• Home
  • »
  • News
  • »
  • sports
  • »
  • IND vs BAN: ಬಾಂಗ್ಲಾ ವಿರುದ್ಧದ ಗೆಲುವಿನ ನಿಜವಾದ ಹೀರೋ ಈ ಕನ್ನಡಿಗ, ಅಭಿಮಾನಿಗಳ ಹೃದಯ ಗೆದ್ದ ರಘು!

IND vs BAN: ಬಾಂಗ್ಲಾ ವಿರುದ್ಧದ ಗೆಲುವಿನ ನಿಜವಾದ ಹೀರೋ ಈ ಕನ್ನಡಿಗ, ಅಭಿಮಾನಿಗಳ ಹೃದಯ ಗೆದ್ದ ರಘು!

ರಘು

ರಘು

IND vs BAN: ಭಾರತದ ಬ್ಯಾಟ್ಸ್‌ಮನ್‌ಗಳಿಗೆ ನೆಟ್ಸ್‌ನಲ್ಲಿ ಅಭ್ಯಾಸ ಮಾಡಲು ಸಹಾಯ ಮಾಡುವುದು ರಘು ಅವರ ಕೆಲಸವಾಗಿತ್ತು. ಆದರೆ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರಘು ಮಾಡಿರುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  • Share this:

ಅಡಿಲೇಡ್ (Adelaide) ಮೈದಾನದಲ್ಲಿ ಡಕ್ವರ್ತ್ ಲೂಯಿಸ್ ನಿಯಮದಡಿ ಭಾರತ ತಂಡ ಬಾಂಗ್ಲಾದೇಶವನ್ನು (IND vs BAN) 5 ರನ್‌ಗಳಿಂದ ಸೋಲಿಸಿತು. ಇದು ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡದ ಮೂರನೇ ಗೆಲುವಾಗಿದೆ. ಹೀಗಾಗಿ ತಂಡ 6 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ತಲುಪಿದೆ. ಬುಧವಾರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಭಾರತ ತಂಡಕ್ಕೆ (TeamIndia) ಆಟಗಾರನೊಬ್ಬ ಮೈದಾನದ ಹೊರಗೆ ಸಹಾಯ ಮಾಡಿದ್ದು ಇದೀಗ ವಿಶ್ ಕ್ರಿಕೆಟ್​ನಲ್ಲಿ ಚರ್ಚೆಯ ವಿಷಯವಾಗಿದೆ. ಹೌದು, ಪಂದ್ಯ ಆರಂಭವಾದಾಗ ಟೀಂ ಇಂಡಿಯಾದ ಸೈಡ್ ಆರ್ಮ್ ಥ್ರೋವರ್ ರಘು (Raghu) ಬೌಂಡರಿ ಗೆರೆಯಲ್ಲಿ ನಿಂತಿದ್ದರು. ರಘು ಬೌಂಡರಿ ಗೆರೆಯ ಇನ್ನೊಂದು ಬದಿಯಲ್ಲಿ ನಿಂತು ಟೀಂ ಇಂಡಿಯಾ ಆಟಗಾರರಿಗೆ ಸಹಯಾ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.


ಅಭಿಮಾನಿಗಳ ಮನಗೆದ್ದ ರಘು:


ಇನ್ನು, ನಿನ್ನೆ ನಡೆದ ಭಾರತ-ಬಾಂಗ್ಲಾ ಪಂದ್ಯದಲ್ಲಿ ಸೈಡ್ ಆರ್ಮ್ ಥ್ರೋವರ್ ರಘು ಅವರು ಶೂ ಕ್ಲೀನ್ ಮಾಡುತ್ತಲೇ ಇದ್ದರು. ರಾಘು ತನ್ನ ಆಟ ಮತ್ತು ತನ್ನ ದೇಶದ ಮೇಲಿನ ನಿಷ್ಠೆಯಿಂದಾಗಿ ತಂಡಕ್ಕಾಗಿ ಏನು ಬೇಕಾದರೂ ಮಾಡಲು ಹಿಂಜರಿಯಲಿಲ್ಲ. ಪಂದ್ಯದ ವೇಳೆ ರಘು ಬ್ರಷ್ ಹಿಡಿದು ನಿಂತಿರುವುದು ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಬೌಂಡರಿ ಗಡಿಯಲ್ಲಿ ಬ್ರೆಶ್​ ಹಿಡಿದು ಏನು ಮಾಡುತ್ತಿರೆ ಎಂಬುದರ ಮಹತ್ವ ತಿಳಿದ ನಂತರ ರಘು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸೆ ಪಡೆಯುತ್ತಿದ್ದಾರೆ.


ರಘು ಭಾರತ ತಂಡದ ಸೈಡ್ ಆರ್ಮ್ ಥ್ರೋ ಡೌನ್ ಸ್ಪೆಷಲಿಸ್ಟ್. ಭಾರತದ ಬ್ಯಾಟ್ಸ್‌ಮನ್‌ಗಳಿಗೆ ನೆಟ್ಸ್‌ನಲ್ಲಿ ಅಭ್ಯಾಸ ಮಾಡಲು ಸಹಾಯ ಮಾಡುವುದು ರಘು ಅವರ ಕೆಲಸವಾಗಿತ್ತು. ಆದರೆ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರಘು ಮೇಲುಗೈ ಸಾಧಿಸಿದ್ದು, ದೇಶಾದ್ಯಂತ ಕ್ರೀಡಾ ಪ್ರೇಮಿಗಳು ಅವರನ್ನು ಶ್ಲಾಘಿಸುತ್ತಿದ್ದಾರೆ.


ಇದನ್ನೂ ಓದಿ: IND vs BAN: ಭಾರತ-ಬಾಂಗ್ಲಾ ಪಂದ್ಯದ ಟರ್ನಿಂಗ್ ಪಾಯಿಂಟ್ ಇದು, ಅದೊಂದು ಎಸೆತ ಮ್ಯಾಚ್​ನ ದಿಕ್ಕನ್ನೇ ಬದಲಿಸಿತು


ಆಟಗಾರರ ಶೂ ಕ್ಲೀನ್ ಮಾಡಿ ಸಹಾಯ ಮಾಡಿದ ರಘು:


ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ ಬ್ಯಾಟಿಂಗ್ ಆರಂಭಿಸಿದ 7 ಓವರ್‌ಗಳ ನಂತರ ಮಳೆ ಆರಂಭವಾಯಿತು. ಇದರಿಂದಾಗಿ ಪಂದ್ಯ ಕೆಲಕಾಲ ಸ್ಥಗಿತಗೊಂಡಿತ್ತು. ಮಳೆ ನಿಂತ ಬಳಿಕ ಆಟ ಪುನರಾರಂಭವಾಯಿತು. ಆದರೆ, ಮಳೆಯಿಂದಾಗಿ ಮೈದಾನ ಕೊಂಚ ಕೆಸರುಮಯವಾಗಿತ್ತು. ಹಾಗಾಗಿ ಚೆಂಡನ್ನು ಹಿಡಿಯಲು ಓಡುವಾಗ ಆಟಗಾರ ಜಾರಿ ಬೀಳುವ ಸಾಧ್ಯತೆ ಇತ್ತು. ಮೈದಾನ ಒದ್ದೆಯಾಗಿದ್ದರಿಂದ ಆಟಗಾರರ ಶೂಗೆ ಮಣ್ಣು ಅಂಟಿಕೊಂಡಿತ್ತು. ಇದರಿಂದ ಟೀಂ ಇಂಡಿಯಾ ಆಟಗಾರರು ಬಿದ್ದು ಗಾಯಗೊಳ್ಳುವ ಸಾಧ್ಯತೆ ಇತ್ತು. ಆ ವೇಳೆ ರಘು ಟೀಂ ಇಂಡಿಯಾ ರಕ್ಷಣೆಗೆ ಬಂದು ತಂಡದ ಉತ್ತಮ ಪ್ರದರ್ಶನಕ್ಕೆ ಕಾರಣರಾದರು.


ಮಳೆಯ ನಂತರ ಪಂದ್ಯ ಆರಂಭವಾದಾಗ ರಘು ಬೌಂಡರಿಗೆ ಹೋಗಿ ನಿಂತರು. ಅವರ ಕೈಯಲ್ಲಿ ಬ್ರಷ್ ಇತ್ತು. ಭಾರತ ತಂಡ ಫೀಲ್ಡಿಂಗ್ ಮಾಡುತ್ತಿದ್ದಾಗ, ರಘು ಮೈದಾನದ ಸುತ್ತಲೂ ಹೋಗಿ ಬೌಂಡರಿ ಲೈನ್‌ನಲ್ಲಿ ನಿಂತಿರುವ ಭಾರತೀಯ ಆಟಗಾರರ ಶೂಗಳಿಂದ ಕೆಸರು ತೆಗೆಯುತ್ತಿದ್ದರು. ಇದರಿಂದ ಯಾವುದೇ ಆಟಗಾರ ಓಡುವಾಗ ಜಾರಿ ಬೀಳದಿರಲು ಸಹಾಯವಾಯಿತು. ಪಂದ್ಯ ಮುಗಿಯುವವರೆಗೂ ಟೀಂ ಇಂಡಿಯಾ ಪರ ರಘು ನೀರಿನ ಬಾಟಲ್ ಹಾಗೂ ಬ್ರಷ್ ಹಿಡಿದು ಬೌಂಡರಿಯಲ್ಲಿ ನಿಂತಿದ್ದರು. ಹಾಗಾಗಿ ಭಾರತ ತಂಡದ ಗೆಲುವಿನಲ್ಲಿ ಅವರ ಪಾತ್ರ ಸಹ ಮಹತ್ವದ್ದಾಗಿತ್ತು ಎಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗುತ್ತಿದೆ.


ಇದನ್ನೂ ಓದಿ: Virat Kohli: ಟಿ20 ವಿಶ್ವಕಪ್​ನಲ್ಲಿ​ ಹೊಸ ದಾಖಲೆ ಬರೆದ ಕೊಹ್ಲಿ, ಇವರಿಗೆ ನಂಬರ್​ಗಳೇ ಲೆಕ್ಕಾ ಇಲ್ಲಾ!


ಯಾರು ಈ ಸೈಡ್ ಆರ್ಮ್ ಥ್ರೋವರ್ ರಘು?:


ಇನ್ನು, ರಾತ್ರೋ ರಾತ್ರಿ ಚರ್ಚೆಗೆ ಕಾರಣರಾದ ಸೈಡ್ ಆರ್ಮ್ ಥ್ರೋವರ್ ರಘು ಯಾರು ಎಂದು ಅನೇಕರಿಗೆ ತಿಳಿದಿಲ್ಲ. ಅವರು ಟೀಂ ಇಮಡಿಯಾದಲ್ಲಿ ಸೈಡ್‌ ಆರ್ಮ್‌ ಥ್ರೋ ಬೌಲರ್‌ ಆಗಿ ಕೆಲಸ ಮಾಡುತ್ತಾರೆ. ಅವರು ಕರ್ನಾಟಕ ಮೂಲದವರಾಗಿದ್ದು, ಸೈಡ್‌ ಆರ್ಮ್‌ ಬಳಸಿ ಗಂಟೆಗೆ 150 ಕಿ.ಮೀ ಗೂ ಹೆಚ್ಚಿನ ವೇಗದಲ್ಲಿ ಬೌಲಿಂಗ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಭಾರತೀಯ ಬ್ಯಾಟ್ಸ್​ಮನ್​ಗಳು ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸಲು ರಘು ಹೆಚ್ಚು ನೆರವಾಗುತ್ತಾರೆ. ಆದರೆ ಇದೀಗ ತಂಡದ ಗೆಲುವಿನಲ್ಲಿಯೂ ಪ್ರಮುಖರಾಗಿದ್ದಾರೆ.

Published by:shrikrishna bhat
First published: