• Home
  • »
  • News
  • »
  • sports
  • »
  • Ind Vs Eng, T20 World Cup 2022: ಭಾರತ-ಇಂಗ್ಲೆಂಡ್​ ಸೆಮೀಸ್​ ಕದನ, ಹೇಗಿದೆ ಉಭಯ ತಂಡಗಳ ಬಲಾಬಲ?

Ind Vs Eng, T20 World Cup 2022: ಭಾರತ-ಇಂಗ್ಲೆಂಡ್​ ಸೆಮೀಸ್​ ಕದನ, ಹೇಗಿದೆ ಉಭಯ ತಂಡಗಳ ಬಲಾಬಲ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Ind Vs Eng, T20 World Cup 2022: ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ತಲುಪಿದೆ. ಭಾರತ ಸೆಮಿಫೈನಲ್ ಪಂದ್ಯದಲ್ಲಿ ನವೆಂಬರ್ 10ರಂದು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

  • Share this:

ಟಿ20 ವಿಶ್ವಕಪ್ ನಲ್ಲಿ (T20 WC 2022) ಟೀಂ ಇಂಡಿಯಾ ಸೆಮಿಫೈನಲ್ ಹಂತ ತಲುಪಿದೆ. ಭಾರತದೊಂದಿಗೆ ಪಾಕಿಸ್ತಾನ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಕೂಡ ಸೆಮಿಫೈನಲ್ ತಲುಪಿವೆ. ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಪಾಕಿಸ್ತಾನವನ್ನು ಎದುರಿಸಲಿದೆ ಮತ್ತು ಭಾರತವು ಇಂಗ್ಲೆಂಡ್ ಅನ್ನು ಎದುರಿಸಲಿದೆ. ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ (NZ vs PAK) ನಡುವಿನ ಸೆಮಿಫೈನಲ್ ನವೆಂಬರ್ 9 ರಂದು ಬುಧವಾರ ಹಾಗೂ ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ ಸೆಮಿಫೈನಲ್ ನವೆಂಬರ್ 10ರ ಗುರುವಾರ ನಡೆಯಲಿದೆ. ಈ ಎರಡೂ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಟಿ20 ವಿಶ್ವಕಪ್‌ನ ಸೆಮಿಫೈನಲ್ ನವೆಂಬರ್ 13 ರಂದು ನಡೆಯಲಿದೆ. ಹಾಗಿದ್ದರೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಬಲಾಬಲ ಎಷ್ಟಿದೆ ಎಂದು ನೋಡೋಣ.


ಭಾರತ-ಇಂಗ್ಲೆಂಡ್ ದಾಖಲೆ:


ಭಾರತ ಮತ್ತು ಇಂಗ್ಲೆಂಡ್ ನಡುವೆ ಇದುವರೆಗೆ 22 ಟಿ20 ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ 12 ಪಂದ್ಯಗಳನ್ನು ಗೆದ್ದಿದೆ ಮತ್ತು ಇಂಗ್ಲೆಂಡ್ 10 ಪಂದ್ಯಗಳನ್ನು ಗೆದ್ದಿದೆ. ಟಿ20 ವಿಶ್ವಕಪ್‌ನಲ್ಲಿ ಈ ಎರಡು ತಂಡಗಳ ನಡುವೆ 3 ಪಂದ್ಯಗಳು ನಡೆದಿದ್ದು, ಅದರಲ್ಲಿ 2 ಪಂದ್ಯವನ್ನು ಭಾರತ ಮತ್ತು ಒಂದು ಪಂದ್ಯವನ್ನು ಇಂಗ್ಲೆಂಡ್ ಗೆದ್ದಿದೆ. 2012ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಕೊನೆಯ ಪಂದ್ಯವಾಗಿತ್ತು.


ಈ ಎರಡು ತಂಡಗಳು 2007ರಲ್ಲಿ ಮೊದಲ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರು ಸ್ಟುವರ್ಟ್ ಬ್ರಾಡ್ ಅವರನ್ನು 6 ಎಸೆತಗಳಲ್ಲಿ 6 ಸಿಕ್ಸರ್‌ಗಳೊಂದಿಗೆ ಹೊಡೆದಿದ್ದರು. ದಾಖಲೆ ನೋಡಿದರೆ ವಿಶ್ವಕಪ್ ನಲ್ಲಿ ಮಾತ್ರವಲ್ಲ ಒಟ್ಟಾರೆ ಟಿ20 ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಗಿಂತ ಭಾರತ ಬಲಾಢ್ಯವಾಗಿದೆ. ಆದರೆ ಟಿ20 ಕ್ರಿಕೆಟ್ ನ ಒಂದು ಓವರ್ ನಲ್ಲಿ ಪಂದ್ಯದ ಚಿತ್ರಣವೇ ಬದಲಾಗಬಹುದು. ಹಾಗಾಗಿ ಟೀಂ ಇಂಡಿಯಾ ಅವರ ದಾಖಲೆಯ ಪ್ರಕಾರ ಮಾತ್ರ ನೊಡಲು ಸಾಧ್ಯವಾಗದು.


ಇದನ್ನೂ ಓದಿ: T20 World Cup 2022: ಸೆಮೀಸ್​ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್, ಗಾಯಗೊಂಡ ರೋಹಿತ್ ಶರ್ಮಾ


ಭಾರತ-ಇಂಗ್ಲೆಂಡ್​ ತಂಡ:


ಭಾರತೀಯ ತಂಡ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್


ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಅಲೆಕ್ಸ್ ಹೇಲ್ಸ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಸ್ಯಾಮ್ ಕರ್ರಾನ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಜೋಸ್ ಬಟ್ಲರ್, ಫಿಲಿಪ್ ಸಾಲ್ಟ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಮಾರ್ಕ್ ವುಡ್, ಟೈಮಲ್ ಮಿಲ್ಸ್.


ಇದನ್ನೂ ಓದಿ: 


ಗಾಯಗೊಂಡ ರೋಹಿತ್ ಶರ್ಮಾ:


ಇನ್ನು, ನೆಟ್​ ಅಭ್ಯಾಸದ ವೇಳೆ ರೋಹಿತ್ ಶರ್ಮ, ಅವರ ಮುಂಗೈಗೆ ಗಾಯವಾಗಿದೆ. ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ರೋಹಿತ್ ಅವರೊಂದಿಗೆ ಬಹಳ ಸಮಯ ಮಾತನಾಡುತ್ತಿರುವುದು ಕಂಡುಬಂದಿದೆ. ರೋಹಿತ್ ಶರ್ಮಾ ಅವರ ಗಾಯ ಎಷ್ಟು ಆಳವಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ, ರೋಹಿತ್ ನೆಟ್ಸ್ ನಲ್ಲಿ ಮತ್ತೆ ಅಭ್ಯಾಸ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.

Published by:shrikrishna bhat
First published: