ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಕ್ರಿಕೆಟ್ (IND vs NZ) ತಂಡ ಸೋಲನ್ನಪ್ಪಿದೆ. ಎರಡನೇ ಪಂದ್ಯ ಭಾನುವಾರ (ನಾಳೆ) ನಡೆಯಲಿದ್ದು, ಇಲ್ಲಿ ಗೆದ್ದು ಭಾರತ (Team india) ಸರಣಿಯನ್ನು ಜೀವಂತವಾಗಿರಿಸಕೊಲ್ಳುವ ತವಕದಲ್ಲಿದೆ. ಈ ಪಂದ್ಯಕ್ಕೂ ಮುನ್ನ ಭಾರತ ತಂಡದ ಆಟದ ಬಗ್ಗೆ ಚರ್ಚೆ ನಡೆಯುತ್ತಿದೆ. ವಿಕೆಟ್ಕೀಪರ್ ರಿಷಬ್ ಪಂತ್ (Rishabh Pant) ಮತ್ತು ಸಂಜು ಸ್ಯಾಮ್ಸನ್ (Sanju Samson) ಅವರನ್ನು ಕೈಬಿಡಬಾರದು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಬೌಲಿಂಗ್ನಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ.
ಪಂದ್ಯದ ವಿವರ:
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಪಂದ್ಯ ನಾಳೆ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದೆ. ಹಾಗಾಗಿ 6.30ಕ್ಕೆ ಟಾಸ್ ಆಗಲಿದೆ. ಟೀಂ ಇಂಡಿಯಾವನ್ನು ನಾಯಕ ಶಿಖರ್ ಧವನ್ ಮುನ್ನಡೆಸಿದರೆ ಮತ್ತು ಕೇನ್ ವಿಲಿಯಮ್ಸನ್ ಕಿವೀಸ್ ನಾಯಕರಾಗಿದ್ದಾರೆ. ನಾಳಿನ ಪಂದ್ಯವು ಸೆಡನ್ ಪಾರ್ಕ್, ಹ್ಯಾಮಿಲ್ಟನ್ ನಲ್ಲಿ ನಡೆಯಲಿದೆ. ಈ ಪಂದ್ಯವನ್ನು ನೀವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಅಧಿಕೃತ ಪ್ರಸಾರವಾಗಿದೆ. ಆದ್ದರಿಂದ, ಸರಣಿಯನ್ನು ಪ್ರೈಮ್ ವಿಡಿಯೋ ಅಪ್ಲಿಕೇಶನ್ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ.
The action moves to Hamilton as #TeamIndia gear up for the 2️⃣nd #NZvIND ODI 💪🏻 pic.twitter.com/en0JK5LZBb
— BCCI (@BCCI) November 26, 2022
ಈ ಸ್ಥಳದಲ್ಲಿ ಆಡಿದ ಕೊನೆಯ ಕೆಲವು ಪಂದ್ಯಗಳಲ್ಲಿ ಸೆಡನ್ ಪಾರ್ಕ್ ಬ್ಯಾಟರ್ಗಳಿಗೆ ಅತ್ಯುತ್ತಮ ಬೆಂಬಲವನ್ನು ನೀಡಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಒಟ್ಟು 275 ಸ್ಪರ್ಧಾತ್ಮಕ ಸ್ಕೋರ್ ಮಾಡುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಈ ಪಿಚ್ ವೇಗಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ ನಾಳೆ ಪಂದ್ಯದ ಮೇಲೆ ಮಳೆಯ ಪರಿಣಾಮ ಹೆಚ್ಚಿದ್ದು, ಸಂಪೂರ್ಣ ಪಂದ್ಯ ರದ್ದಾದರೂ ಅಚ್ಚರಿಯಿಲ್ಲ.
ತಂಡದಲ್ಲಿ ಬದಲಾವಣೆ ಸಾಧ್ಯತೆ:
ಇನ್ನು, ಮೊದಲ ಪಂದ್ಯದ ಸೋಲಿನ ಬಳಿಕ ಇದೀಗ ನಾಯಕ ಶಿಖರ್ ಧವನ್ ನಾಳಿನ 2ನೇ ಪಂದ್ಯದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಅದರಂತೆ ಬ್ಯಾಟಿಂಗ್ ವಿಭಾಗದಲ್ಲಿ ಕಳೆದ ಪಂದ್ಯದ ಪ್ಲೇಯರ್ಗಳೇ ಇರಲಿದ್ದು, ಬೌಲಿಂಗ್ನಲ್ಲಿ 2 ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಅದರಂತೆ ಚಹಾಲ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ನಾಳೆ ತಂಡದಿಂದ ಕೈಬಿಡುವ ಸಾಧ್ಯತೆ ಇದೆ. ಆದರೆ ಇವರ ಬದಲಿಗೆ ಯಾವ ಆಟಗಾರನಿಗೆ ಅವಕಾಶ ದೊರಕಲಿದೆ ಎಂದು ಕಾದುನೋಡಬೇಕಿದೆ.
IND vs NZ ಸಂಭಾವ್ಯ ಪ್ಲೇಯಿಂಗ್ 11:
ಭಾರತ ಸಂಭಾವ್ಯ ಪ್ಲೇಯಿಂಗ್ 11: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್/ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್/ಕುಲದೀಪ್ ಯಾದವ್
ನ್ಯೂಜಿಲ್ಯಾಂಡ್ ಸಂಭಾವ್ಯ ಪ್ಲೇಯಿಂಗ್ 11: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಡೆವೊನ್ ಕಾನ್ವೇ, ಟಾಮ್ ಲೇಥಮ್, ಡಾರೆಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ