• Home
  • »
  • News
  • »
  • sports
  • »
  • T20 WC 2022 IND vs BAN: ಬಾಂಗ್ಲಾ ಎದುರು ಟೀಂ ಇಂಡಿಯಾಗೆ ರೋಚಕ ಜಯ, ಸೆಮೀಸ್​ ಹಾದಿ ಇನ್ನಷ್ಟು ಸುಗಮ

T20 WC 2022 IND vs BAN: ಬಾಂಗ್ಲಾ ಎದುರು ಟೀಂ ಇಂಡಿಯಾಗೆ ರೋಚಕ ಜಯ, ಸೆಮೀಸ್​ ಹಾದಿ ಇನ್ನಷ್ಟು ಸುಗಮ

IND vs BAN

IND vs BAN

T20 WC 2022 IND vs BAN: ಬಾಂಗ್ಲಾ ತಂಡಕ್ಕೆ 16 ಓವರ್​ಗಳಲ್ಲಿ 151 ರನ್ ಗಳ ಟಾರ್ಗೆಟ್ ನೀಡಿತು. ಈ ಮೊತ್ತ ಬೆಟ್ಟಿದ ಬಾಂಗ್ಲಾ ನಿಗದಿತ 16 ಓವರ್ ಗಳಲ್ಲಿ 6  ವಿಕೆಟ್ ನಷ್ಟಕ್ಕೆ 145  ರನ್ ಗಳಿಸುವ ಮೂಲಕ 5 ರನ್​ ಗಳಿಂದ ಸೋಲನ್ನಪ್ಪಿತು. 

  • Share this:

ಇಂದು ನಡೆದ ಟಿ20 ವಿಶ್ವಕಪ್​ನ 35ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆದವು. ಟಾಸ್​ ಗೆದ್ದ ಬಾಂಗ್ಲಾದೇಶ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಹೀಗಾಗಿ ಭಾರತ ತಂಡ (Team India) ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್​ ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 184 ರನ್ ಗಳಿಸಿತು. ನಂತರ ಆರಂಭವಾದ ಆಟದಲ್ಲಿ ಮಳೆಯ ಕಾರಣ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾ ತಂಡಕ್ಕೆ 16 ಓವರ್​ಗಳಲ್ಲಿ 151 ರನ್ ಗಳ ಟಾರ್ಗೆಟ್ ನೀಡಿತು. ಈ ಮೊತ್ತ ಬೆಟ್ಟಿದ ಬಾಂಗ್ಲಾ ನಿಗದಿತ 16 ಓವರ್ ಗಳಲ್ಲಿ 6  ವಿಕೆಟ್ ನಷ್ಟಕ್ಕೆ 145  ರನ್ ಗಳಿಸುವ ಮೂಲಕ 5 ರನ್​ ಗಳಿಂದ ಸೋಲನ್ನಪ್ಪಿತು. 


ಪಂದ್ಯಕ್ಕೆ ವರುಣನ ಕಾಟ:


ಇನ್ನು, ಭಾರತ ನೀಡಿದ ಬೃಹತ್ತ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ಆರಂಭದಲ್ಲಿ ಭರ್ಜರಿಯಾಗಿ ಬ್ಯಾಟಿಂಗ್​ ಮಾಡಿತು. ಬಾಂಗ್ಲಾ ಪರ ಲಿಟಿನ್ ದಾಸ್​ 27 ಎಸೆತದಲ್ಲಿ 3 ಸಿಕ್ಸ್ ಮತ್ತು 7 ಪೋರ್​ಗಳ ಮೂಲಕ 60 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಲು ಸಜಹಾಯಕರಾದರು. ಆದರೆ ಈ ವೇಳೆ ಮಳೆಯು ಹೆಚ್ಚಾದ ಕಾರಣ ಪಂದ್ಯವನ್ನು ಕೆಲಕಾಲ ಸ್ಥಗಿತ ಗೊಳಿಸಲಾಯಿತು. ಬಳಿಕ ಆರಂಭವಾದಾಗ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾದೇಶಕ್ಕೆ 16 ಓವರ್ ಗಳಲ್ಲಿ 151 ರನ್ ಗಳ ಟಾರ್ಗೆಟ್ ನೀಡಲಾಯಿತು.ಮಳೆಯ ನಂತರ ಪಂದ್ಯ ಆರಂಭವಾದಾಗ ಬಾಂಗ್ಲಾ ತಂಡ ದಿಢೀರ್ ಕುಸಿತ ಕಂಡಿತು. ತಂಡದ ಪರ  ನಜ್ಮುಲ್ ಹೊಸೈನ್ 21 ರನ್, ಶಕೀಬ್ ಅಲ್ ಹಸನ್ 13 ರನ್, ಅಫೀಫ್ ಹೊಸೈನ್ 3 ರನ್, ಮೊಸದ್ದೆಕ್ ಹೊಸೈನ್ 6 ರನ್ ಗಳಿಸಿದರೆ, ತಸ್ಕಿನ್ ಅಹ್ಮದ್ 12 ರನ್ ಮತ್ತು ನೂರುಲ್ ಹಸನ್  25 ರನ್ ಗಳಿಸಿದರೂ ತಂಡವನ್ನು ಗೆಲ್ಲಿಸಲುವಲ್ಲಿ ಯಶಸ್ವಿಯಾಗಲಿಲ್ಲ.


ಉತ್ತಮ ಬೌಲಿಂಗ್ ದಾಳಿ ಮಾಡಿದ ಭಾರತ:


ಇನ್ನು, ಮಳೆಯ ನಂತರ ಪಂದ್ಯ ಆರಂಭವಾದಾಗ ಅದರ ಸಂಪೂರ್ಣ ಲಾಭವನ್ನು ಭಾರತೀಯ ಬೌಲರ್​ಗಳು ಪಡೆದುಕೊಂಡರು. ಅದರಂತೆ ಭಾರತದ ಪರ ಹಾರ್ದಿಕ್ ಪಾಂಡ್ಯ 3 ಓವರ್​ ಗಳಲ್ಲಿ 28 ರನ್ ನೀಡಿ 2 ವಿಕೆಟ್ ಪಡೆದರು. ಅವರಂತೆ ಅರ್ಷದೀಪ್ ಸಿಂಗ್​ ಸಹ 2 ವಿಕೆಟ್​ ಪಡೆದು ಮಿಂಚಿದರೆ ಮೊಹಮ್ಮದ್ ಶಮಿ 1 ವಿಕೆಟ್ ಪಡೆದು ಮಿಂಚಿದರು. ಅಲ್ಲದೇ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಲಿಟನ್ ದಾಸ್​ ಅವರನ್ನು ಕೆಎಲ್ ರಾಹುಲ್ ಅವರು ಅದ್ಭುತವಾಗಿ ರನೌಟ್​ ಮಾಡಿದರು.


ಇದನ್ನೂ ಓದಿ: Virat Kohli: ಟಿ20 ವಿಶ್ವಕಪ್​ನಲ್ಲಿ​ ಹೊಸ ದಾಖಲೆ ಬರೆದ ಕೊಹ್ಲಿ, ಇವರಿಗೆ ನಂಬರ್​ಗಳೇ ಲೆಕ್ಕಾ ಇಲ್ಲಾ!


ಭರ್ಜರಿ ಬ್ಯಾಟಿಂಗ್ ಮಾಡಿದ ಭಾರತ:


ಇನ್ನು, ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಉತ್ತಮ ಸ್ಕೋರ್​ ಮಾಡಿತು.  ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್​ ಇಂದು ಉತ್ತಮವಾಗಿ ಬ್ಯಾಟಿಂಗ್​ ಮಾಡಿದರು. ಅವರು 32 ಬೌಲ್​ಗೆ 4 ಸಿಕ್ಸ್ ಮತ್ತು 3 ಪೋರ್​ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿದರು. ಅಲ್ಲದೇ ಇವರ ಜೊತೆ ಕಿಂಗ್​ ವಿರಾಟ್ ಕೊಹ್ಲಿ ಸಹ ಮತ್ತೊಮ್ಮೆ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಟಿ20 ವಿಶ್ವಕಪ್​ 2022ರಲ್ಲಿ 3ನೇ ಅರ್ಧಶತಕ ಸಿಡಿಸಿದರು. ಅವರ ಬ್ಯಾಟ್​ನಿಂದ ಇಂದು 44 ಎಸೆತದಲ್ಲಿ 1 ಸಿಕ್ಸ್ ಹಾಗೂ 8 ಪೋರ್​ ಮೂಲಕ 64 ರನ್ ಸಿಡಿಸಿದಿರು. ಉಳಿದಂತೆ ನಾಯಕ ರೋಹಿತ್ ಶರ್ಮಾ 2 ರನ್, ಸೂರ್ಯಕುಮಾರ್ ಯಾದವ್ 30 ರನ್, ಹಾರ್ದಿಕ್ ಪಾಂಡ್ಯ 5 ರನ್, ದಿನೇಶ್ ಕಾರ್ತಿಕ್ 7 ರನ್, ಅಕ್ಷರ್ ಪಟೇಲ್ 7 ರನ್ ಮತ್ತು ಅಶ್ವೀನ್ 13 ರನ್ ಗಳಿಸಿದರು.

Published by:shrikrishna bhat
First published: