• Home
  • »
  • News
  • »
  • sports
  • »
  • Ind Vs Eng, T20 World Cup 2022: ಭಾರತ-ಇಂಗ್ಲೆಂಡ್ ಪಂದ್ಯ, ಸೆಮೀಸ್​ನಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆ!

Ind Vs Eng, T20 World Cup 2022: ಭಾರತ-ಇಂಗ್ಲೆಂಡ್ ಪಂದ್ಯ, ಸೆಮೀಸ್​ನಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

T20 WC IND vs ENG: ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ತಲುಪಿದೆ. ಭಾರತ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

  • Share this:

ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ (Team India) ಸೆಮಿಫೈನಲ್ ತಲುಪಿದೆ. ಭಾರತ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ ಟಿ20 ವಿಶ್ವಕಪ್ (T20 WC) ಸೆಮಿಫೈನಲ್ ಪಂದ್ಯವು ಗುರುವಾರ, ನವೆಂಬರ್ 10 ರಂದು ಅಡಿಲೇಡ್‌ನಲ್ಲಿ (Adelaide) ನಡೆಯಲಿದೆ. ಜಿಂಬಾಬ್ವೆ ವಿರುದ್ಧ 71 ರನ್‌ಗಳ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನದ ಮೂಲಕಸ ಸೆಮೀಸ್​ಗೆ ಎಂಟ್ರಿ ನೀಡಿದೆ. ಆದರೆ ಸೆಮೀಸ್​ ನಂತಹ ಮಹತ್ವದ ಪಂದ್ಯದಲ್ಲಿ ಭಾರತ ತಂಡವು ಬಲಿಷ್ಠ ಇಂಗ್ಲೆಂಡ್​ ವಿರುದ್ಧ ಕೆಲ ಬದಲಾವಣೆ ಜೊತೆ ಕಣಕ್ಕಿಳಿಯುವ ಸಾಧ್ಯತೆ ಇದೆ.


ಟೀಂ ಇಂಡಿಯಾದಲ್ಲಿ ಬದಲಾವಣೆ?: 


ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿತ್ತು. ಫಾರ್ಮ್ ಇಲ್ಲದ ದಿನೇಶ್ ಕಾರ್ತಿಕ್ ಬದಲಿಗೆ ರಿಷಬ್ ಪಂತ್ ಗೆ ಅವಕಾಶ ನೀಡಲಾಗಿತ್ತು. ಈಗ ಸೆಮಿಫೈನಲ್‌ನಲ್ಲೂ ಟೀಂ ಇಂಡಿಯಾದಲ್ಲಿ ಬದಲಾವಣೆ ಆಗಬಹುದು. ಟೀಂ ಇಂಡಿಯಾದ ಆಲ್‌ರೌಂಡರ್ ಅಕ್ಷರ್ ಪಟೇಲ್ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಪಂದ್ಯವನ್ನು ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳಲ್ಲಿ ಆಡಿದ್ದರು, ಆದರೆ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಯಶಸ್ವಿಯಾಗಲಿಲ್ಲ. ಅಲ್ಲದೆ ಇಂಗ್ಲೆಂಡ್ ತಂಡದಲ್ಲಿ ಎಡಗೈ ಬ್ಯಾಟ್ಸ್ ಮನ್ ಗಳೇ ಹೆಚ್ಚು. ಎಡಗೈ ಬ್ಯಾಟ್ಸ್‌ಮನ್‌ಗಳು ಎಡಗೈ ಸ್ಪಿನ್ನರ್‌ಗಳನ್ನು ಎದುರಿಸಲು ಸುಲಭವಾಗುತ್ತದೆ. ಆದ್ದರಿಂದ ಅಕ್ಷರ್ ಪಟೇಲ್ ಅವರನ್ನು ಸೆಮಿಫೈನಲ್‌ನಲ್ಲಿ ಸೇರಿಸಿಕೋಳ್ಳಬಹುದು.


ಯಾರಿಗೆ ಅವಕಾಶ?:


ಅಕ್ಷರ್ ಪಟೇಲ್ ಅವರನ್ನು ಬಿಟ್ಟರೆ, ರೋಹಿತ್‌ಗೆ ದೀಪಕ್ ಹೂಡಾ ಮತ್ತು ಹರ್ಷಲ್ ಪಟೇಲ್ ಮತ್ತು ಯುಜ್ವೇಂದ್ರ ಚಹಾಲ್ ಎಂಬ ಮೂರು ಆಯ್ಕೆಗಳು ಉಳಿದಿವೆ, ಅದರಲ್ಲಿ ರೋಹಿತ್ ಹೂಡಾ ಅಥವಾ ಹರ್ಷಲ್ ಪಟೇಲ್ ಅವರನ್ನು ಪರಿಗಣಿಸಬಹುದು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಅಕ್ಷರ್ ಪಟೇಲ್ ಬದಲಿಗೆ ರೋಹಿತ್ ಹೂಡಾ ಆಡಿದ್ದರು, ಆದರೆ ಹೂಡಾ ಶೂನ್ಯಕ್ಕೆ ಔಟಾಗಿದ್ದರು.


ಇದನ್ನೂ ಓದಿ: T20 World Cup 2022: ಸೆಮೀಸ್​ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್, ಗಾಯಗೊಂಡ ರೋಹಿತ್ ಶರ್ಮಾ


ಸೆಮಿಫೈನಲ್‌ನಲ್ಲಿ ಹೂಡಾ ಆಯ್ಕೆಯಾದರೆ, ರೋಹಿತ್‌ಗೆ ಬೌಲಿಂಗ್‌ಗೆ ಕೇವಲ 5 ಆಯ್ಕೆಗಳಿವೆ. ಮತ್ತೊಂದೆಡೆ ಹರ್ಷಲ್ ಪಟೇಲ್ ಕೆಳ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡಬಲ್ಲರು ಮತ್ತು ವೇಗದ ಬೌಲರ್ ಕೂಡ ಆಗಿರುವುದರಿಂದ ರೋಹಿತ್ ಶರ್ಮಾ ಯಾರಿಗೆ ಅವಕಾಶ ನೀಡಲಿದ್ದಾರಾ ಎಂಬ ಕುತೂಹಲ ಮೂಡಿದೆ.


ಟಿ20 ವಿಶ್ವಕಪ್​ಗೆ ಭಾರತೀಯ ತಂಡ:


ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್.


ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ನಲ್ಲಿ ಮತ್ತೊಮ್ಮೆ ಭಾರತ-ಪಾಕ್​ ಫೈಟ್​? 15 ವರ್ಷಗಳ ಬಳಿಕ ಮರುಕಳಿಸುತ್ತಾ ಇತಿಹಾಸ?


ಪಂದ್ಯದ ವಿವರ:


ಭಾರತ ಮತ್ತು ಇಂಗ್ಲೆಂಡ್​ ನಡುವಿನ ಟಿ20 ವಿಶ್ವಕಪ್ 2022ರ ಸೆಮಿ ಫೈಬಲ್ ಪಂದ್ಯವು ನವೆಂಬರ್ 10ರಂದು ಆಸ್ಟ್ರೇಲಿಯಾದ ಅಡಿಲೇಡ್​ ನಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸರಿಯಾರಿ ಮಧ್ಯಾಹ್ನ 1 ಗಂಟೆಗೆ ಟಾಸ್​  ಮತ್ತು 1:30ಕ್ಕೆ ಪಂದ್ಯ ಆರಂಭವಾಗಲಿದೆ. ಪಂದ್ಯವನ್ನು ಉಚಿತವಾಗಿ ಡಿಡಿ ಸ್ಪೋರ್ಟ್ಸ್ ನಲ್ಲಿ ವೀಕ್ಷಿಸಬಹುದು. ಅಲ್ಲದೇ ಸ್ಟಾರ್​ ಸ್ಪೋರ್ಟ್ಸ್ ಮತ್ತು ಲೈವ್​ ಸ್ಟ್ರೀಮಿಂಗ್​ ಅನ್ನು ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ ನೋಡಬಹುದು.

Published by:shrikrishna bhat
First published: