• Home
  • »
  • News
  • »
  • sports
  • »
  • IND vs NZ: ಇಂದು ಭಾರತ-ಕಿವೀಸ್​ 2ನೇ ಟಿ20 ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs NZ: ಇಂದು ಭಾರತ-ಕಿವೀಸ್​ 2ನೇ ಟಿ20 ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs NZ

IND vs NZ

IND vs NZ 2nd T20: ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ಎರಡನೇ ಪಂದ್ಯದಲ್ಲೂ ಅಪಾಯದ ಮೋಡ ಕವಿದಿದೆ. ಈ ಪಂದ್ಯಕ್ಕೂ ಮುನ್ನ ಮಳೆ ಬರುವ ಸಾಧ್ಯತೆ ಇದೆ. ಒಂದು ವೇಳೆ ಪಂದ್ಯ ನಡೆದರೆ, ಯಾವ ಪ್ಲೇಯಿಂಗ್ ಇಲೆವೆನ್‌ನೊಂದಿಗೆ ಟೀಂ ಇಂಡಿಯಾ ಕೆಳಗಿಳಿಯಬಹುದು ಎಂಬುದನ್ನು ನೋಡೋಣ.

  • Share this:

ಭಾರತ ಕ್ರಿಕೆಟ್ ತಂಡವು ನ್ಯೂಜಿಲೆಂಡ್ (IND vs NZ) ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವನ್ನು ಇಂದು ಆಡಲಿದೆ. ಮೊದಲ ಪಂದ್ಯ ಮಳೆಯಿಂದಾಗಿ (Rain) ರದ್ದಾಗಿದ್ದು, ಎರಡನೇ ಪಂದ್ಯದಲ್ಲೂ ಅಪಾಯದ ಮೋಡ ಕವಿದಿದೆ. ಈ ಪಂದ್ಯಕ್ಕೂ ಮುನ್ನವೇ ಸಂಪೂರ್ಣ ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಪಂದ್ಯ ನಡೆದರೆ, ಯಾವ ಪ್ಲೇಯಿಂಗ್ 11ನೊಂದಿಗೆ ಟೀಂ ಇಂಡಿಯಾ ಕೆಳಗಿಳಿಯಬಹುದು ಎಂಬುದನ್ನು ನೋಡೋಣ. ಈ ಟೂರ್ನಿಗೆ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವಕರಿಗೆ ಅವಕಾಶ ಸಿಕ್ಕಿದೆ. ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ (Rohit Sharma) ಬದಲಿಗೆ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವ ವಹಿಸಿದ್ದಾರೆ. ಈ ಸರಣಿಗೆ ರಿಷಬ್ ಪಂತ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. ಆದರೆ ವಿಕೆಟ್ ಕೀಪರ್ ಜೊತೆ ಓಪನಿಂಗ್ ಬಗ್ಗೆ ಏನೂ ಸ್ಪಷ್ಟವಾಗಿಲ್ಲ.


ಪಂದ್ಯದ ವಿವರ: 


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಟಿ20 ಸರಣಿಯ 2ನೇ ಪಂದ್ಯವು ಇಂದು ನ್ಯೂಜಿಲ್ಯಾಂಡ್​ನ ಮೌಂಟ್ ಮೌಂಗನುಯಿಯಲ್ಲಿರುವ ಬೇ ಓವಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಟಿ20 ಪಂದ್ಯಗಳ ಸರಣಿಯ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 11:30ಕ್ಕೆ ಟಾಸ್ ಮತ್ತು  12 ರಿಂದ ಪಂದ್ಯ ನಡೆಯಲಿವೆ. ಟಿ20 ಪಂದ್ಯಗಳ ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದು. ಹಾಗೂ ಪಂದ್ಯದ ನೇರಪ್ರಸಾರವನ್ನು ಡಿಡಿ ಸ್ಪೋರ್ಟ್ಸ್​ನಲ್ಲಿ ವೀಕ್ಷಿಸಬಹುದು.


ಭಾರತ-ಕಿವೀಸ್​ ಹೆಡ್ ಟು ಹೆಡ್​:


ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳ ನಡುವೆ ಆಡಿದ 22 T20 ಪಂದ್ಯಗಳಲ್ಲಿ, ಎರಡೂ ತಂಡಗಳು ಸಮಾನ ಸಂಖ್ಯೆಯ ಪಂದ್ಯಗಳನ್ನು ಗೆದ್ದಿವೆ. ಉಭಯ ತಂಡಗಳು 9 ಪಂದ್ಯಗಳನ್ನು ಗೆದ್ದಿದ್ದು, ಎರಡು ಪಂದ್ಯಗಳು ಟೈ ಆಗಿವೆ ಮತ್ತು 2 ಪಂದ್ಯ ರದ್ದಾಗಿತ್ತು. ಉಭಯ ತಂಡಗಳು ಸಮಾನವಾಗಿ ಕಾಣುತ್ತಿದ್ದು, ಟೀಂ ಇಂಡಿಯಾ ಹೆಚ್ಚು ಯಂಗ್​ ಪ್ಲೇಯರ್ಸ್​ಗಳಿಂದ ತುಂಬಿದೆ.


ಇದನ್ನೂ ಓದಿ: Andre Russell: ಮೈಮೇಲೆ ಬಟ್ಟೆಯಿಲ್ಲದೇ KKR ಆಟಗಾರನ ಬೆತ್ತಲೆ ಪೋಸ್! ಯಮ್ಮೊ ಯಮ್ಮೊ ನೋಡಿದ್ವಿ ನೋಡಿದ್ವಿ ಎಂದು ಕಾಲೆಳೆದ ಫ್ಯಾನ್ಸ್!


ಪಿಚ್ ವರದಿ:


ಮೌಂಟ್ ಮೌಂಗನುಯಿಯಲ್ಲಿರುವ ಬೇ ಓವಲ್ ಒಂದು ಮೇಲ್ಮೈ ಹೆಚ್ಚು ಸಮತಟ್ಟಾಗಿದೆ. ಇದು ಹಿಂದೆ ಹೆಚ್ಚಿನ ಸಂದರ್ಭಗಳಲ್ಲಿ ಬ್ಯಾಟರ್‌ಗಳಿಗೆ ಸಹಾಯ ಮಾಡಿತ್ತು. ಈ ಸ್ಥಳದಲ್ಲಿ ನಡೆದ ಕೊನೆಯ ಎರಡು T20I ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು ಪಂದ್ಯಗಳನ್ನು ಗೆಲ್ಲುವ ಸಾಧ್ಯತೆ ಇದೆ. ಹೀಗಾಗಿ ಟಾಸ್​ ಗೆದ್ದ ನಾಯಕ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಲಿದೆ.


ಆರಂಭಿಕರಾಗಿ ಯಾರು ಕಣಕ್ಕಿಳಿಯಲಿದ್ದಾರೆ?:


ಶುಭಮನ್ ಗಿಲ್, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಇನ್ನಿಂಗ್ಸ್ ತೆರೆಯುವ ರೇಸ್‌ನಲ್ಲಿದ್ದಾರೆ. ಈ ಮೂವರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಸೂರ್ಯಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ನಾಲ್ಕನೇ ಸ್ಥಾನಕ್ಕಾಗಿ ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಮತ್ತು ದೀಪಕ್ ಹೂಡಾ ನಡುವೆ ಪೈಪೋಟಿ ನಡೆಯಲಿದೆ.


ಇದನ್ನೂ ಓದಿ: Suryakumar Yadav: ಹೆಚ್ಚಿದ ಸೂರ್ಯಕುಮಾರ್ ಡಿಮ್ಯಾಂಡ್​, ಟೀಂ ಇಂಡಿಯಾ ಮಿ.360 ಆದಾಯ ಕೇಳಿದ್ರೆ ತಲೆ ತಿರುಗೋದು ಗ್ಯಾರೆಂಟಿ!


IND vs NZ ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್ 11: ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್/ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್ ಮತ್ತು ಯುಜ್ವೇಂದ್ರ ಚಾಹಲ್.


ನ್ಯೂಜಿಲ್ಯಾಂಡ್​ ಸಂಭಾವ್ಯ ಪ್ಲೇಯಿಂಗ್ 11: ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಲೂಕಿ ಫರ್ಗುಸನ್, ಟಿಮ್ ಸೌಥಿ ಮತ್ತು ಇಶ್ ಸೋಧಿ.

Published by:shrikrishna bhat
First published: