• Home
  • »
  • News
  • »
  • sports
  • »
  • Rohit Sharma: ಮೆಕಲಮ್​ ದಾಖಲೆ ಮುರಿದ ರೋಹಿತ್​, ಟೀಂ ಇಂಡಿಯಾ ಪರ ಹೊಸ ಸಾಧನೆ ಮಾಡಿದ ಹಿಟ್​ಮ್ಯಾನ್

Rohit Sharma: ಮೆಕಲಮ್​ ದಾಖಲೆ ಮುರಿದ ರೋಹಿತ್​, ಟೀಂ ಇಂಡಿಯಾ ಪರ ಹೊಸ ಸಾಧನೆ ಮಾಡಿದ ಹಿಟ್​ಮ್ಯಾನ್

ರೋಹಿತ್​ ಶರ್ಮಾ

ರೋಹಿತ್​ ಶರ್ಮಾ

IND vs NZ ODI: ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ 3 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇದೇ ವೇಳೆ ರೋಹಿತ್​ ಶರ್ಮಾ ಹೊಸ ದಾಖಲೆ ಒಂದನ್ನು ಬರೆದಿದ್ದಾರೆ.

  • Share this:

ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ (Team India) ನಾಯಕ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (Rohit Sharma) ಅರ್ಧಶತಕ ಸಿಡಿಸುವ ಮೂಲಕ ಮತ್ತೆ ಫಾರ್ಮ್​ಗೆ ಮರಳಿರುವ ಸೂಚನೆ ನೀಡಿದ್ದಾರೆ. ಹಿಟ್‌ಮ್ಯಾನ್ 50 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 51 ರನ್ ಗಳಿಸಿದರು. ಇದರೊಂದಿಗೆ ನ್ಯೂಜಿಲೆಂಡ್‌ನ ಮಾಜಿ ಪವರ್ ಹಿಟರ್ ಬ್ಯಾಟರ್ ಬ್ರೆಂಡನ್ ಮೆಕಲಮ್ (Brendon McCullum) ದಾಖಲೆಯನ್ನು ರೋಹಿತ್ ಮುರಿದಿದ್ದಾರೆ.


ಮೆಕಲಮ್​ ದಾಖಲೆ ಮುರಿದ ಹಿಟ್​ಮ್ಯಾನ್:


ಹೌದು, ರೋಹಿತ್ ತವರಿನಲ್ಲಿ ಆಡುವಾಗ ಏಕದಿನಗಳಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸುವ ವಿಷಯದಲ್ಲಿ ಮೂರನೇ ಸ್ಥಾನವನ್ನು ತಲುಪಿದ್ದಾರೆ. ಈ ಇನ್ನಿಂಗ್ಸ್ ನಂತರ, ಅವರು ಭಾರತದಲ್ಲಿ 127 ಸಿಕ್ಸರ್​ಗಳನ್ನು ಸಿಡಿಸಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಆಡುವಾಗ ಮೆಕಲಮ್ ಏಕದಿನದಲ್ಲಿ 126 ಸಿಕ್ಸರ್‌ಗಳನ್ನು ಬಾರಿಸಿದ್ದರು. ಅದೇ ಸಮಯದಲ್ಲಿ, ಈ ಸಂದರ್ಭದಲ್ಲಿ, ಕ್ರಿಸ್ ಗೇಲ್ 147 ಸಿಕ್ಸರ್​ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ ಮತ್ತು ಮಾರ್ಟಿನ್ ಗಪ್ಟಿಲ್ 132 ಸಿಕ್ಸರ್​ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.


ಹಿಟ್‌ಮ್ಯಾನ್ ಏಕದಿನದಲ್ಲಿ 267 ಸಿಕ್ಸರ್‌:


ಏಕದಿನ ಮಾದರಿಯಲ್ಲಿ ಒಟ್ಟಾರೆ ಸಿಕ್ಸರ್ ಬಾರಿಸಿದವರ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್ 4ನೇ ಸ್ಥಾನದಲ್ಲಿದ್ದಾರೆ. ಅವರ ಹೆಸರಿನಲ್ಲಿ 267 ಸಿಕ್ಸರ್‌ಗಳಿವೆ. ಶಾಹಿದ್ ಅಫ್ರಿದಿ ಗರಿಷ್ಠ 351 ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದಾರೆ. ಅದೇ ಸಮಯದಲ್ಲಿ, ಕೆರಿಬಿಯನ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ 331 ಸಿಕ್ಸರ್‌ಗಳನ್ನು ಬಾರಿಸಿರುವ ಎರಡನೇ ಸ್ಥಾನದಲ್ಲಿದ್ದಾರೆ. 270 ಸಿಕ್ಸರ್ ಸಿಡಿಸಿರುವ ಶ್ರೀಲಂಕಾದ ಸನತ್ ಜಯಸೂರ್ಯ ಮೂರನೇ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ: ICC ODI Ranking: ಭಾರತದ ಗೆಲುವಿನಿಂದ ಆಸ್ಟ್ರೇಲಿಯಾಕ್ಕೆ ಬಿಗ್ ಶಾಕ್, ಕಿವೀಸ್ ಸೋಲಿನಿಂದ ಬದಲಾಯ್ತು ಆಂಗ್ಲರ ಲಕ್!


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ಇಂದೋರ್‌ನಲ್ಲಿ ಜನವರಿ 24 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಸನತ್ ಜಯಸೂರ್ಯ ಅವರ ದಾಖಲೆಯನ್ನು ಮುರಿಯುವ ಅವಕಾಶ ಹಿಟ್‌ಮ್ಯಾನ್‌ಗೆ ಲಭಿಸಲಿದೆ. ರಾಯ್‌ಪುರ ಏಕದಿನ ಪಂದ್ಯದ ಕುರಿತು ಮಾತನಾಡುತ್ತಾ, 109 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಜೋಡಿ ಅತ್ಯುತ್ತಮ ಆರಂಭವನ್ನು ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 72 ರನ್ ಸೇರಿಸಿದರು.


ಶುಭಮನ್ ಗಿಲ್ 53 ಎಸೆತಗಳಲ್ಲಿ 6 ಬೌಂಡರಿ ಒಳಗೊಂಡ ಅಜೇಯ 40 ರನ್ ಗಳಿಸಿದರು. ಮೊದಲ ಏಕದಿನ ಪಂದ್ಯದಲ್ಲಿ ಗಿಲ್ ದ್ವಿಶತಕ ಬಾರಿಸಿದ್ದರು. ಅವರು 149 ಎಸೆತಗಳಲ್ಲಿ 208 ರನ್ ಗಳಿಸಿದರು. ಇದರಲ್ಲಿ 19 ಬೌಂಡರಿ ಹಾಗೂ 9 ಸಿಕ್ಸರ್‌ಗಳು ಸೇರಿದ್ದವು. ಈ ಪಂದ್ಯವನ್ನು ಭಾರತ 12 ರನ್‌ಗಳಿಂದ ಗೆದ್ದುಕೊಂಡಿತ್ತು.
ಮೈದಾನಕ್ಕೇ ನುಗ್ಗಿದ ರೋಹಿತ್‌ ಅಭಿಮಾನಿ:


ಇಂದು ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ 2ನೇ ಏಕದಿನ ಪಂದ್ಯದ ವೇಳೆ ಹಿಟ್‌ಮ್ಯಾನ್‌ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ವೇಗವಾಗಿ ಓಡಿ ರೋಹಿತ್‌ನನ್ನು ತಬ್ಬಿಕೊಂಡ ಘಟನೆ ನಡೆದಿದೆ. ಅದೇ ವೇಳೆ ರೋಹಿತ್​ ಸಹ ಅಭಿಮಾನಿಯನ್ನು ನಿರಾಸೆ ಮಾಡಲಿಲ್ಲ. ರೋಹಿತ್ ಶರ್ಮಾ ಅಭಿಮಾನಿ ಓಡಿ ಬಂದ ತಬ್ಬಿಕೊಂಡ ಬಳಿ ರೋಹಿತ್​ ಅವರನನ್ನು ತಬ್ಬಿಕೊಂಡ ಘಟನೆ ನಡೆಯಿತು.


ಆದರೆ ಮೈದಾನದ ಸಿಬ್ಬಂದಿ ಬೇಗನೆ ಬಂದು ಆ ಬಾಲಕನ್ನು ಮೈದಾನದಿಂದ ಹೊರಗೆ ಕರೆದುಕೊಂದು ಹೋದರು. ಭಾರತೀಯ ನಾಯಕನ ಈ ಮುಗ್ದ ಹೃದಯವನ್ನು ನೋಡಿದ ನಂತರ, ಅಭಿಮಾನಿಗಳು ಮತ್ತೊಮ್ಮೆ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಹೊಗಳುತ್ತಿದ್ದಾರೆ. ಅಲ್ಲದೇ ಇಂದಿನ ಪಂದ್ಯ ಗೆಲ್ಲುವ ಮೂಲಕ ಭಾರತ ಐಸಿಸಿ ಶ್ರೇಯಾಂಕದಲ್ಲಿ 4ನೇ ಸ್ಥಾನದಿಂದ 3ನೇ ಸ್ಥಾನಕ್ಕೇರಿದೆ. ಈ ಮೂಲಕ ಮುಂದಿನ ಪಂದ್ಯವನ್ನು ಗೆದ್ದಲ್ಲಿ, ನಂಬರ್ 1 ಸ್ಥಾನಕ್ಕೆ ತಲುಪಲಿದೆ.

Published by:shrikrishna bhat
First published: