• Home
  • »
  • News
  • »
  • sports
  • »
  • T20 WC 2022 IND vs NED: ಟೀಂ ಇಂಡಿಯಾ ದಾಳಿಗೆ ತತ್ತರಿಸಿದ ನೆದರ್ಲ್ಯಾಂಡ್ಸ್, ಭಾರತಕ್ಕೆ ಸುಲಭ ಜಯ

T20 WC 2022 IND vs NED: ಟೀಂ ಇಂಡಿಯಾ ದಾಳಿಗೆ ತತ್ತರಿಸಿದ ನೆದರ್ಲ್ಯಾಂಡ್ಸ್, ಭಾರತಕ್ಕೆ ಸುಲಭ ಜಯ

ಭಾರತಕ್ಕೆ ಜಯ

ಭಾರತಕ್ಕೆ ಜಯ

T20 WC 2022 IND vs NED: ನೆದರ್ಲ್ಯಾಂಡ್ಸ್ (Netherlands) ನಿಗದಿತ 20 ಓವರ್​ ಗಳಲ್ಲಿ 9 ವಿಕೆಟ್ ನಷ್ಟಕ್ಕಡೆ 123 ರನ್ ಗಳಿಸುವ ಮೂಲಕ 56 ರನ್ ಗಳಿಂದ ಭಾರತದ ಎದುರು ಸೋಲನ್ನಪ್ಪಿತು.

  • Share this:

ಟಿ20 ವಿಶ್ವಕಪ್​ನಲ್ಲಿ (T20 World Cup 2022) ಭಾರತ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಹೌದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನದ (IND vs PAK) ವಿರುದ್ಧ ಗೆದ್ದ ನಂತರ ಇದೀಗ ನೆದರ್ಲ್ಯಾಂಡ್ಸ್ (IND vs NED) ವಿರುದ್ಧ ಭರ್ಜರಿಯಾಗಿ ಗೆದ್ದಿದೆ. ಈ ಮೂಲಕ ಸತತ 2 ಗೆಲುವು ದಾಖಲಿಸಿದೆ. ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತರ ತಂಡ ನಿಗದಿತ 20 ಓವರ್​ ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 179 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ (Netherlands) ನಿಗದಿತ 20 ಓವರ್​ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸುವ ಮೂಲಕ 56 ರನ್ ಗಳಿಂದ ಭಾರತದ ಎದುರು ಸೋಲನ್ನಪ್ಪಿತು. ಈ ಮೂಲಕ ಭಾರತ ಇದೀಗ ಗ್ರೂಪ್​ 2ರಲ್ಲಿ ಮೊದಲ ಸ್ಥಾನಕ್ಕೇರಿದೆ.


ಉತ್ತಮ ಬೌಲಿಂಗ್​ ದಾಳಿ ಮಾಡಿದ ಟೀಂ ಇಂಡಿಯಾ:


ನೆದರ್ಲ್ಯಾಂಡ್ಸ್ ವಿರುದ್ಧ ವಿರುದ್ಧ ಟೀ ಇಂಡಿಯಾ ಬೌಲರ್ಸ್​ ಉತ್ತಮ ದಾಳಿ ಮಾಡಿದರು. ಭಾರತದ ಪರ ಭುವನೇಶ್ವರ್ ಕುಮಾರ್, ಅರ್ಷದೀಪ್​ ಸಿಂಗ್​, ಅಕ್ಷರ್​ ಪಟೇಲ್ ಮತ್ತು ರವಿಚಂದ್ರನ್​ ಅಶ್ವಿನ್​ ತಲಾ 2 ವಿಕೆಟ್​ ಪಡೆದು ಮಿಂಚಿದರು. ಮೊಹಮ್ಮದದ್ ಶಮಿ ಸಹ 1 ವಿಕೆಟ್ ಪಡೆದರು.



ಭಾರತದ ದಾಳಿಗೆ ತತ್ತರಿಸಿದ ನೆದರ್ಲ್ಯಾಂಡ್ಸ್:


ವಿಕ್ರಮಜಿತ್ ಸಿಂಗ್ 1 ರನ್, ಮ್ಯಾಕ್ಸ್ ಓ ಡೌಡ್ 16 ರನ್, ಟಾಮ್ ಕೂಪರ್ 9 ರನ್, ಸ್ಕಾಟ್ ಎಡ್ವರ್ಡ್ಸ್ 5 ರನ್, ಕಾಲಿನ್ ಅಕರ್ಮನ್ 17 ರನ್, ಬಾಸ್ ಡಿ ಲೀಡ್ 16 ರನ್, ಟಿಮ್ ಪ್ರಿಂಗಲ್ 20 ರನ್, ಲೋಗನ್ ವ್ಯಾನ್ ಬೀಕ್ 3 ರನ್, ಶರೀಜ್ ಅಹ್ಮದ್ 16 ರನ್, ಫ್ರೆಡ್ ಕ್ಲಾಸೆನ್ ಶೂನ್ಯ ಮತ್ತು ಪಾಲ್ ವ್ಯಾನ್ ಮಿಕೆರೆನ್ 14 ರನ್ ಗಳಿಸಿದರು.


ಇದನ್ನೂ ಓದಿ: T20 World Cup 2022: ಕ್ರಿಕೆಟಿಗರ ಜೊತೆ ರಾಷ್ಟ್ರಗೀತೆಗೆ ದನಿಗೂಡಿಸುವ ಈ ಮಕ್ಕಳು ಯಾರು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ


ಉತ್ತಮ ಬ್ಯಾಟಿಂಗ್​ ಮಾಡಿದ ಕೊಹ್ಲಿ-ಸೂರ್ಯ:


ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​ ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 179 ರನ್ ಗಳಿಸಿತು. ಈ ಪಂದ್ಯದಲ್ಲಿ ಸೂರ್ಯಕುಮಾರವ ಯಾದವ್, ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಕೆಎಲ್ ರಾಹುಲ್ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ಔಟ್​ ಆಗುವ ಮೂಲಕ ನಿರಾಸೆ ಮೂಡಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಕೇವಲ 9 ರನ್ ಗಳಿಸಿ ವಿಕೆಟ್​ ಒಪ್ಪಿಸಿದರು. ಆದರೆ ನಾಯಕ ರೋಹಿತ್ ಶರ್ಮಾ 39 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಬೌಂಡರಿಗಳ ನೆರವಿನಿಂದ 53 ರನ್ ಗಳಿಸಿ ಮಿಂಚಿದರು.


ಇದನ್ನೂ ಓದಿ: RCB ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ಕರ್ನಾಟಕದ ಈ 4 ನಗರಗಳಲ್ಲಿ ನಡೆಯಲಿದೆ IPL


ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಅಂತಿಮವಾಗಿ ಕೊಹ್ಲಿ ಔಟಾಗದೇ 44 ಎಸೆತದಲ್ಲಿ 2 ಸಿಕ್ಸ್ ಮತ್ತು 3 ಬೌಂಡರಿಗಳಿಂದ 62 ರನ್ ಗಳಿಸಿದರು. ಯಾದವ್ ಸಹ 25 ಎಸೆತದಲ್ಲಿ 1 ಸಿಕ್ಸ್ 7 ಪೋರ್​ ಮೂಲಕ 51 ರನ್ ಗಳಿಸಿ ಮಿಂಚಿದರು. ಕೊಹ್ಲಿ ಈ ಬಾರಿ ಟಿ20 ವಿಶ್ವಕಪ್​ನಲ್ಲಿ ಇದು ಸತತ 2ನೇ ಅರ್ಧ ಶತಕ ಸಿಡಿಸಿದರು.

Published by:shrikrishna bhat
First published: