• Home
  • »
  • News
  • »
  • sports
  • »
  • Ind vs Eng T20 World Cup 2022: ಅಭ್ಯಾಸದ ವೇಳೆ ಗಾಯಗೊಂಡ ಕೊಹ್ಲಿ, ಸೆಮೀಸ್​ ಪಂದ್ಯಕ್ಕೆ ಅಲಭ್ಯ?

Ind vs Eng T20 World Cup 2022: ಅಭ್ಯಾಸದ ವೇಳೆ ಗಾಯಗೊಂಡ ಕೊಹ್ಲಿ, ಸೆಮೀಸ್​ ಪಂದ್ಯಕ್ಕೆ ಅಲಭ್ಯ?

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

Ind vs Eng T20 World Cup 2022: ವಿರಾಟ್ ಕೊಹ್ಲಿ ಇಲ್ಲಿಯವರೆಗೆ ಟಿ 20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 3 ಅರ್ಧಶತಕಗಳ ನೆರವಿನಿಂದ 200ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ನಾಳೆ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.

ಮುಂದೆ ಓದಿ ...
  • Share this:

ಟಿ20 ವಿಶ್ವಕಪ್‌ನ (T20 World Cup 2022) 8ನೇ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಇದುವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. 3 ಅರ್ಧಶತಕದ ನೆರವಿನಿಂದ 200ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಿಂದಾಗಿ ಸೂಪರ್-12ನ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆಲ್ಲಲು ಭಾರತ ತಂಡಕ್ಕೆ ಸಾಧ್ಯವಾಯಿತು. ನಾಳೆ ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ (IND vs ENG) ತಂಡವನ್ನು ಎದುರಿಸಲು ಟೀಂ ಇಂಡಿಯಾ ಸಿದ್ಧವಾಗಿದೆ. ಈ ದೊಡ್ಡ ಪಂದ್ಯಕ್ಕೂ ಮುನ್ನ ಬುಧವಾರ ಅಭ್ಯಾಸದ ವೇಳೆ ಕೊಹ್ಲಿ ಗಾಯಗೊಂಡಿದ್ದರು. ವೇಗಿ ಹರ್ಷಲ್ ಪಟೇಲ್ ಅವರ ಚೆಂಡು ಅವರ ತೊಡೆಗೆ ತಾಗಿದೆ. ಇದಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಕೂಡ ಮಂಗಳವಾರ ಗಾಯಗೊಂಡಿದ್ದರು.


ಅಭ್ಯಾಸದ ವೇಳೆ ಕೊಹ್ಲಿಗೆ ಗಾಯ:


ವಿರಾಟ್ ಕೊಹ್ಲಿ ಬುಧವಾರ ಸುದೀರ್ಘ ಅಭ್ಯಾಸ ನಡೆಸಿದರು. ಈ ವೇಳೆ ವೇಗಿ ಹರ್ಷಲ್ ಪಟೇಲ್ ಅವರ ಚೆಂಡೊಂದು ಅವರ ತೊಡೆಗೆ ತಾಗಿದೆ. ಇದರಿಂದ ತೀವ್ರ ನೋವು ಅನುಭವಿಸಿದ ಅವರು ಪಿಚ್‌ನಲ್ಲಿಯೇ ಕುಳಿತುಕೊಂಡರು. ಆದರೂ ಗಾಯ ಗಂಭೀರವಾಗಿಲ್ಲ. ಸೆಮಿಫೈನಲ್‌ಗೆ ಸಂಪೂರ್ಣ ಫಿಟ್ ಆಗಿದ್ದೇನೆ ಎಂದು ಅವರು ಇಂದು ಹೇಳಿದ್ದಾರೆ. ನಂತರ ಅಭಿಮಾನಿಗಳ ಜೊತೆ ಸೆಲ್ಫಿ ತೆಗೆದುಕೊಂಡರು. ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೊಹ್ಲಿ ಎಂಬುದು ಗೊತ್ತೇ ಇದೆ. ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನ ವಿರುದ್ಧ ಅಜೇಯ 82 ರನ್ ಗಳಿಸಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟಿದ್ದರು.ಅಡಿಲೇಡ್‌ನಲ್ಲಿ ಕೊಹ್ಲಿ ದಾಖಲೆ:


ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿ ಫೈನಲ್ ಪಂದ್ಯ ನಾಳೆ ಅಡಿಲೇಡ್​ನಲ್ಲಿ ನಡೆಯಲಿದೆ. ಇಲ್ಲಿ ಕೊಹ್ಲಿ ಅವರ ದಾಖಲೆ ಅತ್ಯುತ್ತಮವಾಗಿದೆ. ಇಲ್ಲಿಯವರೆಗೆ 2 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು ಎರಡರಲ್ಲೂ ಅರ್ಧಶತಕ ಗಳಿಸಿದ್ದಾರೆ. ಔಟಾಗದೆ 90 ಗರಿಷ್ಠ ಸ್ಕೋರ್ ಆಗಿದೆ. ಪ್ರಸಕ್ತ ವಿಶ್ವಕಪ್ ಕುರಿತು ಮಾತನಾಡಿದ ಅವರು, ಈ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ಅಜೇಯ 64 ರನ್ ಗಳಿಸಿದರು. ಕೊಹ್ಲಿ ಈ ಮೈದಾನದಲ್ಲಿ 14 ಇನ್ನಿಂಗ್ಸ್‌ಗಳಲ್ಲಿ 76 ಸರಾಸರಿಯಲ್ಲಿ 907 ರನ್ ಗಳಿಸಿದ್ದಾರೆ. 5 ಶತಕ ಹಾಗೂ 3 ಅರ್ಧ ಶತಕ ಬಾರಿಸಿದ್ದಾರೆ. 141 ರನ್‌ಗಳ ದೊಡ್ಡ ಇನ್ನಿಂಗ್ಸ್ ಆಡಿದ್ದಾರೆ.  ಅವರಿಗಿಂತ ಹೆಚ್ಚು ರನ್ ಗಳಿಸಲು ಯಾವುದೇ ಭಾರತೀಯರಿಗೆ ಸಾಧ್ಯವಾಗಿಲ್ಲ.


ಇದನ್ನೂ ಓದಿ: PAK vs NZ: ಇಂದು ಪಾಕ್​-ಕಿವೀಸ್​ ಸೆಮೀಸ್​ ಫೈಟ್​, ಪಾಕಿಸ್ತಾನದಲ್ಲಿ ಸರ್ಕಾರಿ ರಜೆ ಘೋಷಣೆ


ಇನ್ನು,  ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಟಿ20ಯಲ್ಲಿ ಇದುವರೆಗೆ 106 ಇನ್ನಿಂಗ್ಸ್‌ಗಳಲ್ಲಿ 53 ಸರಾಸರಿಯಲ್ಲಿ 3958 ರನ್ ಗಳಿಸಿದ್ದಾರೆ. ಅವರು ಒಂದು ಶತಕ ಮತ್ತು 36 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 138 ಆಗಿದೆ. ಇಂಗ್ಲೆಂಡ್ ವಿರುದ್ಧ ಇನ್ನೂ 42 ರನ್ ಗಳಿಸಿದರೆ, 4000 ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಆಗಲಿದ್ದಾರೆ.


ಗಾಯಗೊಂಡಿದ್ದ ನಾಯಕ ರೋಹಿತ್:


ಇನ್ನು, ಕಳೆದ ದಿನ ನೆಟ್​ ಅಭ್ಯಾಸದ ವೇಳೆ ರೋಹಿತ್ ಶರ್ಮ, ಅವರ ಮುಂಗೈಗೆ ಗಾಯವಾಗಿದೆ. ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ರೋಹಿತ್ ಅವರೊಂದಿಗೆ ಬಹಳ ಸಮಯ ಮಾತನಾಡುತ್ತಿರುವುದು ಕಂಡುಬಂದಿದೆ. ರೋಹಿತ್ ಶರ್ಮಾ ಅವರ ಗಾಯ ಎಷ್ಟು ಆಳವಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ, ರೋಹಿತ್ ನೆಟ್ಸ್ ನಲ್ಲಿ ಮತ್ತೆ ಅಭ್ಯಾಸ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.


ಇದನ್ನೂ ಓದಿ: Ind Vs Eng, T20 World Cup 2022: ಭಾರತ-ಇಂಗ್ಲೆಂಡ್​ ಸೆಮೀಸ್​ ಕದನ, ಹೇಗಿದೆ ಉಭಯ ತಂಡಗಳ ಬಲಾಬಲ?


ಟಿ20 ವಿಶ್ವಕಪ್​ಗೆ ಭಾರತ ತಂಡ:


ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್

Published by:shrikrishna bhat
First published: