ಭಾರತ ಮತ್ತು ನ್ಯೂಜಿಲ್ಯಾಂಡ್ (IND vs NZ ) ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ (JSCA International Stadium Complex) ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕಿವೀಸ್ ಭಾರತ ತಂಡಕ್ಕೆ 177 ರನ್ಗಳ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಟೀಂ ಇಂಡಿಯಾ (Team India) 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸುವ ಮೂಲಕ 21 ರನ್ಗಳಿಂದ ಸೋಲನ್ನಪ್ಪಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ನ್ಯೂಜಿಲ್ಯಾಂಡ್ 1-0 ಮುನ್ನಡೆ ಸಾಧಿಸಿದೆ.
ವ್ಯರ್ಥವಾದ ಸೂರ್ಯಕುಮಾರ್ ಆಟ:
ಕಿವೀಸ್ ನೀಡಿ ಗುರಿ ಬೆನ್ನಟ್ಟಿದ ಭಾರತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸುವ ಮೂಲಕ 21 ರನ್ಗಳಿಂದ ಸೋಲನ್ನಪ್ಪಿತು. ಭಾರತದ ಪರ ಶುಭ್ಮನ್ ಗಿಲ್ 7 ರನ್, ಇಶಾನ್ ಕಿಶನ್ 4 ರನ್, ರಾಹುಲ್ ತ್ರಿಪಾಠಿ ಶೂನ್ಯ, ಸೂರ್ಯಕುಮಾರ್ ಯಾದವ್ 47 ರನ್, ನಾಯಕ ಹಾರ್ದಿಕ್ ಪಾಂಡ್ಯ 21 ರನ್, ದೀಪಕ್ ಹೂಡ 10 ರನ್, ಕುಲ್ದೀಪ್ ಯಾದವ್ 0 ರನ್, ವಾಷಿಂಗ್ಟನ್ ಸುಂದರ್ 28 ಎಸೆತದಲ್ಲಿ 3 ಸಿಕ್ಸ್ ಮತ್ತು 5 ಪೋರ್ ಮೂಲಕ ಆಕರ್ಷಕ 50 ರನ್ ಗಳಿಸಿ ಮಿಂಚಿದರು. ಉಮ್ರಾನ್ ಮಲಿಕ್ 4 ರನ್.
A fighting fifty for Washington Sundar, but New Zealand go 1-0 up in the series with a convincing win 👏#INDvNZ | 📝 Scorecard: https://t.co/gq4t6IPNlc pic.twitter.com/3sdxwDRhfJ
— ICC (@ICC) January 27, 2023
ಇನ್ನು, ಏಕದಿನ ಸರಣಿ ಸೋಲಿನ ಬಳಿಕ ನ್ಯೂಜಿಲ್ಯಾಂಡ್ ಬೌಲರ್ಸ್ ಇಂದು ಟಿ20 ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿದರು. ಕಿವೀಸ್ ಪರ ಮಿಚೆಲ್ ಸ್ಯಾಂಟ್ನರ್ ಮತ್ತು ಮೈಕೆಲ್ ಬ್ರೇಸ್ವೆಲ್ ತಲಾ 2 ವಿಕೆಟ್ ಪಡೆದರು. ಉಳಿದಂತೆ ಜಾಕೋಬ್ ಡಫಿ, ಇಶ್ ಸೋಧಿ ಮತ್ತು ಲಾಕಿ ಫರ್ಗುಸನ್ ತಲಾ 1 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಕೊನೆ ಕ್ಷಣದಲ್ಲಿ ಅಬ್ಬರಿಸಿದ್ದ ಡೇರಿಲ್ ಮಿಚೆಲ್:
ಕಿವೀಸ್ ಪರ ಇಂದು ಡೆವೊನ್ ಕಾನ್ವೇ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಅವರು 35 ಎಸೆತದಲ್ಲಿ 7 ಪೋರ್ ಮತ್ತು 1 ಸಿಕ್ಸ್ ಮೂಲಕ 52 ರನ್ಗಳಿಸಿದರು. ಉಳಿದಂತೆ ಫಿನ್ ಅಲೆನ್ 35 ರನ್, ಮಾರ್ಕ್ ಚಾಪ್ಮನ್ ಶೂನ್ಯ, ಗ್ಲೆನ್ ಫಿಲಿಪ್ಸ್ 17 ರನ್, ಮೈಕೆಲ್ ಬ್ರೇಸ್ವೆಲ್ 1 ರನ್, ಮಿಚೆಲ್ ಸ್ಯಾಂಟ್ನರ್ 7 ರನ್ ಮತ್ತು ಅಂತಿಮ ಓವರ್ನಲ್ಲಿ ಡೇರಿಲ್ ಮಿಚೆಲ್ ಅಬ್ಬರಿಸುವ ಮೂಲಕ 30 ಎಸೆತದಲ್ಲಿ 3 ಪೋರ್ ಮತ್ತು 5 ಸಿಕ್ಸ್ ಮೂಲಕ 59 ರನ್ ಗಳಿಸಿದರು.
ರಾಂಚಿಯಲ್ಲಿ ಮೊಳಗಿದ ಧೋನಿ ಪರ ಘೋಷಣೆ:
ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೊದಲ ಏಕದಿನ ಪಂದ್ಯ ಇಂದು ಧೋನಿಯ ತವರಾದ ರಾಂಚಿಯಲ್ಲಿ ನಡೆಯುತ್ತಿದೆ. ಹೀಗಾಗಿ ಧೋನಿ ಸಹ ಕುಟುಂಬ ಸಮೇತವಾಗಿ ಧೋನಿ ಇಂದಿನ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಅಲ್ಲದೇ ಕಳೆದ ದಿನ ಧೋನಿ ಟೀಂ ಇಂಡಿಯಾ ಜೊತೆ ಕಾಣಿಸಿಕೊಂಡಿದ್ದರು. ಮಾಹಿ ತಂಡದ ಆಟಗಾರರೊಂದಿಗೆ ಸಂವಾದ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಂಎಸ್ ಧೋನಿ ಯುವ ತಂಡದಲ್ಲಿ ತುಂಬಾ ಸಂತೋಷದಿಂದ ಕಂಡುಬಂಡಿತ್ತು. ಇದರ ವಿಡಿಯೋವನ್ನು ಬಿಸಿಸಿಐ ಟ್ವಿಟರ್ನಲ್ಲಿ ಹಂಚಿಕೊಂಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ