• Home
  • »
  • News
  • »
  • sports
  • »
  • IND vs ENG: ಸೋಲಿನ ಬಳಿಕ ಕಣ್ಣೀರಿಟ್ಟ ರೋಹಿತ್ ಶರ್ಮಾ, ಕೊಹ್ಲಿ-ಪಾಂಡ್ಯ ಫುಲ್​ ಅಪ್​ಸೆಟ್​

IND vs ENG: ಸೋಲಿನ ಬಳಿಕ ಕಣ್ಣೀರಿಟ್ಟ ರೋಹಿತ್ ಶರ್ಮಾ, ಕೊಹ್ಲಿ-ಪಾಂಡ್ಯ ಫುಲ್​ ಅಪ್​ಸೆಟ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs ENG: ಮಹತ್ವದ ಪಂದ್ಯದಲ್ಲಿ ಸೋತಿದ್ದರಿಂದ ಭಾರತದ ಕೋಟ್ಯಾಂತರ ಅಭಿಮಾನಿಗಳು ನಿರಾಸೆ ಅನುಭವಿಸಿದ್ದಾರೆ. ಅದೇ ರೀತಿ ನಾಯಕ ರೋಹಿತ್ ಶರ್ಮಾ ಸಹ ಪಂದ್ಯದ ಬಳಿಕ ಡಗೌಟ್​ನಲ್ಲಿ ಕುಳಿತು ಕಣ್ಣೀರು ಹಾಕಿದ್ದಾರೆ.

  • Share this:

ಇಂದು ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಸೋಲಿನ ನಂತರ ರೋಹಿತ್ ಶರ್ಮಾ ಮುಖದಲ್ಲಿನ ನಿರಾಸೆ ಜೊತೆ ಕಣ್ಣೀರು ಹಾಕಿದ್ದಾರೆ. ಸೋಲಿನ ಬಳಿಕ ಡಗೌಟ್‌ನಲ್ಲಿ ರಾಹುಲ್ ದ್ರಾವಿಡ್ ಪಕ್ಕದಲ್ಲಿಯೇ ಬಹಳ ಹೊತ್ತು ಕುಳಿತಿದ್ದರು. ಆದರೆ ಈ ಪಂದ್ಯದ ನಂತರ ಟೀಂ ಇಂಡಿಯಾದ  ಆಟಗಾರರು ಇನ್ನಿಲ್ಲದ ಬೇಸರದಲ್ಲಿ ಇರುವುದು ಕಂಡುಬಂದಿದೆ. ಅದರಲ್ಲಿಯೂ ರೋಹಿತ್ ಶರ್ಮಾ ಕಣ್ಣೀರು ಹಾಕುತ್ತಿರುವ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಪಾಂಡ್ಯ, ಕೊಹ್ಲಿ ಸಹ ಮಂಕಾಗಿರುವುದು ಕಂಡುಬಂದಿದೆ.


ಡಗೌಟ್​ನಲ್ಲಿ ಕಣ್ಣೀರಿಟ್ಟ ರೋಹಿತ್:


ಟೀಂ ಇಂಡಿಯಾ ಟಿ20 ವಿಶ್ವಕಪ್‌ 2022ರಿಂದ ಹೊರಬಿದದ್ದಿದೆ. ಇಂದು ನಡೆದ ಇಂಗ್ಲೆಂಡ್ ವಿರುದ್ಧದ ಸೆಮೀಸ್​ ಪಂದ್ಯದಲ್ಲಿ ಭಾರತ 10 ವಿಕೆಟ್​ ಗಳಿಂದ ಹೀನಾಯವಾಗಿ ಸೋತಿತು. ಈ ಮೂಲಕ ಇಂಗ್ಲೆಂಡ್ ಫೈನಲ್ ಪ್ರವೇಶಿಸಿದ್ದು, ನವೆಂಬರ್ 13ರಂದು ಪಾಕ್ ವಿರುದ್ಧ ಆಂಗ್ಲರು ಸೆಣಸಲಿದ್ದಾರೆ. ಆದರೆ ಇಂತಹ ಮಹತ್ವದ ಪಂದ್ಯದಲ್ಲಿ ಸೋತಿದ್ದರಿಂದ ಭಾರತದ ಕೋಟ್ಯಾಂತರ ಅಭಿಮಾನಿಗಳು ನಿರಾಸೆ ಅನುಭವಿಸಿದ್ದಾರೆ. ಅದೇ ರೀತಿ ನಾಯಕ ರೋಹಿತ್ ಶರ್ಮಾ ಸಹ ಪಂದ್ಯದ ಬಳಿಕ ಡಗೌಟ್​ನಲ್ಲಿ ಕುಳಿತು ಕಣ್ಣೀರು ಹಾಕಿದ್ದಾರೆ. ಇದರ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. ಇದರ ಜೊತೆಗೆ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಎಲ್ಲರೂ ಮಂಕಾಗಿರುವುದು ಕಂಡುಬಂದಿದೆ.ಆರಂಭಿಕರಾಗಿ ಸೋತ ರೋಹಿತ್-ರಾಹುಲ್:


ಇನ್ನು, ಈ ಬಾರಿಯ ವಿಶ್ವಕಪ್​ ನಲ್ಲಿ ಭಾರತದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಉತ್ತಮವಾಗಿ ಪ್ರದರ್ಶನ ನೀಡಲಿಲ್ಲ. ಇಂದಿನ ಪಂದ್ಯದಲ್ಲಿಯೂ ರೋಹಿತ್ 28 ಎಸೆತದಲ್ಲಿ 27 ರನ್ ಗಳಿಸಿದರೆ, ರಾಹುಲ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದು ತಮಡಕ್ಕೆ ದೊಡ್ಡ ಹಿನ್ನಡೆಯಾಯಿತು. ರೋಹಿತ್ ಶರ್ಮಾ ಈ ಟಿ20 ವಿಶ್ವಕಪ್​ನಲ್ಲಿ ಒಟ್ಟು 6 ಪಂದ್ಯಗಳಲ್ಲಿ ಕೇವಲ 116 ರನ್ ಮಾತ್ರ ಗಳಿಸಿದ್ದಾರೆ. 20 ರ ಸರಾಸರಿ ರನ್ ಗಳಿಸಿರುವ ರೋಹಿತ್ 106.42 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ.


ಇದನ್ನೂ ಓದಿ: IND vs ENG: ಟೀಂ ಇಂಡಿಯಾ ಕ್ರಿಕೆಟ್ ಇತಿಹಾಸದಲ್ಲೇ ಹೀನಾಯ ಸೋಲು! ಇದು ಎಂದಿಗೂ ಮರೆಯಲಾಗದ ನೋವು ಎಂದ ಫ್ಯಾನ್ಸ್


ಕೋಟ್ಯಾಂತರ ಅಭಿಮಾನಿಗಳ ಕನಸು ಭಗ್ನ:


ಟೀಂ ಇಂಡಿಯಾಗೆ ಇಂಗ್ಲೆಂಡ್ ಎರಡನೇ ಸೆಮಿಫೈನಲ್‌ನಲ್ಲಿ ಆಟದ ಪ್ರತಿಯೊಂದು ಕ್ಷೇತ್ರವೂ ಫೇಲ್​ ಆಯಿತು. ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಬೌಲಿಂಗ್, ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಪ್ರದರ್ಶನ ನೀಡಿತು. ಟಾಸ್ ಗೆದ್ದ ನಂತರ, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಂಗ್ಲರು ಬೌಲಿಂಗ್​ನಲ್ಲಿ ಮೊದಲು ಯಶಸ್ವಿಯಾದರು. ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಬಿಟ್ಟರೆ ಟೀಂ ಇಂಡಿಯಾದ ಯಾವ ಬ್ಯಾಟ್ಸ್ ಮನ್ ಗಳೂ ಬಿರುಸಿನ ಆಟವಾಡಲು ಸಾಧ್ಯವಾಗಲಿಲ್ಲ. ಆದರೆ ಇಂಗ್ಲೆಂಡ್​ ಪರ ನಾಯಕ ಬಟ್ಲರ್ ಮತ್ತು ಹೇಲ್ಸ್ ಆರಂಭಿಕರಾಗಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಬಟ್ಲರ್ 49 ಎಸೆತಗಳಲ್ಲಿ 3 ಸಿಕ್ಸ್ ಮತ್ತು 9 ಪೋರ್​ ಮೂಲಕ 80 ರನ್ ಗಳಿಸಿದರೆ, ಅಲೇಕ್ಸ್ ಹೆಲ್ಸ್ 47 ಎಸೆತದಲ್ಲಿ 7 ಸಿಕ್ಸ್ ಮತ್ತು 4 ಬೌಂಡರಿಗಳ ಮೂಲಕ 86 ರನ್ ಗಳಿಸಿ ಮಿಂಚಿದರು.

Published by:shrikrishna bhat
First published: