• Home
  • »
  • News
  • »
  • sports
  • »
  • T20 WC IND vs NED: ಇಂದು ಭಾರತ- ನೆದರ್ಲ್ಯಾಂಡ್ಸ್ ಹಣಾಹಣಿ, ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್ 11

T20 WC IND vs NED: ಇಂದು ಭಾರತ- ನೆದರ್ಲ್ಯಾಂಡ್ಸ್ ಹಣಾಹಣಿ, ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್ 11

IND vs NED

IND vs NED

T20 WC IND vs NED: ಆತ್ಮವಿಶ್ವಾಸದಲ್ಲಿರುವ ರೋಹಿತ್ ನಾಯಕತ್ವದ ಟೀಂ ಇಂಡಿಯಾ(Team India) ಇಂದು ಸೂಪರ್ 12 ಸುತ್ತಿನಲ್ಲಿ 2ನೇ ಪಂದ್ಯದಲ್ಲಿ ಕ್ರಿಕೆಟ್ ಶಿಶುಗಳಾದ ನೆದರ್ಲ್ಯಾಂಡ್ಸ್ (Netherlands) ತಂಡವನ್ನು ವಿರುದ್ಧ ಸೆಣಸಾಡಲಿದೆ.

  • Share this:

ಟಿ20 ವಿಶ್ವಕಪ್​ನಲ್ಲಿ (T20 World Cup 2022) ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನದ ವಿರುದ್ಧ ಗೆದ್ದು ಆತ್ಮವಿಶ್ವಾಸದಲ್ಲಿರುವ ರೋಹಿತ್​ ನಾಯಕತ್ವದ ಟೀಂ ಇಂಡಿಯಾ(Team India)  ಇಂದು ಸೂಪರ್ 12 ಸುತ್ತಿನಲ್ಲಿ  2ನೇ ಪಂದ್ಯದಲ್ಲಿ ಕ್ರಿಕೆಟ್ ಶಿಶುಗಳಾದ ನೆದರ್ಲ್ಯಾಂಡ್ಸ್ (Netherlands)  ತಂಡವನ್ನು ವಿರುದ್ಧ ಸೆಣಸಾಡಲಿದೆ. ಇನ್ನು ವಿಶೇಷವೆಂದರೆ ಭಾರತ ಮತ್ತು ನೆದರ್ಲ್ಯಾಂಡ್ಸ್ (IND vs NED) ಟಿ20 ಕ್ರಿಕೆಟ್​ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿ ಆಗುತ್ತಿವೆ. ಹೀಗಾಗಿ ಎರಡೂ ತಂಗಳಿಗೂ ಮುಖಾಮುಖಿ ಆಡಿರುವ ಅನುಭವವಿಲ್ಲ. ಆದರೂ ನೆದರ್ಲ್ಯಾಂಡ್ಸ್ ಕೊನೆಯ ಪಂದ್ಯದಲ್ಲಿ ಬಾಂಗ್ಲಾ ಎದುರು ಸೋತರೂ ಉತ್ತಮ ಪೈಪೋಟಿಯನ್ನು ನೀಡಿತ್ತು.


ಪಂದ್ಯದ ವಿವರ:


ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯವು ಇಂದು ಮೆಲ್ಬೋರ್ನ್‌ನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವು ಮಧ್ಯಾಹ್ನ  12:30ಕ್ಕೆ ಆರಂಭವಾಗಲಿದೆ. ಅಂದರೆ ಮಧ್ಯಾಹ್ನ 12 ಗಂಟೆಗೆ ಟಾಸ್ ನಡೆಯಲಿದೆ. ಇನ್ನು ಈ ಪಂದ್ಯವನ್ನು ನೀವು ಉಚಿತವಾಗಿ ಡಿಡಿ ಸ್ಪೋರ್ಟ್ಸ್ ನಲ್ಲಿ ವೀಕ್ಷಿಸಬಹುದು. ಇದಲ್ಲದೇ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ನಲ್ಲಿ ನೇರಪ್ರಸಾರ ಮತ್ತು ಡಿಸ್ನಿ ಫ್ಲಸ್ ಹಾಟ್​ ಸ್ಟಾರ್​ ನಲ್ಲಿ ಲೈವ್​ ಸ್ಟ್ರೀಮಿಂಗ್​ ಅನ್ನು ನೋಡಬಹುದು.


ಭಾರತ- ನೆದರ್ಲೆಂಡ್ಸ್ ಹೆಡ್​ ಟು2 ಹೆಡ್​:


ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ಎರಡು ಬಾರಿ ಮುಖಾಮುಖಿಯಾಗಿವೆ.ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಉಭಯ ತಂಡಗಳು 2003 ಮತ್ತು 2011ರ ಏಕದಿನ ವಿಶ್ವಕಪ್‌ನಲ್ಲಿ ಮುಖಾಮುಖಿ ಆಗಿದ್ದವು. ಎರಡೂ ಸಂದರ್ಭಗಳಲ್ಲಿ ಟೀಂ ಇಂಡಿಯಾ ಜಯಭೇರಿ ಬಾರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡಕ್ಕೆ ನೆದರ್ಲೆಂಡ್ಸ್ ತಂಡವನ್ನು ಸೋಲಿಸುವುದು ಕಷ್ಟವೇನಲ್ಲ. ಆಧರೆ ಈಗಾಗಲೇ ಬಿ ಗುಂಪಿನಲ್ಲಿ 2ನೇ ಸ್ಥಾನದಲ್ಲಿರುವ ಟೀಂ ಇಂಡಿಯಾ ಇಂದು ನೆದರ್ಲೆಂಡ್ಸ್ ವಿರುದ್ಧ ದೊಡ್ಡ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಪ್ರಯತ್ನಿಸಲಿದೆ.


ಇದನ್ನೂ ಓದಿ: Virat Kohli: ಪಂದ್ಯ ಗೆದ್ದು ಕಣ್ಣೀರಿಟ್ಟ ಕಿಂಗ್ ಕೊಹ್ಲಿ, ವಿರಾಟ ಪರಾಕ್ರಮಕ್ಕೆ ಅಭಿಮಾನಿಗಳ ಬಹುಪರಾಕ್


ಈ ಮೂಲಕ ಸೆಮೀಸ್ ಹಾದಿಯನ್ನು ಇನ್ನಷ್ಟು ಸುಗಮಗೊಳಿಸಿಕೊಳ್ಳಲು ಹವಣಿಸುತ್ತಿದೆ ರೋಹಿತ್ ಪಡೆ. ಇನ್ನು, ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ನೆದರ್ಲ್ಯಾಂಡ್ಸ್ ಅನ್ನು ಸೋಲಿಸಿದಾಗಲೆಲ್ಲಾ ಅದು ಫೈನಲ್‌ಗೆ ಪ್ರಯಾಣಿಸುವಲ್ಲಿ ಯಶಸ್ವಿಯಾಗಿದೆ. 2011ರಲ್ಲಿ ಮುಂಬೈನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಆಗಿದ್ದರೆ, 2003ರ ODI ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು.


IND vs NED ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.


ಇದನ್ನೂ ಓದಿ: RCB ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ಕರ್ನಾಟಕದ ಈ 4 ನಗರಗಳಲ್ಲಿ ನಡೆಯಲಿದೆ IPL


ನೆದರ್ಲೆಂಡ್ಸ್ ಸಂಭಾವ್ಯ ಪ್ಲೇಯಿಂಗ್​ 11: ಸ್ಕಾಟ್ ಎಡ್ವರ್ಡ್ಸ್ (C & WK), ಮ್ಯಾಕ್ಸ್ ಒ' ಡೌಡ್, ವಿಕ್ರಮಜಿತ್ ಸಿಂಗ್, ಬಾಸ್ ಡಿ ಲೀಡ್, ಟಾಮ್ ಕೂಪರ್, ಕಾಲಿನ್ ಅಕರ್ಮನ್, ಟಿಮ್ ಪ್ರಿಂಗಲ್, ಲೋಗನ್ ವ್ಯಾನ್ ಬೀಕ್, ಟಿಮ್ ಗುಗ್ಗೆನ್, ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್, ಶರೀಜ್ ಅಹ್ಮದ್, ವ್ಯಾನ್ ಡೆರ್ ಮೆರ್ವ್, ಬ್ರಾಂಡನ್ ಗ್ಲೋವರ್, ಸ್ಟೆಫ್ ಮೈಬರ್ಗ್.

Published by:shrikrishna bhat
First published: