• Home
  • »
  • News
  • »
  • sports
  • »
  • IND vs BAN 2022: ಶ್ರೀಲಂಕಾ ಸರಣಿಯಿಂದ ಟೀಂ ಇಂಡಿಯಾ ತ್ರಿಮೂರ್ತಿಗಳು ಔಟ್​? ಹಿಟ್‌ಮ್ಯಾನ್ ಕೈ ತಪ್ಪುತ್ತಾ ಕ್ಯಾಪ್ಟನ್ಸಿ?

IND vs BAN 2022: ಶ್ರೀಲಂಕಾ ಸರಣಿಯಿಂದ ಟೀಂ ಇಂಡಿಯಾ ತ್ರಿಮೂರ್ತಿಗಳು ಔಟ್​? ಹಿಟ್‌ಮ್ಯಾನ್ ಕೈ ತಪ್ಪುತ್ತಾ ಕ್ಯಾಪ್ಟನ್ಸಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs BAN 2022: ಮುಂದಿನ ವರ್ಷ ಜನವರಿಯಲ್ಲಿ ಭಾರತ ಶ್ರೀಲಂಕಾ ತಂಡವನ್ನು ಮೂರು ಟಿ20 ಸರಣಿಗಳಿಗೆ ಆತಿಥ್ಯ ವಹಿಸಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ತ್ರಿಮೂರ್ತಿಗಳು ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ.

  • Share this:

ಡಿಸೆಂಬರ್‌ 4ರಿಂದ  ಬಾಂಗ್ಲಾದೇಶ (IND vs BAN 2022) ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಯ ನಂತರ ಮುಂದಿನ ವರ್ಷ ಜನವರಿಯಲ್ಲಿ ಟೀಂ ಇಂಡಿಯಾ (Team India) ಶ್ರೀಲಂಕಾಕ್ಕೆ 3 ಟಿ20 ಸರಣಿಗೆ ಆತಿಥ್ಯ ವಹಿಸಲಿದೆ. ಈ ಸರಣಿಗೆ ಇನ್ನೂ ಟೀಂ ಇಂಡಿಯಾ ಆಯ್ಕೆಯಾಗಿಲ್ಲ. ಆದರೆ, ಬಿಸಿಸಿಐ (BCCI) ಮೂಲಗಳ ಪ್ರಕಾರ, ಶ್ರೀಲಂಕಾ ವಿರುದ್ಧದ ಈ ಸರಣಿಗೆ ಆಯ್ಕೆಯಾದ ತಂಡದಲ್ಲಿ ಟೀಂ ಇಂಡಿಯಾದ ತ್ರಿಮೂರ್ತಿಗಳಾದ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli) ಮತ್ತು ಕೆಎಲ್ ರಾಹುಲ್ (KL Rahul) ಇರುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಅದರಲ್ಲಿಯೂ ಕೊಹ್ಲಿ-ರೋಹಿತ್​ಗೆ ವಿಶ್ರಾಂತಿ ನೀಡಿದರೆ, ರಾಹುಲ್​ ಮದುವೆ ಕಾರಣದಿಂದ ಈಗಾಗಲೇ ಬಿಸಿಸಿಐ ಬಳಿ ರಜೆ ಕೇಳಿರುವುದಾಗಿ ತಿಳಿದುಬಂದಿದೆ. ಇವರಲ್ಲದೆ ಹಿರಿಯ ಆಟಗಾರರಾದ ದಿನೇಶ್ ಕಾರ್ತಿಕ್, ಮೊಹಮ್ಮದ್ ಶಮಿ ಕೂಡ ಈ ಸರಣಿಯ ಭಾಗವಾಗುವುದಿಲ್ಲ ಎನ್ನಲಾಗಿದೆ.


ಡಿಸೆಂಬರ್​ನಲ್ಲಿ ಹೊಸ ಆಯ್ಕೆ ಸಮಿತಿ:


ಬಿಸಿಸಿಐನ ಹಿರಿಯ ಅಧಿಕಾರಿಯನ್ನು ಉಲ್ಲೇಖಿಸಿ ಇನ್ಸೈಡ್‌ಸ್ಪೋರ್ಟ್ ಡಿಸೆಂಬರ್‌ನಲ್ಲಿ ಹೊಸ ಆಯ್ಕೆ ಸಮಿತಿಯನ್ನು ರಚಿಸಲಾಗುವುದು ಎಂದು ಮಾಹಿತಿ ನೀಡಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ತಂಡವನ್ನು ಆಯ್ಕೆ ಮಾಡಲಿದ್ದಾರೆ. ಆದರೆ, ಇದೀಗ ಕೆಲವು ಅನುಭವಿ ಆಟಗಾರರಿಲ್ಲದೆ ಟೀಂ ಇಂಡಿಯಾ ಟಿ20 ಮಾದರಿಯಲ್ಲಿ ಮುನ್ನಡೆಯುವುದು ಖಚಿತವಾಗಿದೆ. ಈ ಬಗ್ಗೆ ಈಗಾಗಲೇ ರೋಹಿತ್, ವಿರಾಟ್ ಗೆ ಹೇಳಲಾಗಿದೆ. ಅವರೊಂದಿಗೆ ಮಾತುಕತೆ ಸಹ ನಡೆದಿದೆಯಂತೆ. ಹೀಗಿರುವಾಗ ನಾಯಕ ಯಾರು ಎಂಬುದೇ ಪ್ರಶ್ನೆಗೆ ಕೇವಲ ಹಾರ್ದಿಕ್ ಪಾಂಡ್ಯ ಎಂಬುದೇ ಉತ್ತರ ಕೇಳಿಬರುತ್ತಿದೆ. ಶ್ರೀಲಂಕಾ ವಿರುದ್ಧದ T20I ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು InsideSport ಗೆ ತಿಳಿಸಿವೆ.


ರೋಹಿತ್-ವಿರಾಟ್ ಜೊತೆಯಲ್ಲಿ ಟೀಂ ಇಂಡಿಯಾ ಮುನ್ನಡೆಯಲಿದೆ


ರೋಹಿತ್-ವಿರಾಟ್ ಮುಂದಿನ ವರ್ಷದ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಟಿ 20 ಸರಣಿಯ ಭಾಗವಾಗದಿರುವುದು 2024 ರಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ಗೆ ಭಾರತ ತಂಡದ ತಯಾರಿಯ ಒಂದು ಭಾಗವಾಗಿದೆ. ಈ ವರ್ಷದ ಟಿ20 ವಿಶ್ವಕಪ್‌ ಬಳಿಕ ಭಾರತ ಟಿ20 ತಂಡದಲ್ಲಿ ಬದಲಾವಣೆಯ ಬೇಡಿಕೆಯು ವೇಗವನ್ನು ಪಡೆಯುತ್ತಿದೆ. ಇದೀಗ ಭಾರತೀಯ ಟಿ20ಯಲ್ಲಿ ಬದಲಾವಣೆಯ ಸಮಯ ಬಂದಿದ್ದು, ಯುವ ನಾಯಕನ ನೇತೃತ್ವದಲ್ಲಿ ಹೊಸ ತಂಡವನ್ನು ಸಿದ್ಧಪಡಿಸಬೇಕು ಎಂದು ಕ್ರಿಕೆಟ್ ಪಂಡಿತರು ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ.


ಇದನ್ನೂ ಓದಿ: IND vs BAN: ಪ್ರೈಮ್-ಹಾಟ್‌ಸ್ಟಾರ್‌ನಲ್ಲಿ ಭಾರತ-ಬಾಂಗ್ಲಾ ಪಂದ್ಯ ಬರಲ್ಲ! ಹಾಗಿದ್ರೆ ಲೈವ್​ ಸ್ಟ್ರೀಮಿಂಗ್​ ನೋಡೋದು ಎಲ್ಲಿ?


ಪಾಂಡ್ಯ ನಾಯಕತ್ವದಲ್ಲಿ ಹೊಸ ಟಿ20 ತಂಡ:


ಬಿಸಿಸಿಐ ಕೂಡ ಈಗ ಈ ಚಿಂತನೆಯಲ್ಲಿ ಮುನ್ನಡೆಯುತ್ತಿದ್ದು, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂದಿನ ಟಿ20 ವಿಶ್ವಕಪ್‌ಗೆ ಹೊಸ ತಂಡವನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಮುನ್ನಡೆಯಲು ಚಿಂತನೆ ನಡೆಸಿದೆ. ಇದರ ಭಾಗವಾಗಿ ರೋಹಿತ್, ವಿರಾಟ್, ಮೊಹಮ್ಮದ್ ಶಮಿ ಮತ್ತು ಆರ್ ಅಶ್ವಿನ್ ಅವರಂತಹ ಹಿರಿಯ ಆಟಗಾರರು ಮುಂದಿನ ಟಿ20 ವಿಶ್ವಕಪ್‌ಗಾಗಿ ಬಿಸಿಸಿಐ ಕೈಬಿಡುವ ಸಾರ್ಧಯತೆ ಇದೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಈ ಆಟಗಾರರು ಕಾಣಿಸಿಕೊಳ್ಳುವುದಿಲ್ಲ. ರೋಹಿತ್ ಟಿ20 ತಂಡದ ನಾಯಕನಾಗದೇ ಇರಬಹುದು. ಆದರೆ, ಮುಂದಿನ ಏಕದಿನ ವಿಶ್ವಕಪ್‌ಗೆ ಅವರು ಭಾರತ ಏಕದಿನ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು