ನ್ಯೂಜಿಲೆಂಡ್ನಲ್ಲಿ ಕಂಡು ಬಂದ ಕಹಿ-ಸಿಹಿ ನೆನಪುಗಳನ್ನು ಬಿಟ್ಟು ಬಾಂಗ್ಲಾದೇಶ ಪ್ರವಾಸದಲ್ಲಿ (IND vs BAN) ಆತಿಥೇಯ ತಂಡದೊಂದಿಗೆ ಸೆಣಸಲೊದೆ.ಈ ಸರಣಿಗಾಗಿ ಭಾರತ ತಂಡ ಈಗಾಗಲೇ ಬಾಂಗ್ಲಾದೇಶಕ್ಕೆ ತಲುಪಿದ್ದು, ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದೆ. ಡಿಸೆಂಬರ್ 4 ರಿಂದ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರವಾಸ ಆರಂಭವಾಗಲಿದೆ. ಸರಣಿ ಆರಂಭಕ್ಕೂ ಮುನ್ನ ಬಾಂಗ್ಲಾದೇಶ ಎರಡು ಭಾರಿ ಹಿನ್ನಡೆ ಅನುಭವಿಸಿದೆ. ತಂಡದ ನಾಯಕ ತಮೀಮ್ ಇಕ್ಬಾಲ್ (Tamim Iqbal) ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಅದೇ ಸಮಯದಲ್ಲಿ, ಸ್ಟಾರ್ ವೇಗದ ಬೌಲರ್ ತಸ್ಕಿನ್ ಅಹ್ಮದ್ (Taskin Ahmed) ಕೂಡ ಗಾಯದಿಂದಾಗಿ ಮೊದಲ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ.
ನಾಯಕ-ಸ್ಟಾರ್ ಬೌಲರ್ಗೆ ಗಾಯ:
ತೊಡೆಸಂದು ಗಾಯದಿಂದಾಗಿ ತಮೀಮ್ ಇಕ್ಬಾಲ್ ಭಾರತ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಕ್ರಿಕ್ಬಜ್ನ ಸುದ್ದಿ ಪ್ರಕಾರ, ನವೆಂಬರ್ 30 ರಂದು ಅಭ್ಯಾಸ ಪಂದ್ಯದ ಸಮಯದಲ್ಲಿ, ಅವರಿಗೆ ತೊಡೆಸಂದು ಸಮಸ್ಯೆ ಇತ್ತು. ನಾಯಕ ಇಕ್ಬಾಲ್ ಈಗ ಸುಮಾರು ಎರಡು ವಾರಗಳ ಕಾಲ ಮೈದಾನದಿಂದ ದೂರ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ತಮೀಮ್ ಇಕ್ಬಾಲ್ ಮಾತ್ರವಲ್ಲ, ತಂಡದ ಬಲಗೈ ವೇಗದ ಬೌಲರ್ ತಸ್ಕಿನ್ ಅಹ್ಮದ್ ಕೂಡ ಗಾಯಗೊಂಡಿದ್ದು, ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ತರಬೇತಿ ವೇಳೆ ಬೆನ್ನು ನೋವು ಕಾಣಿಸಿಕೊಂಡಿತ್ತು ಎಂದು ಹೇಳಲಾಗುತ್ತಿದೆ. ತಸ್ಕಿನ್ ಅಹ್ಮದ್ ಬದಲಿಗೆ, ಮೊದಲ ODI ಗೆ ಬಾಂಗ್ಲಾದೇಶ ತಂಡದಲ್ಲಿ ಶೋರಿಫುಲ್ ಇಸ್ಲಾಮ್ ಅವರನ್ನು ಬ್ಯಾಕಪ್ ಆಗಿ ಇರಿಸಲಾಗಿದೆ.
ಭಾರತ vs ಬಾಂಗ್ಲಾದೇಶ ODI ವೇಳಾಪಟ್ಟಿ:
ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಸರಣಿಯ ಮೊದಲ ಪಂದ್ಯ ಡಿಸೆಂಬರ್ 4 ರಂದು ನಡೆಯಲಿದೆ. ಇದಾದ ನಂತರ ಡಿಸೆಂಬರ್ 7 ಮತ್ತು 10 ರಂದು ಎರಡನೇ ಮತ್ತು ಮೂರನೇ ಏಕದಿನ ಪಂದ್ಯ ನಡೆಯಲಿದೆ. ಇದಾದ ಬಳಿಕ ಉಭಯ ತಂಡಗಳ ನಡುವೆ ಎರಡು ಟೆಸ್ಟ್ಗಳ ಸರಣಿ ನಡೆಯಲಿದೆ. ಮೊದಲ ಟೆಸ್ಟ್ ಡಿಸೆಂಬರ್ 14 ರಿಂದ ಮತ್ತು ಎರಡನೇ ಟೆಸ್ಟ್ ಡಿಸೆಂಬರ್ 22 ರಿಂದ ನಡೆಯಲಿದೆ.
ಇದನ್ನೂ ಓದಿ: Dwayne Bravo: ಪೊಲಾರ್ಡ್ ಬಳಿಕ ಮತ್ತೊಬ್ಬ ವಿಂಡೀಸ್ ಆಟಗಾರ ನಿವೃತ್ತಿ! ನೀವು ಚಾಂಪಿಯನ್ ಫಾರೆವರ್ ಎಂದ ಸಿಎಸ್ಕೆ!
ಪಂದ್ಯದ ನೇರಪ್ರಸಾರ ಎಲ್ಲಿ?:
ಈ ಪಂದ್ಯಗಳನ್ನು ಸೋನಿ ನೆಟ್ವರ್ಕ್ ನೇರ ಪ್ರಸಾರ ಮಾಡಲಿದೆ. ಡಿಜಿಟಲ್ನಲ್ಲಿ ಸೋನಿ ಲೈವ್ ಅಪ್ಲಿಕೇಶನ್ನಲ್ಲಿ ನೀವು ಈ ಪಂದ್ಯಗಳನ್ನು ಲೈವ್ ಆಗಿ ವೀಕ್ಷಿಸಬಹುದು. ಇವುಗಳ ಜೊತೆಗೆ ಡಿಡಿ ಸ್ಪೋರ್ಟ್ಸ್ ಕೂಡ ಈ ಪಂದ್ಯಗಳನ್ನು ನೇರ ಪ್ರಸಾರ ಮಾಡಲಿದೆ.
IND vs BAN ಏಕದಿನ ಸರಣಿಗೆ ತಂಡ:
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ಇಶಾನ್ ಕಿಶನ್, ರಿಷಭ್ ಪಂತ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಸಿರಾಜ್, ಶಾರ್ದೂಲ್ ಠಾಕೂರ್, ಯಾಸ್ ದಯಾಲ್, ಶಾಬಾಜ್ ಅಹ್ಮದ್, ಶಮಿ, ದೀಪಕ್ ಚಹಾರ್.
ಬಾಂಗ್ಲಾದೇಶ ತಂಡ: ಲಿಟನ್ ದಾಸ್, ಅನಾಮುಲ್ ಹಕ್ ಬಿಜೋಯ್, ಶಕಿಬ್ ಅಲ್ ಹಸನ್, ಮುಷ್ಫೀಕುರ್ ರಹೀಮ್, ಅಫೀಫ್ ಹುಸೇನ್, ಯಾಸಿರ್ ಅಲಿ, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಎಬಾಡೋತ್ ಹುಸೇನ್, ನಸ್ಮದ್, ನಸ್ಮದ್ ಶಾಂತೋ, ನೂರುಲ್ ಹಸನ್ ಸೋಹನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ