• Home
  • »
  • News
  • »
  • sports
  • »
  • T20 World Cup 2022: ಸೆಮೀಸ್​ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್, ಗಾಯಗೊಂಡ ರೋಹಿತ್ ಶರ್ಮಾ

T20 World Cup 2022: ಸೆಮೀಸ್​ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್, ಗಾಯಗೊಂಡ ರೋಹಿತ್ ಶರ್ಮಾ

ರೋಹಿತ್ ಶರ್ಮಾ

ರೋಹಿತ್ ಶರ್ಮಾ

T20 World Cup 2022: ಭಾರತ ತಂಡವು ನವೆಂಬರ್ 10 ರಂದು ಅಡಿಲೇಡ್ ಓವಲ್‌ನಲ್ಲಿ T20 ವಿಶ್ವಕಪ್ 2022 ರ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಬೇಕಾಗಿದೆ. ಇದೇ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ನೆಟ್ಸ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ.

  • Share this:

ಸುಮಾರು 15 ವರ್ಷಗಳ ನಂತರ ಭಾರತೀಯ ಕ್ರಿಕೆಟ್​ ಅಭಿಮಾನಿಗಳಲ್ಲಿ ಮತ್ತೊಮ್ಮೆ ವಿಶ್ವಕಪ್​ ಗೆಲ್ಲುವ ಕನಸು ಚಿಗುರೊಡೆದಿದೆ. ಹೌದು, ಈ ಬಾರಿಯ ಟಿ20 ವಿಶ್ವಕಪ್ 2022ರಲ್ಲಿ (T20 World Cup 2022) ಭಾರತ ತಂಡ (Team India) ಈಗಾಗಲೇ ಸೆಮಿ ಫೈನಲ್​ ತಲುಪಿದೆ. ಸೆಮೀಸ್​ನಲ್ಲಿ ಭಾರತ ತಂಡವು ಇಂಗ್ಲೆಂಡ್​ (IND vs ENG) ತಂಡವನ್ನು ಎದುರಿಸಲಿದೆ. ಇದಕ್ಕಾಗಿ ಟೀಂ ಇಂಡಿಯಾ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದೆ. ಆದರೆ ಸೆಮಿಫೈನಲ್‌ಗೂ ಮುನ್ನ ಟೀಂ ಇಂಡಿಯಾ ಕೊಂಚ ಹಿನ್ನಡೆ ಆಗಿದೆ. ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಗಾಯಗೊಂಡಿದ್ದಾರೆ. ಇದು ಇದೀಗ ಭಾರತ ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ.


ಮಂಗಳವಾರ ಬೆಳಗ್ಗೆ ರೋಹಿತ್ ನೆಟ್ಸ್‌ನಲ್ಲಿ ಎಸ್ ರಘು ಅವರೊಂದಿಗೆ ಥ್ರೋ ಡೌನ್ ಅಭ್ಯಾಸ ನಡೆಸುತ್ತಿದ್ದರು. ಆಗ ಅವರ ಬಲಗೈಗೆ ಚೆಂಡು ಬಡಿದಿದೆ. ನೋವಿನಿಂದ ರೋಹಿತ್ ಶರ್ಮಾ ತಕ್ಷಣವೇ ನೆಟ್ ಬಿಟ್ಟು ನಿರ್ಗಮಿಸಿದರು. ಇದಾದ ಬಳಿಕ ಅವರ ಕೈ ಗೆ ಐಸ್ ಪ್ಯಾಕ್ ಕಟ್ಟಿರುವುದು ಕಂಡುಬಂದಿದೆ.


ಗಾಯಗೊಂಡ ರೋಹಿತ್ ಶರ್ಮಾ:


ಇನ್ನು, ನೆಟ್​ ಅಭ್ಯಾಸದ ವೇಳೆ ರೋಹಿತ್ ಶರ್ಮ, ಅವರ ಮುಂಗೈಗೆ ಗಾಯವಾಗಿದೆ. ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ರೋಹಿತ್ ಅವರೊಂದಿಗೆ ಬಹಳ ಸಮಯ ಮಾತನಾಡುತ್ತಿರುವುದು ಕಂಡುಬಂದಿದೆ. ರೋಹಿತ್ ಶರ್ಮಾ ಅವರ ಗಾಯ ಎಷ್ಟು ಆಳವಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ, ರೋಹಿತ್ ನೆಟ್ಸ್ ನಲ್ಲಿ ಮತ್ತೆ ಅಭ್ಯಾಸ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.ಈಗ ನಡೆಯುತ್ತಿರುವ T20 ವಿಶ್ವಕಪ್‌ನಲ್ಲಿ, ರೋಹಿತ್‌ಗೆ ಪವರ್-ಪ್ಲೇಗಳಲ್ಲಿ ಭಾರತಕ್ಕೆ ದೊಡ್ಡ ಆರಂಭವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಭಾರತ ತಂಡ ಈಗ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದರೂ, ರೋಹಿತ್ ಅವರ ಫಾರ್ಮ್ ಆತಂಕಕ್ಕೆ ಕಾರಣವಾಗಲಿದ್ದು, ಕೇವಲ ಐದು ಪಂದ್ಯಗಳಲ್ಲಿ 17 ರ ಸರಾಸರಿಯಲ್ಲಿ 89 ರನ್ ಗಳಿಸಿದ್ದಾರೆ.


ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ನಲ್ಲಿ ಮತ್ತೊಮ್ಮೆ ಭಾರತ-ಪಾಕ್​ ಫೈಟ್​? 15 ವರ್ಷಗಳ ಬಳಿಕ ಮರುಕಳಿಸುತ್ತಾ ಇತಿಹಾಸ?


ರೋಹಿತ್ ಫಾರ್ಮ್​ಗೆ ಮರಳಬೇಕು:


ಭಾರತದ ಮಾಜಿ ದಿಗ್ಗಜ ಸುನಿಲ್ ಗವಾಸ್ಕರ್, 'ರೋಹಿತ್ ನೇತೃತ್ವದ ಭಾರತ ತಂಡವು ಭಾನುವಾರ ನಡೆಯಲಿರುವ ಎಂಸಿಜಿಯಲ್ಲಿ ಫೈನಲ್‌ನಲ್ಲಿ ಸ್ಥಾನ ಪಡೆಯಲು ಗುರುವಾರ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ್ನು ಎದುರಿಸಲು ಸಜ್ಜಾಗಿರುವುದರಿಂದ, ರೋಹಿತ್ ಬ್ಯಾಟ್‌ನೊಂದಿಗೆ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಾರೆ ಮತ್ತು ಒಂಬತ್ತು ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಲು ಅವರಿಗೆ ಅವಕಾಶವನ್ನು ನೀಡುತ್ತಾರೆ ಎಂದು ಗವಾಸ್ಕರ್ ಭರವಸೆ ಹೇಳಿದ್ದಾರೆ. ಅಲ್ಲದೇ ರೋಹಿತ್ ಆರಂಭಿಕರಾಗಿ ಮತ್ತೆ ಫಾರ್ಮ್​ಗೆ ಮರಳುವುದು ಈ ಮಹತ್ವದ ಟೂರ್ನಿಯಲ್ಲಿ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ.
ಟಿ20 ವಿಶ್ವಕಪ್​ಗೆ ಭಾರತ ತಂಡ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ದೀಪಕ್ ಹೂಡ, ಚಹಾಲ್, ಅಶ್ವಿನ್, ಅಕ್ಷರ್ ಪಟೇಲ್, ಶಮಿ, ಭುವನೇಶ್ವರ್ ಕುಮಾರ್, ಅರ್ಶ್ ದೀಪ್ ಸಿಂಗ್

Published by:shrikrishna bhat
First published: