ಭಾರತ ಮತ್ತು ನ್ಯೂಜಿಲ್ಯಾಂಡ್ (IND vs NZ) ನಡುವಿನ 3 ಪಂದ್ಯಗಳ ಸರಣಿಯ ಎರಡನೇ ODI ನಲ್ಲಿ ಟಾಸ್ ಗೆದ್ದ ನಂತರ ನ್ಯೂಜಿಲೆಂಡ್ ತಂಡದ ನಾಯಕ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಹ್ಯಾಮಿಲ್ಟನ್ನ ಸಿಡಾನ್ ಪಾರ್ಕ್ನಲ್ಲಿ (Seddon Park) ಈ ಪಂದ್ಯ ನಡೆಯುತ್ತಿದೆ. ಈ ಪಂದ್ಯಕ್ಕಾಗಿ ಟೀಂ ಇಂಡಿಯಾ (Team India) ಪ್ಲೇಯಿಂಗ್ ಇಲೆವೆನ್ ನಲ್ಲಿ ಎರಡು ಬದಲಾವಣೆ ಮಾಡಿದೆ. ಇದರಲ್ಲಿ ಶಾರ್ದೂಲ್ ಠಾಕೂರ್ ಮತ್ತು ಸಂಜು ಸ್ಯಾಮ್ಸನ್ (Sanju Samson) ಅವರನ್ನು ಇಂದು ತಂಡದಿಂದ ಕೈಬಿಡಲಾಗಿದೆ. ಈ ಮೂಲಕ ಮಾಡು ಇಲ್ಲವೇ ಮಡಿ ಎಂಬಂತಹ ಮಹತ್ವದ ಪಂದ್ಯದಲ್ಲಿ ಮತ್ತೊಮ್ಮೆ ಸ್ಯಾಮ್ಸನ್ಗೆ ನಿರಾಸೆಯಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಹಾಗೂ ಅನೇಖ ಹಿರಿಯ ಕ್ರಿಕೆಟಿಗರು ಈ ವಿಚಾರವಾಗಿ ಸಾಮಾಜಿ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪಂದ್ಯಕ್ಕೆ ಮಳೆ ಅಡ್ಡಿ:
ಭಾರತ ಮತ್ತು ನ್ಯೂಜಿಲೆಂಡ್ ಎರಡನೇ ODI ನಲ್ಲಿ ಮಳೆಯಿಂದಾಗಿ ಆಟವನ್ನು ನಿಲ್ಲಿಸಲಾಗಿದೆ. ಆಟ ನಿಲ್ಲಿಸುವ ಹೊತ್ತಿಗೆ ಭಾರತ 4.5 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿತ್ತು. ಆರಂಭಿಕರಾದ ಶುಭಮನ್ ಗಿಲ್ 19 ರನ್ ಗಳಿಸಿ ಆಡುತ್ತಿದ್ದರೆ, ನಾಯಕ ಶಿಖರ್ ಧವನ್ 2 ರನ್ ಗಳಿಸಿ ಅಜೇಯರಾಗಿದ್ದಾರೆ. ಸದ್ಯ ಹ್ಯಾಮಿಲ್ಟನ್ ನಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಿರುವಾಗ ಈಗ ಮತ್ತೆ ಆಟ ಶುರುವಾಗಲಿದೆಯೇ ಎಂಬು ಅನುಮಾನ ಮೂಡಿದೆ.
🚨 Team News 🚨
2⃣ changes for #TeamIndia as @HoodaOnFire & @deepak_chahar9 are named in the team. #NZvIND
Follow the match 👉 https://t.co/frOtF82cQ4
A look at our Playing XI 🔽 pic.twitter.com/MnkwOy6Qde
— BCCI (@BCCI) November 27, 2022
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಪಂದ್ಯ ಹ್ಯಾಮಿಲ್ಟನ್ನ ಸಿಡಾನ್ ಪಾರ್ಕ್ನಲ್ಲಿ ಆರಂಭವಾಗಿದೆ. ಈ ಪಂದ್ಯವನ್ನು ನೀವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಅಧಿಕೃತ ಪ್ರಸಾರವಾಗಿದೆ. ಆದ್ದರಿಂದ, ಸರಣಿಯನ್ನು ಪ್ರೈಮ್ ವಿಡಿಯೋ ಅಪ್ಲಿಕೇಶನ್ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ.
ಭಾರತ-ಕಿವೀಸ್ ಹೆಡ್ ಟು ಹೆಡ್:
ಇನ್ನು, ಆತಿಥೇಯರು ಮೇಲುಗೈ ಹೊಂದಿರುವ ಹ್ಯಾಮಿಲ್ಟನ್ನಲ್ಲಿ ನಡೆದ ODIಗಳಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 7 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 6 ಪಂದ್ಯಗಳನ್ನು ಕಿವೀಸ್ ಗೆದ್ದುಕೊಂಡಿದ್ದರೆ ಟೀಂ ಇಂಡಿಯಾ 1 ಗೆಲುವನ್ನು ಸಾಧಿಸಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಇಲ್ಲಿ ನಡೆದ ಏಕೈಕ ಏಕದಿನ ಪಂದ್ಯವನ್ನು ಗೆದ್ದಿದೆ. ಆದರೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಒಟ್ಟು 111 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಟೀಮ್ ಇಂಡಿಯಾ 55 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ 50 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಟೈ ಆಗಿದ್ದರೆ 5 ಪಂದ್ಯಗಳು ರದ್ದಾಗಿವೆ.
ಇದನ್ನೂ ಓದಿ: Sanju Samson: ಸಂಜು ಸ್ಯಾಮ್ಸನ್ಗೆ ಮತ್ತೊಮ್ಮೆ ಅನ್ಯಾಯ, ಮಹತ್ವದ ಸರಣಿಯಿಂದ ಔಟ್
ಭಾರತ-ನ್ಯೂಜಿಲ್ಯಾಂಡ್ ಪ್ಲೇಯಿಂಗ್ 11:
ಭಾರತ ತಂಡ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ದೀಪಕ್ ಚಾಹರ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್
ನ್ಯೂಜಿಲ್ಯಾಂಡ್ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಮೈಕೆಲ್ ಬ್ರೇಸ್ವೆಲ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲಾಕಿ ಫರ್ಗುಸನ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ