• Home
  • »
  • News
  • »
  • sports
  • »
  • Ind vs Eng T20 World Cup 2022: ಇಂದು ಭಾರತ-ಇಂಗ್ಲೆಂಡ್​ ಮೆಗಾ ಫೈಟ್​, ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್​ 11

Ind vs Eng T20 World Cup 2022: ಇಂದು ಭಾರತ-ಇಂಗ್ಲೆಂಡ್​ ಮೆಗಾ ಫೈಟ್​, ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND sv ENG

IND sv ENG

IND vs ENG: : ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇಂದು ಮುಖಾಮುಖಿಯಾಗಲಿವೆ. ಈ ಪಂದ್ಯ ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ ನಡೆಯಲಿದೆ. ಈಗಾಗಲೇ ಪಾಕಿಸ್ತಾನ ತಂಡವು ನ್ಯೂಜಿಲ್ಯಾಂಡ್​ ವಿರುದ್ಧ ಗೆದ್ದು ಫೈನಲ್​ ಪ್ರವೇಶಿಸಿದೆ.

  • Share this:

ಇಂದು ಟಿ20 ವಿಶ್ವಕಪ್‌ನ (T20 World Cup 2022) ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ (Ind Vs Eng) ತಂಡವನ್ನು ಎದುರಿಸಲಿದೆ. ಈ ಪಂದ್ಯ  ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ (Adelaide Oval) ನಡೆಯಲಿದೆ. ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ (Team India) ನಾಲ್ಕನೇ ಬಾರಿಗೆ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಎರಡು ಬಾರಿ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ. ಇಂಗ್ಲೆಂಡ್ ತಂಡ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಮೊದಲ ಸೆಮೀಸ್ ನಲ್ಲಿ​ ಕಿವೀಸ್​ ತಂಡವನ್ನು ಸೋಲಿಸಿ ಪಾಕಿಸ್ತಾನ ತಂಡವು ಈ ಬಾರಿಯ ವಿಶ್ವಕಪ್​ನಲ್ಲಿ ಮೊದಲ ತಂಡವಾಗಿ ಫೈನಲ್​ ಪ್ರವೇಶಿಸಿದೆ. 


ಪಂದ್ಯದ ವಿವರ: 


ಇಂದು ಟಿ20 ವಿಶ್ವಕಪ್​ನ 2ನೇ ಸೆಮಿ ಫೈನಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್​ ತಂಡಗಳು ಸೆಣಸಾಡಲಿವೆ. ಈ ಪಂದ್ಯವು ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ (Adelaide Oval) ನಡೆಯಲಿದೆ. ಈ ಪಂದ್ಯವು ಮಧ್ಯಾಹ್ನ 1:30 ರಿಂದ ನಡೆಯಲಿದೆ. ಪಂದ್ಯ ಆರಂಭಕ್ಕೆ ಅರ್ಧ ಗಂಟೆ ಮೊದಲು 1.00 ಗಂಟೆಗೆ ಟಾಸ್ ನಡೆಯಲಿದೆ. ಸೆಮಿಫೈನಲ್‌ನ ನೇರ ಪ್ರಸಾರವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ವೀಕ್ಷಿಸಬಹುದು. ಡಿಡಿ ಸ್ಪೋರ್ಟ್ಸ್​ನಲ್ಲಿ ಉಚಿತವಾಗಿ ನೋಡಬಹುದು.


ಪಿಚ್​ ವರದಿ:


ಅಡಿಲೇಡ್ ಓವಲ್ ಮೇಲ್ಮೈ ಅತ್ಯುತ್ತಮ ಬ್ಯಾಟಿಂಗ್ ಸ್ನೇಹಿ ಪಿಚ್ ಎಂದು ಪರಿಗಣಿಸಲಾಗಿದೆ. ಅಡಿಲೇಡ್ ಓವಲ್ 90 ಮೀಟರ್‌ಗಳಲ್ಲಿ ಅತಿ ದೊಡ್ಡ ನೇರ ಬೌಂಡರಿಗಳೊಂದಿಗೆ ವಿಶಿಷ್ಟವಾದ ಆಟದ ಆಯಾಮವನ್ನು ಹೊಂದಿದೆ.  ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು ಶೇಕಡಾ 40 ರಷ್ಟು ಯಶಸ್ಸಿನ ಪ್ರಮಾಣವನ್ನು ಹೊಂದಿವೆ. ಹೀಗಾಗಿ ಇಂದು ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದರ ಜೊತೆಗೆ ಇಂದಿನ ಪಂದ್ಯಕ್ಕೆ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.


ಇದನ್ನೂ ಓದಿ: IND vs ENG T20 WC 2022: ಇಂಗ್ಲೆಂಡ್​ ವೇಗಿಗಳೇ ಭಾರತದ ದೊಡ್ಡ ಟೆಕ್ಷನ್, ಅವರ ವಿರುದ್ಧವೂ ಅಬ್ಬರಿಸಿದ್ದಾರೆ ಟೀಂ ಇಂಡಿಯಾದ ಈ ಹೀರೋ


ಭಾರತ-ಇಂಗ್ಲೆಂಡ್​ ಹೆಡ್​ ಟು ಹೆಡ್​:


ಭಾರತ ಮತ್ತು ಇಂಗ್ಲೆಂಡ್​ ಹೆಡ್ ಟು ಹೆಡ್ ದಾಖಲೆಗಳಿಗೆ ಸಂಬಂಧಿಸಿದಂತೆ, ಭಾರತ ಮತ್ತು ಇಂಗ್ಲೆಂಡ್ 22 ಬಾರಿ ಪರಸ್ಪರ ಆಡಿದ್ದು, ಅಲ್ಲಿ ಭಾರತ 12 ಪಂದ್ಯಗಳಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದೆ ಮತ್ತು ಇಂಗ್ಲೆಂಡ್ 10 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ . ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ನಾಲ್ಕನೇ ಬಾರಿಗೆ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಎರಡು ಬಾರಿ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ. ಇಂಗ್ಲೆಂಡ್ ತಂಡ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ.


ಇದನ್ನೂ ಓದಿ:  Ind Vs Eng T20 World Cup 2022: ಇಂಗ್ಲೆಂಡ್​-ಟೀಂ ಇಂಡಿಯಾ ನಡುವೆ ನಾಳೆ ಬಿಗ್ ಫೈಟ್​, ಅಕ್ಷರ್​ ಬದಲು ಸ್ಪಿನ್ ಮಾಂತ್ರಿಕನಿಗೆ ಸಿಗುತ್ತಾ ಚಾನ್ಸ್?


IDN vs ENG ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ(C) , KL ರಾಹುಲ್ , ವಿರಾಟ್ ಕೊಹ್ಲಿ , ಸೂರ್ಯಕುಮಾರ್ ಯಾದವ್ , ಹಾರ್ದಿಕ್ ಪಾಂಡ್ಯ , ರವಿಚಂದ್ರನ್ ಅಶ್ವಿನ್ , ಅಕ್ಷರ್ ಪಟೇಲ್ , ರಿಷಬ್ ಪಂತ್ , ಭುವನೇಶ್ವರ್ ಕುಮಾರ್ ,ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.


ಇಂಗ್ಲೆಂಡ್​ ಸಂಭಾವ್ಯ ಪ್ಲೇಯಿಂಗ್ 11: ಜೋಸ್​ ಬಟ್ಲರ್ (c & wk), ಅಲೆಕ್ಸ್ ಹೇಲ್ಸ್, ಫಿಲಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕುರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್

Published by:shrikrishna bhat
First published: