• Home
  • »
  • News
  • »
  • sports
  • »
  • T20 WC 2022 IND vs BAN: ರಾಹುಲ್-ಕೊಹ್ಲಿ ಅಬ್ಬರಕ್ಕೆ ತತ್ತರಿಸಿದ ಬಾಂಗ್ಲಾ, ಬೃಹತ್​ ಮೊತ್ತದ ಟಾರ್ಗೆಟ್​

T20 WC 2022 IND vs BAN: ರಾಹುಲ್-ಕೊಹ್ಲಿ ಅಬ್ಬರಕ್ಕೆ ತತ್ತರಿಸಿದ ಬಾಂಗ್ಲಾ, ಬೃಹತ್​ ಮೊತ್ತದ ಟಾರ್ಗೆಟ್​

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

T20 WC 2022 IND vs BAN: ಭಾರತ ತಂಡ (Team India) ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್​ ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 184 ರನ್ ಗಳಿಸಿದೆ. ಭಾರತದ ಪರ ವಿರಾಟ್ ಕೊಹ್ಲಿ ಮತ್ತು ​ ಕನ್ನಡಿಗ ಕೆಎಲ್ ರಾಹುಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.

  • Share this:

ಇಂದು ನಡೆಯುತ್ತಿರುವ ಟಿ20 ವಿಶ್ವಕಪ್​ನ 35ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಡುತ್ತಿವೆ. ಇಂದಿನ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಯಾವ ತಂಡ ಗೆಲ್ಲಲಿದೆಯೋ ಆ ತಂಡಕ್ಕೆ ಸೆಮೀಸ್​ ಹಾದಿ ಇನ್ನಷ್ಟು ಸುಲಭವಾಗಲಿದೆ. ಈಗಾಗಲೇ ಟಾಸ್​ ಗೆದ್ದ ಬಾಂಗ್ಲಾದೇಶದ ನಾಯಕ ಶಕಿಬ್ ಅಲ್​ ಹಸನ್ ಮೊದಲು ಬೌಲಿಂಗ್ ಆಯ್ಕೆ ಮಾಡಿದ್ದು, ಭಾರತ ತಂಡ (Team India) ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್​ ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 184 ರನ್ ಗಳಿಸಿದೆ. ಭಾರತದ ಪರ ವಿರಾಟ್ ಕೊಹ್ಲಿ ಮತ್ತು ​ ಕನ್ನಡಿಗ ಕೆಎಲ್ ರಾಹುಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.


ಮಿಂಚಿದ ಕೊಹ್ಲಿ-ರಾಹುಲ್:


ಇನ್ನು, ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್​ ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 184 ರನ್ ಗಳಿಸಿತು. ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್​ ಇಂದು ಉತ್ತಮವಾಗಿ ಬ್ಯಾಟಿಂಗ್​ ಮಾಡಿದರು. ಅವರು 32 ಬೌಲ್​ಗೆ 4 ಸಿಕ್ಸ್ ಮತ್ತು 3 ಪೋರ್​ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿದರು. ಅಲ್ಲದೇ ಇವರ ಜೊತೆ ಕಿಂಗ್​ ವಿರಾಟ್ ಕೊಹ್ಲಿ ಸಹ ಮತ್ತೊಮ್ಮೆ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಟಿ20 ವಿಶ್ವಕಪ್​ 2022ರಲ್ಲಿ 3ನೇ ಅರ್ಧಶತಕ ಸಿಡಿಸಿದರು. ಅವರ ಬ್ಯಾಟ್​ನಿಂದ ಇಂದು 44 ಎಸೆತದಲ್ಲಿ 1 ಸಿಕ್ಸ್ ಹಾಗೂ 8 ಪೋರ್​ ಮೂಲಕ 64 ರನ್ ಸಿಡಿದಿರು.ಉಳಿದಂತೆ ನಾಯಕ ರೋಹಿತ್ ಶರ್ಮಾ 2 ರನ್, ಸೂರ್ಯಕುಮಾರ್ ಯಾದವ್ 30 ರನ್, ಹಾರ್ದಿಕ್ ಪಾಂಡ್ಯ 5 ರನ್, ದಿನೇಶ್ ಕಾರ್ತಿಕ್ 7 ರನ್, ಅಕ್ಷರ್ ಪಟೇಲ್ 7 ರನ್ ಮತ್ತು ಅಶ್ವೀನ್ 13 ರನ್ ಗಳಿಸಿದರು.


ಇದನ್ನೂ ಓದಿ: IND vs BAN: ಅಂಪೈರ್​ ನೋ ಬಾಲ್ ಕೊಟ್ಟಿದ್ದಕ್ಕೆ ಶಕೀಬ್​ ಗರಂ, ವಿರಾಟ್​ ಬರ್ತಿದ್ದಂತೆ ಬಾಂಗ್ಲಾ ಕ್ಯಾಪ್ಟನ್​ ಗಪ್​ಚುಪ್​!


ಬೌಲಿಂಗ್​ನಲ್ಲಿ ಎಡವಿದ ಬಾಂಗ್ಲಾ:


ಇನ್ನು, ಟಾಸ್​ ಗೆದ್ದು ಮೊದಲು ಬೌಲಿಂಗ್ ಮಾಡಿದ ಬಾಂಗ್ಲಾದೇಶ ಅಷ್ಟಾಗಿ ಉತ್ತಮ ದಾಳಿ ಮಾಡಲಿಲ್ಲ. ಟೀಂ ಇಂಡಿಯಾದ ಭರ್ಜರಿ ಬ್ಯಾಟಿಂಗ್​ ಎದುರು ಬಾಂಗ್ಲಾ ಬೌಲರ್​ಗಳು ತತ್ತರಿಸಿದರು. ಬಾಂಗ್ಲಾ ಪರ ಹಸನ್ ಮೊಹುಮ್ಮದ್ 3 ವಿಕೆಟ್ ಮತ್ತು ನಾಯಕ ಶಕೀಬ್ ಅಲ್ ಹಸನ್ 2 ವಿಕೆಟ್​ ಪಡೆದ ಮಿಂಚಿದರು. ಆದರೆ ಉಳಿದ ಬೌಲರ್​ಗಳು ಭಾರತೀಯ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿಲ್ಲ.


ಇದನ್ನೂ ಓದಿ: Virat Kohli: ಟಿ20 ವಿಶ್ವಕಪ್​ನಲ್ಲಿ​ ಹೊಸ ದಾಖಲೆ ಬರೆದ ಕೊಹ್ಲಿ, ಇವರಿಗೆ ನಂಬರ್​ಗಳೇ ಲೆಕ್ಕಾ ಇಲ್ಲಾ!


ಭಾರತ-ಬಾಂಗ್ಲಾದೇಶ ಪ್ಲೇಯಿಂಗ್​ 11:


ಭಾರತ ತಂಡ: ಕೆಎಲ್ ರಾಹುಲ್, ರೋಹಿತ್ ಶರ್ಮಾ (C), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್​ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಹೂಡಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್


ಪಾಕಿಸ್ತಾನ ತಂಡ: ನಜ್ಮುಲ್ ಹೊಸೈನ್, ಶರೀಫುಲ್ ಇಸ್ಲಾಂ, ಲಿಟನ್ ದಾಸ್, ಶಕೀಬ್ ಅಲ್ ಹಸನ್, ಅಫೀಫ್ ಹೊಸೈನ್, ಮೊಸದ್ದೆಕ್ ಹೊಸೈನ್, ನೂರುಲ್ ಹಸನ್, ಯಾಸಿರ್ ಅಲಿ, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್.

Published by:shrikrishna bhat
First published: