• Home
  • »
  • News
  • »
  • sports
  • »
  • IND vs BAN: ರೋಹಿತ್​ ಬದಲಿಗೆ ಬಂಗಾಳದ ಯಂಗ್​ ಪ್ಲೇಯರ್​ ಆಯ್ಕೆ? ಇವ್ರ ದಾಖಲೆ ನೋಡಿದ್ರೆ ಎಂಥವರೂ ಸೈಲೆಂಟ್​ ಆಗ್ತಾರೆ!

IND vs BAN: ರೋಹಿತ್​ ಬದಲಿಗೆ ಬಂಗಾಳದ ಯಂಗ್​ ಪ್ಲೇಯರ್​ ಆಯ್ಕೆ? ಇವ್ರ ದಾಖಲೆ ನೋಡಿದ್ರೆ ಎಂಥವರೂ ಸೈಲೆಂಟ್​ ಆಗ್ತಾರೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs BAN: ಎರಡನೇ ODI ವೇಳೆ ರೋಹಿತ್ ಶರ್ಮಾ ಗಾಯಗೊಂಡಿರುವುದು ಎಲ್ಲರಿಗೂ ತಿಳಿದಿದೆ. ಅಲ್ಲದೇ ಅವರು ಮುಂದಿನ ಏಕದಿನ ಮತ್ತು ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

  • Share this:

ಬಾಂಗ್ಲಾದೇಶ ವಿರುದ್ಧ2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರು ದೇಶಕ್ಕೆ ಮರಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಡಿಸೆಂಬರ್ 14 ರಿಂದ ಬಾಂಗ್ಲಾದೇಶ ವಿರುದ್ಧ (IND vs BAN) 2 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಆಧರೆ ಈ ಸರಣಿಯಲ್ಲಿ ರೋಹಿತ್​ ಭಾಗಿಯಾಗುವುದು ಅನುಮಾನವಾಗಿದೆ. ಅಲ್ಲದೇ ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC) ಭಾಗವಾಗಿದೆ. ಫೈನಲ್‌ಗೆ ರೇಸ್‌ನಲ್ಲಿರಲು ಭಾರತಕ್ಕೆ ಈ ಸರಣಿ ಬಹಳ ಮಹತ್ವದ್ದಾಗಿದೆ. ಇದೀಗ ರೋಹಿತ್​ ಬದಲಿಗೆ ಬಂಗಾಳದ ಯುವ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ (Abhimanyu Easwaran) ಅವರನ್ನು ಬ್ಯಾಕಪ್ ಆಗಿ ತಂಡಕ್ಕೆ ಸೇರಿಸಿಕೊಳ್ಳಬಹುದು.


ಅವರು ಪ್ರಸ್ತುತ ಬಾಂಗ್ಲಾದೇಶದಲ್ಲಿಯೇ ಇದ್ದಾರೆ. ಅವರು ಭಾರತ-ಎ ತಂಡದ ನಾಯಕರಾಗಿದ್ದಾರೆ. ಅವರು ಬಾಂಗ್ಲಾದೇಶ-ಎ ವಿರುದ್ಧದ ಎರಡೂ ಅನಧಿಕೃತ ಟೆಸ್ಟ್‌ಗಳಲ್ಲಿ ಆರಂಭಿಕರಾಗಿ ಶತಕ ಸಹ ಗಳಿಸಿದ್ದಾರೆ. ಹೀಗಾಗಿ ಅವರು ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಆಗುವ ಸಾಧ್ಯತೆ ಇದೆ.


ಬಂಗಾಳದ ಯಂಗ್​ ಪ್ಲೇಯರ್​ ಆಯ್ಕೆ?:


ಸುದ್ದಿ ಸಂಸ್ಥೆ, ಪಿಟಿಐ ಪ್ರಕಾರ, ಅಭಿಮನ್ಯು ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಬಹುದು. 27ರ ಹರೆಯದ ಅಭಿಮನ್ಯು ಈಶ್ವರ್ ಪ್ರಥಮ ದರ್ಜೆ, ಲಿಸ್ಟ್-ಎ ಮತ್ತು ಟಿ20 ಸೇರಿದಂತೆ 25 ಶತಕಗಳನ್ನು ಗಳಿಸಿದ್ದಾರೆ. ಹೀಗಿರುವಾಗ ಅವರು ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಆದರೂ ಅವರು ಇನ್ನೂ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿಲ್ಲ. ಅವರು ಇದುವರೆಗೆ 77 ಪ್ರಥಮ ದರ್ಜೆ ಪಂದ್ಯಗಳಲ್ಲಿ 44ರ ಸರಾಸರಿಯಲ್ಲಿ 5419 ರನ್ ಗಳಿಸಿದ್ದಾರೆ. 17 ಶತಕ ಹಾಗೂ 23 ಅರ್ಧ ಶತಕ ಗಳಿಸಿದ್ದಾರೆ. ಅಂದರೆ 40 ಬಾರಿ 50ಕ್ಕೂ ಹೆಚ್ಚು ರನ್ ಗಳ ಇನ್ನಿಂಗ್ಸ್ ಆಡಿದ್ದಾರೆ. 233 ರನ್‌ಗಳ ದೊಡ್ಡ ಇನ್ನಿಂಗ್ಸ್ ಕೂಡ ಆಡಿದ್ದಾರೆ.


ಲಿಸ್ಟ್ A ನಲ್ಲಿ ಅಭಿಮನ್ಯು ಭರ್ಜರಿ ದಾಖಲೆ:


ಲಿಸ್ಟ್ ಎ ನಲ್ಲಿಯೂ ಅಭಿಮನ್ಯು ಈಶ್ವರನ್ ಉತ್ತಮ ದಾಖಲೆ ಹೊಂದಿದ್ದಾರೆ. ಅವರು ಇದುವರೆಗೆ 78 ಪಂದ್ಯಗಳಲ್ಲಿ 46ರ ಸರಾಸರಿಯಲ್ಲಿ 3376 ರನ್ ಗಳಿಸಿದ್ದಾರೆ. 7 ಶತಕ ಮತ್ತು 21 ಅರ್ಧ ಶತಕ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 82 ಆಗಿದೆ. 149 ರನ್ ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಟಿ20 ದಾಖಲೆಯನ್ನು ನೋಡುವಾಗ, ಅವರು 27 ಪಂದ್ಯಗಳಲ್ಲಿ 38 ರ ಸರಾಸರಿಯಲ್ಲಿ 728 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 3 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 122 ಆಗಿದೆ.


ಇದನ್ನೂ ಓದಿ: Rohit Sharma: ಏಕದಿನ ವಿಶ್ವಕಪ್​ಗೂ ಮುನ್ನ ಸಂಕಷ್ಟದಲ್ಲಿ ರೋಹಿತ್, ಬದಲಾಗುತ್ತಾ ಟೀಂ ಇಂಡಿಯಾ ನಾಯಕತ್ವ?


ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಸರ್ವಿಸಸ್ ವಿರುದ್ಧ ಅಭಿಮನ್ಯು ಈಶ್ವರನ್ 122 ರನ್ ಗಳಿಸಿದರು. ನಂತರ ಬಾಂಗ್ಲಾದೇಶ-ಎ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್‌ನಲ್ಲಿ 141 ಮತ್ತು ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 157 ರನ್ ಗಳಿಸಿದ್ದಾರೆ. ಅಂದರೆ, ಸತತ 3 ಪಂದ್ಯಗಳಲ್ಲಿ 3 ಶತಕ ಬಾರಿಸಿದ್ದಾರೆ.


ತಂಡವನ್ನು ಸೇರಿಕೊಳ್ಳಲಿದ್ದಾರೆ ಜಡ್ಡು:


ಬಂಗಾಳದ ವೇಗದ ಬೌಲರ್ ಮುಖೇಶ್ ಕುಮಾರ್ ಅಥವಾ ಉಮ್ರಾನ್ ಮಲಿಕ್ ಗಾಯಗೊಂಡಿರುವ ಮೊಹಮ್ಮದ್ ಶಮಿ ಬದಲಿಗೆ ಆಯ್ಕೆ ಆಗಬಹುದು. ಆದರೆ ಶಮಿ ಆಡುವುದರ ಬಗ್ಗೆ ಈವರೆಗೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮೊಣಕಾಲು ಆಪರೇಷನ್ ನಂತರ ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗದ ಆಲ್ ರೌಂಡರ್ ರವೀಂದ್ರ ಜಡೇಜಾ ನೇರವಾಗಿ ಟೆಸ್ಟ್ ಆಡಲಿದ್ದಾರೆ. ಅಕ್ಷರ್ ಪಟೇಲ್ ತಂಡದಲ್ಲಿದ್ದು, ಸೌರಭ್ ಕುಮಾರ್ ಅವರನ್ನು ಬ್ಯಾಕಪ್ ಆಗಿ ಎ ತಂಡದಿಂದ ಕರೆಯಬಹುದು.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು