• Home
  • »
  • News
  • »
  • sports
  • »
  • T20 WC 2022 IND vs BAN: ನಾಳೆ ಭಾರತ-ಬಾಂಗ್ಲಾ ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

T20 WC 2022 IND vs BAN: ನಾಳೆ ಭಾರತ-ಬಾಂಗ್ಲಾ ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs BAN

IND vs BAN

T20 WC 2022 IND vs BAN: ಟಿ20 ವಿಶ್ವಕಪ್ ಗ್ರೂಪ್ 12 ರ 35 ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ನವೆಂಬರ್ 2 ರಂದು ಅಡಿಲೇಡ್‌ನಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 1:30 ರಿಂದ ನಡೆಯಲಿದೆ.

  • Share this:

ಟಿ20 ವಿಶ್ವಕಪ್ ಸೂಪರ್ 12ರ 35ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ (IND vs BAN) ಕ್ರಿಕೆಟ್ ತಂಡಗಳು ನಾಳೆ (ನವೆಂಬರ್ 2) ಮುಖಾಮುಖಿಯಾಗಲಿವೆ. ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ (Team India) ಸೋತಿತ್ತು. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯವನ್ನು ಗೆದ್ದು ಸೆಮಿಫೈನಲ್ ರೇಸ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಟೀಂ ಇಂಡಿಯಾ ಸಿದ್ಧವಾಗಿದೆ.  ರೋಹಿತ್ ಶರ್ಮಾ (Rohit Sharma) ನಾಯಕತ್ವದ ಭಾರತ ತಂಡವು ಅಡಿಲೇಡ್‌ನಲ್ಲಿ (Adelaide) ಗೆಲುವು ದಾಖಲಿಸುವ ಮೂಲಕ ಎರಡನೇ ಗುಂಪಿನ ಪಾಯಿಂಟ್‌ಗಳ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವ ತವಕದಲ್ಲಿದ್ದರೆ, ಇತ್ತ ಬಾಂಗ್ಲಾ ಸಹ ಗೆದ್ದು ಸೆಮೀಸ್ ಹಾದಿಯನ್ನು ಸುಗಮಗೊಳಿಸಿಕೋಳ್ಳಲು ಪ್ರಯತ್ನಿಸಲಿದೆ.  ಬಾಂಗ್ಲಾದೇಶ ಮೂರು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಹೊಂದಿದೆ ಮತ್ತು ಗುಂಪು 2 ರ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 


ಪಂದ್ಯದ ವಿವರ:


ನಾಳೆ ಆಸ್ಟ್ರೇಲಿಯಾದ ಅಡಿಲೇಡ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ. ಈ ಪಂದ್ಯವು ಭಾರತೀಯ ಕಾಲಮಾನ  ಮಧ್ಯಾಹ್ನ 1:30 ರಿಂದ ನಡೆಯಲಿದೆ. ಟಾಸ್ ಅರ್ಧ ಗಂಟೆ ಮೊದಲು ಅಂದರೆ ಮಧ್ಯಾಹ್ನ 1:00 ಗಂಟೆಗೆ ನಡೆಯಲಿದೆ. ಈ ಪಂದ್ಯವನ್ನು ಉಚಿತವಾಗಿ ಡಿಡಿ ಸ್ಪೋರ್ಟ್ಸ್ ನಲ್ಲಿ ವೀಕ್ಷಿಸಬಹುದು. ಅಲ್ಲದೇ ಪಂದ್ಯದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಮತ್ತು ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.


ಪಿಚ್ ವರದಿ:


ನಾಳಿನ ಟಿ20 ವಿಶ್ವಕಪ್​ನ 35ನೇ ಪಂದ್ಯದಲ್ಲಿ ಭಾರತ-ಬಾಂಗ್ಲಾ ಮುಖಾಮುಖಿ ಆಗಲಿದ್ದು, ಈ ಪಂದ್ಯವು ಅಡಿಲೇಡ್‌ನಲ್ಲಿ ನಡೆಯಲಿದೆ. ಇಲ್ಲಿನ ಪಿಚ್ ಬ್ಯಾಟಿಂಗ್ ಸ್ವರ್ಗ ಎಂದೇ ಕರೆಯಲಾಗುತ್ತದೆ. ಈ ಮೈದಾನದಲ್ಲಿ 160 ರನ್ ಸರಾಸರಿ ಸ್ಕೋರ್​ ಆಗಿದ್ದು, ವೇಗಿಗಳಿಗೆ ಹೆಚ್ಚು ಲಾಭವಾಗಲಿದ್ದು, ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್ ಚಾಂಪಿಯನ್ ತಂಡಗಳಿಗೆ ಶಾಕ್, ಈ ಬಾರಿ ಕಪ್​ ಗೆಲ್ಲೋದು ಹೊಸ ತಂಡವಂತೆ?


ಭಾರತ-ಬಾಂಗ್ಲಾ ಹೆಡ್​ ಟು ಹೆಡ್​:


ಟಿ 20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ತಂಡಗಳ ನಡುವೆ ಒಟ್ಟು 11 ಪಂದ್ಯಗಳು ನಡೆದಿವೆ, ಅಲ್ಲಿ ಭಾರತವು ಮೇಲುಗೈ ಸಾಧಿಸಿದೆ. ಭಾರತ ತಂಡ 10 ಪಂದ್ಯಗಳನ್ನು ಗೆದ್ದಿದ್ದರೆ, ಬಾಂಗ್ಲಾದೇಶ ಕೇವಲ ಒಂದು ಪಂದ್ಯವನ್ನು ಗೆದ್ದಿದೆ. ಅಲ್ಲದೇ ಉಭಯ ತಂಡಗಳು ಟಿ20 ವಿಶ್ವಕಪ್​ನಲ್ಲಿ 2009, 2014 ಮತ್ತು 2016ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು. 2009ರಲ್ಲಿ ಟೀಂ ಇಂಡಿಯಾ 25 ರನ್‌ಗಳಿಂದ ಗೆದ್ದಿದ್ದರೆ, 2014ರಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ಎಂಟು ವಿಕೆಟ್‌ಗಳ ಜಯ ಸಾಧಿಸಿತ್ತು. 2016ರಲ್ಲಿ ಟೀಂ ಇಂಡಿಯಾ ಒಂದು ರನ್‌ನಿಂದ ಜಯಭೇರಿ ಬಾರಿಸಿತ್ತು.


ಇದನ್ನೂ ಓದಿ: RCB ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ಕರ್ನಾಟಕದ ಈ 4 ನಗರಗಳಲ್ಲಿ ನಡೆಯಲಿದೆ IPL


IND vs BAN ಸಂಭವನೀಯ ಪ್ಲೇಯಿಂಗ್ XI:


ಭಾರತ ಸಂಭಾವ್ಯ ತಂಡ: ಕೆಎಲ್ ರಾಹುಲ್, ರೋಹಿತ್ ಶರ್ಮಾ (C), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಹೂಡಾ, ರಿಷಭ್ ಪಂತ್, ಅಕ್ಸರ್ ಪಟೇಲ್, ಶಮಿ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್


ಬಾಂಗ್ಲಾದೇಶ ಸಂಭಾವ್ಯ ತಂಡ: ನಜ್ಮುಲ್ ಶಾಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್, ಯಾಸಿರ್ ಅಲಿ, ಅಫೀಫ್ ಹೊಸೈನ್, ನೂರುಲ್ ಹಸನ್, ಮುಸ್ತಾಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ಮೊಸಾಡೆಕ್ ಹೊಸೈನ್, ಹಸನ್ ಮಹಮೂದ್.

Published by:shrikrishna bhat
First published: