೃಹತ್ ಮೊತ್ತದ ಟಾರ್ಗೆಟ್

IND vs NZ

IND vs NZ

IND vs NZ T20: ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸುವ ಮೂಲಕ 192 ರನ್ ಗಳ ಟಾರ್ಗೆಟ್ ನೀಡಿದೆ. 

  • Share this:

ಭಾರತ ಕ್ರಿಕೆಟ್ ತಂಡವು ನ್ಯೂಜಿಲೆಂಡ್ (IND vs NZ) ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವು ಇಂದು ನ್ಯೂಜಿಲ್ಯಾಂಡ್​ನ ಮೌಂಟ್ ಮೌಂಗನುಯಿಯಲ್ಲಿರುವ ಬೇ ಓವಲ್ (Bay Oval) ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಾಸ್​ ಗೆದ್ದಿರುವ ಕಿವೀಸ್​ ನಾಯಕ ಬೌಲಿಂಗ್ ಆಯ್ಕೆ ಮಾಡಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಆರಂಭಿಕ ಆಘಾತ ಎದುರಿಸಿದರೂ ಸೂರ್ಯಕುಮಾರ್ ಯಾದವ್ (Suryakumar Yadav) ಅಬ್ಬರದಿಂದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸುವ ಮೂಲಕ 192 ರನ್ ಗಳ ಟಾರ್ಗೆಟ್ ನೀಡಿದೆ.


ಶತಕ ಸಿಡಿಸಿ ಅಬ್ಬರಿಸಿದ ಸೂರ್ಯ:


ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸುವ ಮೂಲಕ 192 ರನ್ ಗಳ ಟಾರ್ಗೆಟ್ ನೀಡಿದೆ. ಇಂದು ಮತ್ತೆ ಕಿವೀಸ್​ ನೆಲದಲ್ಲಿಯೂ ಸೂರ್ಯಕುಮಾರ್ ಯಾದವ್ ಅಬ್ಬರಿಸಿದ್ದಾರೆ. ನ್ಯೂಜಿಲ್ಯಾಂಡ್​ ವಿರುದ್ಧ ಅಬ್ಬರದ ಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್ 51 ಎಸೆತದಲ್ಲಿ 7 ಸಿಕ್ಸ್ ಮತ್ತು 11 ಪೋರ್​ ಮೂಲಕ 111 ರನ್ ಗಳಿಸಿ ಅಜೇಯರಾಗಿ ಉಳಿದರು.



ಉಳಿದಂತೆ ಇಶನ್ ಕಿಶನ್ 36 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ರಿಷಭ್ ಪಂತ್ ಇಂದೂ ಸಹ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಶ್ರೇಯಸ್​ ಅಯ್ಯರ್ 13 ರನ್, ನಾಯಕ ಹಾರ್ದಿಕ್ ಪಾಂಡ್ಯ 13 ರನ್ ಹಗೂ ದೀಪಕ್ ಹೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ ವಾಷಿಂಗ್ಟನ್ ಸುಂದರ್ ಸಹ ಶೂನ್ಯಕ್ಕೆ ವಿಕೆಟ್ ನೀಡಿದರು.


ಹ್ಯಾಟ್ರಿಕ್ ವಿಕೆಟ್ ಪಡೆದ ಸೌಥಿ:


ಇನ್ನು, ಟಾಸ್​ ಗೆದ್ದು, ಮೊದಲು ಬೌಲಿಂಗ್ ಮಾಡಿದ ಕಿವೀಸ್​ ತಂಡ ಆರಂಭದಲ್ಲಿ ಉತ್ತಮ ದಾಳಿ ನಡೆಸಿದರು. ಆದರೆ ಮಳೆಯ ನಂತರ ಪಂದ್ಯ ಆರಂಭವಾದಾಗ ಭಾರತೀಯ ಬ್ಯಾಟ್ಸ್​ಮನ್​ಗಳು ಅಬ್ಬರಿಸಿದರು. ಆದರೆ ಅಂತಿಮ ಓವರ್​ನಲ್ಲಿ ಕಿವೀಸ್​ನ ಟೀಮ್​ ಸೌಥಿ 4 ಓವರ್​ಗೆ 34 ರನ್ ನೀಡಿ 3 ವಿಕೆಟ್ ಪಡೆದರು. ಇದೂ ಸಹ ಹ್ಯಾಟ್ರಿಕ್ ಪಡೆದರು. ಉಳಿದಂತೆ ಲುಕಿ ಫಗ್ರ್ಯೂಸನ್ 2 ಮತ್ತು ಇಶ್ ಸೌಧಿ 1 ವಿಕೆಟ್ ಪಡೆದು ಮಿಂಚಿದರು.


ಇದನ್ನೂ ಓದಿ: Suryakumar Yadav: ಹೆಚ್ಚಿದ ಸೂರ್ಯಕುಮಾರ್ ಡಿಮ್ಯಾಂಡ್​, ಟೀಂ ಇಂಡಿಯಾ ಮಿ.360 ಆದಾಯ ಕೇಳಿದ್ರೆ ತಲೆ ತಿರುಗೋದು ಗ್ಯಾರೆಂಟಿ!


ಮತ್ತೆ ಸಂಜು ಸ್ಯಾಮ್ಸ್​ನಗೆ ಸಿಗದ ಅವಕಾಶ:


ಹೌದು, ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಆದರೂ ಸಂಜು ಸ್ಯಾಮ್ಸ್​ನ್​ಗೆ ಅವಕಾಶ ದೊರಕಲಿದೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ ಇಂದಿನ ಪಂದ್ಯದಲ್ಲಿಯೂ ಸಂಜು ಸ್ಯಾಮ್ಸ್​ನ್​ಗೆ ಅವಕಾಶ ದೊರಕಲಿಲ್ಲ. ಇವರ ಬದಲು ಶ್ರೇಯಸ್ ಅಯ್ಯರ್​ಗೆ ಸ್ಥಾನ ನೀಡಲಾಗಿದೆ. ಅಲ್ಲದೇ ಕಿವೀಸ್ ವಿರುದ್ಧ ಪಂತ್ ಮತ್ತು ಇಶನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.


ಭಾರತ-ನ್ಯೂಜಿಲ್ಯಾಂಡ್​ ತಂಡ:


ಭಾರತ ತಂಡ: ಇಶಾನ್ ಕಿಶನ್, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ (ನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಸಿರಾಜ್.


ನ್ಯೂಜಿಲ್ಯಾಂಡ್​ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ (wk), ಕೇನ್ ವಿಲಿಯಮ್ಸನ್ (c), ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಲಾಕಿ ಫರ್ಗುಸನ್ ಮತ್ತು ಆಡಮ್ ಮಿಲ್ನೆ.

Published by:shrikrishna bhat
First published: