• Home
  • »
  • News
  • »
  • sports
  • »
  • IND vs NZ, 1st ODI: ಭಾರತ-ಕಿವೀಸ್​ ಮೊದಲ ಏಕದಿನ ಪಂದ್ಯ, ಸಂಜು-ಉಮ್ರಾನ್​ಗೆ ಅವಕಾಶ

IND vs NZ, 1st ODI: ಭಾರತ-ಕಿವೀಸ್​ ಮೊದಲ ಏಕದಿನ ಪಂದ್ಯ, ಸಂಜು-ಉಮ್ರಾನ್​ಗೆ ಅವಕಾಶ

IND vs NZ ODI

IND vs NZ ODI

IND vs NZ, 1st ODI: ಟಾಸ್ ಗೆದ್ದಿರುವ ನ್ಯೂಜಿಲ್ಯಾಂಡ್​ ತಂಡದ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​, ಉಮ್ರಾನ್​ ಮಲ್ಲಿಕ್ ಮತ್ತು ಶುಭ್​ಮನ್ ಗಿಲ್​ಗೆ ಅವಕಾಶ ನೀಡಲಾಗಿದೆ.

  • Share this:

ನ್ಯೂಜಿಲೆಂಡ್‌ನಲ್ಲಿ ನಡೆದ ಟಿ20 ಸರಣಿಯ ಬಳಿಕ ಟೀಂ ಇಂಡಿಯಾ ಇಂದಿನಿಂದ ಏಕದಿನ ಸರಣಿ ಆರಂಭಿಸಿದೆ. ಶಿಖರ್ ಧವನ್ (Shikhar Dhawan) ನೇತೃತ್ವದ ಭಾರತ ತಂಡ ಆತಿಥೇಯ ನ್ಯೂಜಿಲೆಂಡ್ (IND vs NZ) ವಿರುದ್ಧ ಏಕದಿನ ಸರಣಿ ಆರಂಭವಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಇಂದು ಆಕ್ಲೆಂಡ್‌ನಲ್ಲಿ (Auckland) ನಡೆಯುತ್ತಿದೆ. ಈಗಾಗಲೇ ಟಾಸ್ ಗೆದ್ದಿರುವ ನ್ಯೂಜಿಲ್ಯಾಂಡ್​ ತಂಡದ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​, ಉಮ್ರಾನ್​ ಮಲ್ಲಿಕ್ ಮತ್ತು ಶುಭ್​ಮನ್ ಗಿಲ್​ಗೆ ಅವಕಾಶ ನೀಡಲಾಗಿದೆ.


ಕೊನೆಗೂ ಉಮ್ರಾನ್-ಸಂಜುಗೆ ಸಿಕ್ಕ ಸ್ಥಾನ:


ಅನೇಖ ದಿನಗಳಿಂದ ತಂಡದಲ್ಲಿ ಸ್ಥಾನ ನೀಡಿದರೂ ಅಂತಿಮ ಪ್ಲೇಯಿಂಗ್​ 11ನಲ್ಲಿ ಮಾತ್ರ ಸಂಜು ಸ್ಯಾಮ್ಸನ್​ಗೆ ಮತ್ತು ಉಮ್ರಾನ್ ಮಲ್ಲಿಕ್​ಗೆ ಸ್ಥಾನ ಸಿಗುತ್ತಿರಲಿಲ್ಲ. ಕಳೆದ ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿಯೂ ಸಹ ಈ ಇಬ್ಬರು ಆಟಗಾರರಿಗೆ ಅಂತಿಮ ತಂಡದಲ್ಲಿ ಸ್ಥಾನ ದೊರಕಲಿಲ್ಲ. ಆದ್ರೆ ಇಂದಿನ ಪಂದ್ಯದಲ್ಲಿ ಈ ಇಬ್ಬರೂ ಆಟಗಾರರಿಗೆ ಸ್ಥಾನ ದೊರಕಿದ್ದು, ಇವರ ಪ್ರದರ್ಶನ ಹೇಗಿರಲಿದೆ ಎಂದು ಕಾದುನೋಡಬೇಕಿದೆ. ಅಲ್ಲದೇ  ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಇಬ್ಬರಿಗೂ ಇಂದಿನ ಪಂದ್ಯ ಮೊದಲ ಅಂತರಾಷ್ಟ್ರೀಯ ಏಕದಿನ ಪಂದ್ಯವಾಗಿದ್ದು, ಧವನ್ ಕ್ಯಾಪ್ ನೀಡಿದ್ದಾರೆ.ಭಾರತ-ಕಿವೀಸ್​ ಪಂದ್ಯಕ್ಕೆ ಮಳೆ ಅಡ್ಡಿ:


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಶುಕ್ರವಾರ ಬೆಳಗ್ಗೆ ಆಕ್ಲೆಂಡ್‌ನಲ್ಲಿ ನಡೆಯಲಿದೆ. ಸ್ಥಳೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಶುಕ್ರವಾರ ಆಕ್ಲೆಂಡ್‌ನಲ್ಲಿ ಹವಾಮಾನ ಸ್ಪಷ್ಟವಾಗಿರುತ್ತದೆ. ಹಾಗಾಗಿ ಕ್ರಿಕೆಟ್ ಅಭಿಮಾನಿಗಳು ಪಂದ್ಯವನ್ನು ಸಂಪೂರ್ಣವಾಗಿ ಆನಂದಿಸಲು ಸಾಧ್ಯವಾಗುತ್ತದೆ. ಟಿ20 ಸರಣಿಯಲ್ಲಿ ಅಭಿಮಾನಿಗಳು ಸಾಕಷ್ಟು ನಿರಾಸೆ ಅನುಭವಿಸಿದ್ದರು. ಆದರೆ ನಾಳೆ ಒಂದೇ ದಿನದಲ್ಲಿ ಪೂರ್ಣ ಓವರ್‌ಗಳ ಆಟವನ್ನು ನಿರೀಕ್ಷಿಸಲಾಗಿದೆ.


ಇದನ್ನೂ ಓದಿ: IND vs BAN: ಬಾಂಗ್ಲಾದೇಶ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ಜಡೇಜಾ ಔಟ್, ಎಡಗೈ ಆಲ್‌ರೌಂಡರ್‌ಗೆ ಸಿಕ್ತು ಚಾನ್ಸ್


ಅಮೇಜಾನ್​ನಲ್ಲಿ ನೇರಪ್ರಸಾರ:


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಪಂದ್ಯ  ಇಂದು ಆಕ್ಲೆಂಡ್‌ನಲ್ಲಿ ಆರಂಭವಾಗಿದೆ. ಈ ಸರಣಿಯ ಎಲ್ಲಾ ಪಂದ್ಯಗಳ ನೇರಪ್ರಸಾರವು ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಪ್ರಸಾರವಾಗಲಿದೆ. ಆದರೆ ಟಿವಿ ಅಲ್ಲಿ ಎಲ್ಲಿಯೂ ಪ್ರಸಾರವಾಗುವುದಿಲ್ಲ.


ಭಾರತ-ನ್ಯೂಜಿಲ್ಯಾಂಡ್​ ಪ್ಲೇಯಿಂಗ್​ 11:


ಭಾರತ ತಂಡ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ರಿಷಭ್ ಪಂತ್ (ಉಪನಾಯಕ), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.


ಇದನ್ನೂ ಓದಿ: ಹರಾಜಿಗೂ ಮುನ್ನ RCB ಅಭಿಮಾನಿಗಳಿಗೆ ಬಿಗ್​ ಶಾಕ್​, ಐಪಿಎಲ್​ 2023ಕ್ಕೆ ಸ್ಟಾರ್​ ಆಟಗಾರ ಆಡೋದೇ ಡೌಟ್​? ನ್ಯೂಜಿಲೆಂಡ್ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಟಾಮ್ ಲ್ಯಾಥಮ್, ಡಾರೆಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲಾಕಿ ಫರ್ಗುಸನ್.


Published by:shrikrishna bhat
First published: