• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • MS Dhoni: ಟೀಂ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಧೋನಿ, ಡ್ರೆಸ್ಸಿಂಗ್ ರೂಂಗೆ ಎಂಟ್ರಿ ಕೊಟ್ಟಿದ್ದೇಕೆ ಕ್ಯಾಪ್ಟನ್​ ಕೂಲ್?

MS Dhoni: ಟೀಂ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಧೋನಿ, ಡ್ರೆಸ್ಸಿಂಗ್ ರೂಂಗೆ ಎಂಟ್ರಿ ಕೊಟ್ಟಿದ್ದೇಕೆ ಕ್ಯಾಪ್ಟನ್​ ಕೂಲ್?

ಧೋನಿ

ಧೋನಿ

IND vs NZ T20: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯು ಜನವರಿ 27 ರಿಂದ ಆರಂಭವಾಗಲಿದೆ. ತಂಡದ ಎಲ್ಲಾ ಆಟಗಾರರನ್ನು ಮೊದಲ ಪಂದ್ಯಕ್ಕಾಗಿ ರಾಂಚ್‌ಗೆ ತಲುಪಿದೆ.

  • Share this:

ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಭಾರತವು ನ್ಯೂಜಿಲೆಂಡ್‌ಗೆ (IND vs NZ) ದೊಡ್ಡ ಆಘಾತ ನೀಡಿದೆ. ಇದೀಗ ಭಾರತ ತಂಡ 3 ಪಂದ್ಯಗಳ ಟಿ20 ಸರಣಿಗಾಗಿ ಭರ್ಜರಿ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಉಭಯ ತಂಡಗಳು ಈಗಾಗಳೇ ರಾಂಚಿಯನ್ನು (Ranchi) ತಲುಪಿದ್ದು, ಸರಣಿಯ ಮೊದಲ ಪಂದ್ಯ ಜನವರಿ 27 ರಂದು ನಡೆಯಲಿದೆ. ಇನ್ನು, ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರ ಊರು ರಾಂಚಿಯಾಗಿದ್ದು, ಇದೇ ಕಾರಣಕ್ಕೆ ಧೋನಿ ಸಹ ಪಂದ್ಯಕ್ಕೂ ಮುನ್ನ ಆಭರತ ತಂಡದ ಸದಸ್ಯರನ್ನು ಭೇಟಿಯಾಗಿದ್ದಾರೆ. ಈ ವೇಳೆಯ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.


ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಂನಲ್ಲಿ ಧೋನಿ:


ಎಂಎಸ್ ಧೋನಿ ಅವರನ್ನು ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಪಂದ್ಯದ ಕೊನೆಯ ಓವರ್‌ವರೆಗೂ ಧೋನಿ ಇದ್ದರೆ ಪಂದ್ಯ ಗೆಲ್ಲುತ್ತೇವೆ ಎಂಬ ನಂಬಿಕೆಯೊಂದಿತ್ತು. ಇದೀಗ ಅದೇ ರೀತಿ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯಕ್ಕೂ ಮುನ್ನ ಧೋನಿ ಟೀಂ ಇಂಡಿಯಾ ಜೊತೆ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಮತ್ತೊಂದು ಸರಣಿ ಜಯವನ್ನು ನಿರೀಕ್ಷೆಸುತ್ತಿದ್ದಾರೆ.ಈಗಾಗಲೇ ಟೀಂ ಇಂಡಿಯಾದ ಎಲ್ಲಾ ಆಟಗಾರರು ರಾಂಚಿ ತಲುಪಿದ್ದಾರೆ. ಹೀಗಾಗಿ ಎಂಎಸ್ ಧೋನಿ ಟೀಂ ಇಂಡಿಯಾ ಆಟಗಾರರನ್ನು ಭೇಟಿ ಮಾಡಲು ಎಲ್ಲಿಗೆ ಬಂದಿದ್ದರು. ಮಾಹಿ ತಂಡದ ಆಟಗಾರರೊಂದಿಗೆ ಸಂವಾದ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಂಎಸ್ ಧೋನಿ ಯುವ ತಂಡದಲ್ಲಿ ತುಂಬಾ ಸಂತೋಷದಿಂದ ಕಂಡುಬಂದಿದೆ.


ಭಾರತ - ನ್ಯೂಜಿಲ್ಯಾಂಡ್​ ಟಿ20 ತಂಡಗಳು:


ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ) , ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಪೃಥ್ವಿ ಶಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಯಾ ಸುಂದರವ್, ಕುಲ್ದೀಪ್ ಯಾ ಸುಂದರವ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ ಮತ್ತು ಮುಖೇಶ್ ಕುಮಾರ್.
ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ) , ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇನ್ ಕ್ಲೀವರ್, ಡೆವೊನ್ ಕಾನ್ವೇ, ಶೇನ್ ಡಫಿ, ಲಾಕಿ ಫರ್ಗುಸನ್, ಬೆನ್ ಲಿಸ್ಟರ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕಲ್ ರಿಪ್ಪನ್, ಹೆನ್ರಿ ಶಿಪ್ಲಿ, ಇಶ್ ಟಿ ಸೋಧಿನರ್.


ಐಪಿಎಲ್​ಗಾಗಿ ಧೋನಿ ಅಭ್ಯಾಸ ಆರಂಭ:


ಎಂಎಸ್ ಧೋನಿ ಅವರು 15 ಆಗಸ್ಟ್ 2020 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆದರೆ ಇನ್ನು ಕೆಲವೇ ದಿನಗಳಲ್ಲಿ ಧೋನಿ ಅಭಿಮಾನಿಗಳ ಅವರನ್ನು ಮತ್ತೆ ಮೈದಾನದಲ್ಲಿ ನೋಡಬಹುದಾಗಿದೆ. ಐಪಿಎಲ್ 16ನೇ ಸೀಸನ್ ನಲ್ಲಿ ಸಿಎಸ್​ಕೆ ನಾಯಕನಾಗಿ ಮಹಿ ಕಾಣಿಸಿಕೊಳ್ಳಲಿದ್ದಾರೆ. ಋತುವಿನ ಆರಂಭಕ್ಕೂ ಮುನ್ನ ಅಭ್ಯಾಸ ಆರಂಭಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿದೆ.


ಇದನ್ನೂ ಓದಿ: IND vs NZ T20I: ನಾಳೆ ಭಾರತ-ನ್ಯೂಜಿಲ್ಯಾಂಡ್​ ಟಿ20 ಪಂದ್ಯ, ಎಷ್ಟು ಗಂಟೆಗೆ? ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ


ಐಪಿಎಲ್ ಬಗ್ಗೆ ಮಾತನಾಡುತ್ತಾ, ಅವರು ತಮ್ಮ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ಗೆ 4 ಬಾರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು 2022ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ತೊರೆದರು. ಅವರ ಸ್ಥಾನಕ್ಕೆ ಫ್ರಾಂಚೈಸಿ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ನಾಯಕನನ್ನಾಗಿ ಮಾಡಿತ್ತು. ಆದರೆ 8 ಪಂದ್ಯಗಳ ನಂತರ ಜಡೇಜಾ ನಾಯಕತ್ವದಲ್ಲಿ ತಂಡ ಕಳಪೆ ಪ್ರದರ್ಶನ ನೀಡಿತು. ಇದರಿಂದಾಗಿ ಮತ್ತೊಮ್ಮೆ ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವ ನೀಡಲಾಗಿತ್ತು.

Published by:shrikrishna bhat
First published: