• Home
  • »
  • News
  • »
  • sports
  • »
  • IND vs NZ : 3ನೇ ಪಂದ್ಯಕ್ಕೆ ಮಳೆ ಅಡ್ಡಿ, ಡ್ರಾನಲ್ಲಿ ಅಂತ್ಯ; ಭಾರತಕ್ಕೆ ಸರಣಿ ಜಯ

IND vs NZ : 3ನೇ ಪಂದ್ಯಕ್ಕೆ ಮಳೆ ಅಡ್ಡಿ, ಡ್ರಾನಲ್ಲಿ ಅಂತ್ಯ; ಭಾರತಕ್ಕೆ ಸರಣಿ ಜಯ

ಭಾರತಕ್ಕೆ ಸರಣಿ ಜಯ

ಭಾರತಕ್ಕೆ ಸರಣಿ ಜಯ

IND vs NZ: ಮಳೆ ಬಂದ ಕಾರಣ ಪಂದ್ಯವನ್ನು ಟೈ ಎ ಂದು ಘೋಷಿಸಲಾಗಿದ್ದು, ಈ ಮೂಲಕ ಭಾರತವು 3 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ.

  • Share this:

ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ಕ್ರಿಕೆಟ್ ತಂಡಗಳು ನೇಪಿಯರ್‌ನಲ್ಲಿ ಸರಣಿಯ ಮೂರನೇ ಮತ್ತು ಕೊನೆಯ ಟಿ20 ಪಂದ್ಯ ನೇಪಿಯರ್‌ನ ಮ್ಯಾಕ್ಲೀನ್ ಪಾರ್ಕ್‌ನಲ್ಲಿ (Mclean Park) ಇಂದು ಮುಖಾಮುಖಿಯಾಗಿದ್ದವು. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್​ ತಂಡವು 19.4 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಭಾರತ ತಂಡವು 9 ಓವರ್​ಗೆ 4 ವಿಕೆಟ್ ನಷ್ಟಕ್ಕೆ 75 ರನ್ ಗಳಿತು. ಈ ವೇಳೆ ಮಳೆ ಬಂದ ಕಾರಣ ಪಂದ್ಯವನ್ನು ಟೈ ಎ ಂದು ಘೋಷಿಸಲಾಗಿದ್ದು, ಈ ಮೂಲಕ ಭಾರತವು 3 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ.


ಮಳೆಯಿಂದ ಪಂದ್ಯ ಡ್ರಾ:


ಇನ್ನು, ಮೊದಲಾರ್ಧದಲ್ಲಿ ಮಳೆ ಯಾವುದೇ ಕಾಟ ನೀಡಲಿಲ್ಲ. ಆಧರೆ ಭಾರತದ ಬ್ಯಾಟಿಂಗ್ ವೇಳೆ ಮಳೆಯ ಕಾರಣದಿಂದ ಪಂದ್ಯ ಮತ್ತೆ ಆರಂಭಿಸಲು ಸಾಧ್ಯವಾಗದ ಕಾರಣ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಈ ಮೂಲಕ ಭಾರತ 3 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದಿದೆ. . ಪಂದ್ಯ ಸ್ಥಗಿತಗೊಂಡಾಗ ಭಾರತ 9 ಓವರ್‌ಗಳಲ್ಲಿ 4 ವಿಕೆಟ್‌ಗೆ 75 ರನ್ ಗಳಿಸಿತ್ತು. ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತ ಗುರಿಗೆ ಸಮನಾಗಿತ್ತು ಮತ್ತು ಆದ್ದರಿಂದ ಪಂದ್ಯವನ್ನು ಟೈ ಎಂದು ಘೋಷಿಸಲಾಯಿತು. ಅಲ್ಲದೇ ಮಳೆಯಿಂದಾಗಿ ಮೊದಲ ಟಿ20 ಪಂದ್ಯ ನಡೆಯಲಿಲ್ಲ. ಎರಡನೇ ಟಿ20ಯಲ್ಲಿ ಭಾರತ 65 ರನ್‌ಗಳ ಜಯ ಸಾಧಿಸಿತ್ತು.ಆರಂಭಿಕ ಆಘಾತ ಅನುಭವಿಸಿದ್ದ ಭಾರತ:


ಇನ್ನು, ಕಿವೀಸ್​ ನೀಡಿದ 161 ರನ್ ಟಾರ್ಗೆಟ್​ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಘಾತ ಉಂಟಾಯಿತು. ಭಾರತದ ಪರ ಇಶಾನ್ ಕಿಶನ್ 10 ರನ್ ಗಳಿಸಿದರೆ ಮತ್ತೊಮ್ಮೆ ರಿಷಭ್ ಪಂತ್​ ಅವಕಾಶ ನೀಡಿದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಪಂತ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಲ್ಲದೇ ಶ್ರೇಯಸ್​ ಅಯ್ಯರ್ ಶೂನ್ಯಕ್ಕೆ ವಿಕೆಟ್ ಆದರೆ, ಕಳೆದ ಪಂದ್ಯದ ಹೀರೋ ಸೂರ್ಯಕುಮಾರ್ ಯಾದವ್ 13 ರನ್ ಗಳಿಸಿ ಔಟ್​ ಆದರು. ಮಳೆ ಬರುವ ವೇಳೆ ಕ್ರೀಸ್​ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ 30 ರನ್ ಮತ್ತು ದೀಪಕ್ ಹೂಡ 9 ರನ್ ಗಳಿಸಿದ್ದರು.


ಇದನ್ನೂ ಓದಿ: FIFA World Cup 2022: ಬೆಡ್​​ರೂಮಿನಲ್ಲಿ ವಿಶ್ವಕಪ್​ ಜೊತೆ ಮಾಡೆಲ್​ ಪೋಸ್, ಸೋಶಿಯಲ್​ ಮೀಡಿಯಾದಿಂದ ದೂರವಿರಿ ಎಂದ ನೆಟ್ಟಿಗರು


ಉತ್ತಮ ಆರಂಭ ಪಡೆದಿದ್ದ ಕಿವೀಸ್​:


ನ್ಯೂಜಿಲ್ಯಾಂಡ್​ ತಂಡ ಇಂದಿನ ಪಂದ್ಯದಲ್ಲಿ ಆರಂಭಿಕ ಹಂತದಲ್ಲಿ ಭಾರತದ ವಿರುದ್ಧ ಮೇಲುಗೈ ಸಾಧಿಸಿತ್ತು. ಕಿವೀಸ್​ ಪರ ನಾಯಕ ಟೀಮ್ ಸೌಥಿ 2 ವಿಕೆಟ್ ಪಡೆದರೆ, ಲುಕಿ ಪ್ರಗ್ರ್ಯೂಸನ್ ಮತ್ತು ಇಶ್ ಸೌಧಿ ತಲಾ 1 ವಿಕೆಟ್ ಪಡೆದು ಮಿಂಚಿದರು.


ಭರ್ಜರಿ ಬೌಲಿಂಗ್ ಮಾಡಿದ್ದ ಟೀಂ ಇಂಡಿಯಾ:


ಇನ್ನು, ಟಾಸ್​ ಸೋತು ಮೊದಲು ಬೌಲಿಂಗ್ ಮಾಡಿದ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿತು. ಭಾರತದ ಪರ ಅರ್ಷದೀಪ್ ಸಿಂಗ್​ 4 ಓವರ್ ಮಾಡಿ 37 ರನ್ ನೀಡಿ 4 ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್ ಸಹ 4 ಓವರ್​ಗೆ ಕೇವಲ 17 ರನ್ ನೀಡಿ 4 ವಿಕೆಟ್​ ಪಡೆದು ಮಿಂಚಿದರು. ಹರ್ಷಲ್ ಪಟೇಳ್ ಸಹ 1 ವಿಕೆಟ್ ಪಡೆದರು.


ಕಿವೀಸ್​ ವಿರುದ್ಧ ODI ಸರಣಿ ಯಾವಾಗಿನಿಂದ ಆರಂಭ?:


ಟಿ20 ಸರಣಿಯನ್ನು ಭಾರತ ತಂಡ ಗೆದ್ದು ಬೀಗಿದೆ. ಅದರಂತೆ ಇದೀಗ ನವೆಂಬರ್​ನಿಂದ 25ರಿಂದ ಕಿವೀಸ್​ ವಿರುದ್ಧ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಗೆ ಶಿಖರ್ ಧವನ್ ನಾಯಕರಾಗಿ ಆಯ್ಕೆ ಆಗಿದ್ದು, ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.

Published by:shrikrishna bhat
First published: