ಎರಡನೇ ಏಕದಿನ ಪಂದ್ಯದ ವೇಳೆ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಅವರು ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ (IND vs BAN) ನಲ್ಲಿ ಆಡುವುದು ಅನುಮಾನವಾಗಿದೆ. ಬುಧವಾರ ಇಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಕ್ಯಾಚ್ ಹಿಡಿಯುವ ಯತ್ನದಲ್ಲಿ ಎಡಗೈ ಹೆಬ್ಬೆರಳಿಗೆ ರೋಹಿತ್ ಶರ್ಮಾ (Rohit Sharma) ಗಾಯ ಮಾಡಿಕೊಂಡಿದ್ದಾರೆ. ಎರಡನೇ ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡಿದ ರೋಹಿತ್ ಮತ್ತು ಮೊಹಮ್ಮದ್ ಸಿರಾಜ್ (Mohammed Siraj) ಅವರ ಎರಡನೇ ಓವರ್ನ ನಾಲ್ಕನೇ ಎಸೆತದಲ್ಲಿ ಅನಾಮುಲ್ ಹಕ್ ಅವರ ಕ್ಯಾಚ್ ಹಿಡಿಯುವ ವೇಳೆ ಹೆಬ್ಬರಳಿಗೆ ಗಾಯ ಮಾಡಿಕೊಮಡಿದ್ದು, ರಕ್ತಸ್ರಾವ ಸಹ ಆಗಿತ್ತು. ತಕ್ಷಣ BCCI ಸಿಬ್ಬಂದಿ ಅವರನ್ನು ಸ್ಕ್ಯಾನ್ ಮಾಡಲು ಆಸ್ಪತ್ರೆಗೆ ಕಳುಹಿಸಿದ್ದರು.
ಆದರೆ ಭಾರತದ ಬ್ಯಾಟಿಂಗ್ ವೇಳೆ ಡ್ರೆಸಿಂಗ್ ರೂಂ ನಲ್ಲಿ ಕಾಣಿಸಿಕೊಂಡ ರೋಹಿತ್ ಅಂತಿಮವಾಗಿ 7 ವಿಕೆಟ್ಗಳ ಪತನದ ನಂತರ ಬ್ಯಾಟಿಂಗ್ ಸಹ ಮಾಡಿದರು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ತಿಳಿದುಬಂದಿದೆ.
ಮತ್ತೆ ಸ್ಕ್ಯಾನ್ಗೆ ಒಳಗಾಗಲಿರುವ ಹಿಟ್ಮ್ಯಾನ್:
ಇನ್ನು, ಮುರಿತವನ್ನು ಕಂಡುಹಿಡಿಯಲು ಕೆಲವು ಸ್ಕ್ಯಾನ್ಗಳನ್ನು ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಕಾರಣದಿಂದಾಗಿ, ಡಿಸೆಂಬರ್ 14 ರಂದು ಚಿತ್ತಗಾಂಗ್ನಲ್ಲಿ ಪ್ರಾರಂಭವಾಗುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ಗೆ ಭಾರತೀಯ ನಾಯಕ ಸರಿಯಾದ ಸಮಯದಲ್ಲಿ ಫಿಟ್ ಆಗಿರುತ್ತಾರೆಯೇ ಎಂಬ ಅನುಮಾನ ಮೂಡಿದೆ. ಅಲ್ಲದೇ ಅವರು ಕೊನೆಯ ಏಕದಿನ ಪಂದ್ಯದಲ್ಲಿಯೂ ಕಣಕ್ಕಿಳಿಯುವುದು ಅನುಮಾನವಾಗಿದೆ.
🗣️ 🗣️ Head Coach Rahul Dravid takes us through the injury status of captain Rohit Sharma, Deepak Chahar & Kuldeep Sen #TeamIndia | #BANvIND pic.twitter.com/r6CEj5gHgv
— BCCI (@BCCI) December 8, 2022
ರೋಹಿತ್ ಆಟ ಮೆಚ್ಚಿದ ದ್ರಾವಿಡ್:
ಪಂದ್ಯದ ಬಳಿಕ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ ಅವರಿಗೆ ಈಗಾಗಲೇ ಎಲ್ಲಾ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಅವರಿಗೆ ಆದ ಗಗಾಯಕ್ಕೆ ಕೆಲ ಇಂಜಕ್ಷನ್ಗಳನ್ನೂ ನೀಡಲಾಗುತ್ತಿದ್ದು, ದೀಪಕ್ ಮತ್ತು ಕುದೀಪ್ ಸಹ ರೋಹಿತ್ ಜೊತೆ ಮುಂದಿನ ಪಂದ್ಯ ಆಡುವುದು ಕಷ್ಟ ಎಂದು ಹೇಳಿದ್ದಾರೆ. ಅಲ್ಲದೇ ಗಾಯದ ನಡುವೆಯೂ ಅಂತಿಮ ಕ್ಷಣದಲ್ಲಿ ಬ್ಯಾಟಿಂಗ್ ಮಾಡಿದ ರೋಹಿತ್ ಕುರಿತು ಕೋಚ್ ದ್ರಾವಿಡ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IND vs BAN: ಸರಣಿ ಸೋಲಿನ ಬೆನ್ನಲ್ಲೇ ಭಾರತಕ್ಕೆ ತ್ರಿಬಲ್ ಶಾಕ್! ತಂಡದಿಂದ ಮೂವರು ಸ್ಟಾರ್ ಪ್ಲೇಯರ್ ಔಟ್
ಸರಣಿ ಸೋತ ಟೀಂ ಇಂಡಿಯಾ:
ಬಾಂಗ್ಲಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ಬಾಂಗ್ಲಾದೇಶ 2-0 ಮುನ್ನಡೆ ಸಾಧಿಸಿದ್ದು, ಸರಣಿಯನ್ನು ಗೆದ್ದಿದೆ. ಕೊನೆಯ ಪಂದ್ಯವು ಡಿಸೆಂಬರ್ 10ರಂದು ನಡೆಯಲಿದೆ. ಬಳಿಕ ಡಿಸೆಂಬರ್ 14ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ