ಇಂದಿನಿಂದ ಭಾರತ ಮತ್ತು ಬಾಂಗ್ಲಾದೇಶದ (IND vs BAN ODI) ನಡುವಿನ 3 ಪಂದ್ಯಗಳ ಏಕದಿನ (ODI) ಸರಣಿಯು ಆರಂಭವಾಗಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡವು 41.2 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 186 ರನ್ ಗಳಿಸುವ ಮೂಲಕ ಅಲ್ಪಮೊತ್ತಕ್ಕೆ ಕುಸಿಯಿತು. ಈ ಮೊತ್ತ ಬೆನ್ನಟ್ಟಿದ ಬಾಂಗ್ಲಾದೇಶ್ ತಂಡವು 46 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 187 ರನ್ ಗಳಿಸುವ ಮೂಲಕ 1 ವಿಕೆಟ್ನ ರೋಚಕ ಜಯ ದಾಖಲಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶ ತಂಡವು 1-0 ಮುನ್ನಡೆ ಸಾಧಿಸಿದೆ.
ನಾಯಕನ ಆಟವಾಡಿದ ಲಿಟ್ಟನ್ ದಾಸ್:
ನಜ್ಮುಲ್ ಹೊಸೈನ್ ಶಾಂಟೊ ಮೊದಲ ಎಸೆತದಲ್ಲಿಯೇ ದೀಪಕ್ ಚಹಾರ್ಗೆ ವಿಕೆಟ್ ಒಪ್ಪಿಸಿದರು. ಆದರೆ ಬಳಿಕ ನಾಯಕನ ಆಟವಾಡಿದ ಲಿಟ್ಟನ್ ದಾಸ್ 63 ಎಸೆತದಲ್ಲಿ 1 ಸಿಕ್ಸ್3 ಪೋರ್ಗಳ ನೆರವಿನಿಂದ 41 ರನ್ ಗಳಿಸಿದರು. ಉಳಿದಂತೆ ಅನಾಮುಲ್ ಹಕ್ 14 ರನ್, ಶಕೀಬ್ ಅಲ್ ಹಸನ್ 29 ರನ್, ಮುಶ್ಫಿಕರ್ ರಹೀಮ್ 18 ರನ್, ಮಹಮ್ಮದುಲ್ಲಾ 14 ರನ್, ಅಫೀಫ್ ಹೊಸೈನ್ 6 ರನ್, ಎಬಾಡೋತ್ ಹೊಸೈನ್ ಶೂನ್ಯ, ಹಸನ್ ಮಹಮೂದ್ ಶೂನ್ಯ ರನ್ ಗಳಿಸದರೆ, ಅಂತಿಮ ಕ್ಷಣದಲ್ಲಿ ಮಿಂಚಿದ ಮೆಹಿದಿ ಹಸನ್ ಮಿರಾಜ್ 38 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
A sensational tenth-wicket partnership has given Bangladesh a win to start off the series 👏
#BANvIND pic.twitter.com/ot9w4r9Tx3
— ICC (@ICC) December 4, 2022
ಇನ್ನು, ಟೀಂ ಇಂಡಿಯಾದ ಬೌಲಿಂಗ್ ದಾಳಿ ಇಂದು ಉತ್ತಮವಾಗಿತ್ತು. ಭಾರತದ ಬೌಲರ್ಗಳು ಬಾಂಗ್ಲಾ ವಿರುದ್ಧ ಸಂಘಟಿತ ಬೌಲಿಂಗ್ ನಡೆಸಿದರು. ಭಾರತದ ಪರ ಮೊಹಮ್ಮದ್ ಸಿರಾಜ್ 10 ಓವರ್ ಮಾಡಿ 32 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ, ಕುಲ್ದೀಪ್ ಸೇನ್ 2 ವಿಕೆಟ್, ವಾಷಿಂಗ್ಟನ್ ಸುಂದರ್ 2 ವಿಕೆಟ್, ಶಾರ್ದೂಲ್ ಠಾಕೂರ್ 1 ಮತ್ತು ದೀಪಕ್ ಚಹಾರ್ 1 ವಿಕೆಟ್ ಪಡೆದರು.
ಶಕೀಬ್ ದಾಳಿಗೆ ತತ್ತರಿಸಿದ್ದ ಭಾರತ ತಂಡ:
ಇನ್ನು, ಟಾಸ್ ಸೋತು ಮೊದಲಿ ಬ್ಯಾಟಿಂಗ್ ಮಾಡಿದ ಭಾರತ ಬಾಂಗ್ಲಾದೇಶ ತಂಡದ ಶಕೀಬ್ ಅಲ್ ಹಸನ್ ದಾಳಿಗೆ ತತ್ತರಿಸಿತು. ಭಾರತದ ಪರ ಕನ್ನಡಿಗ ಕೆಎಲ್ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 70 ಎಸೆತದಲ್ಲಿ 4 ಸಿಕ್ಸ್ ಮತ್ತು 5 ಫೋರ್ಗಳ ಮೂಲಕ 73 ರನ್ ಗಳಿಸಿ ಮಿಂಚಿದರು. ಉಳಿದಂತೆ ನಾಯಕ ರೋಹಿತ್ ಶರ್ಮಾ 27 ರನ್, ಶಿಖರ್ ಧವನ್ 7 ರನ್, ವಿರಾಟ್ ಕೊಹ್ಲಿ 9 ರನ್, ಶ್ರೇಯಸ್ ಅಯ್ಯರ್ 24 ರನ್, ವಾಷಿಂಗ್ಟನ್ ಸುಂದರ್ 19 ರನ್, ಶಹಬಾಜ್ ಅಹ್ಮದ್ ಶೂನ್ಯ, ಶಾರ್ದೂಲ್ ಠಾಕೂರ್ 2 ರನ್, ದೀಪಕ್ ಚಹಾರ್ ಶೂನ್ಯ, ಮೊಹಮ್ಮದ್ ಸಿರಾಜ್ 9 ರನ್ ಮತ್ತು ಕುಲ್ದೀಪ್ ಸೇನ್ 2 ರನ್ ಗಳಿಸಿದರು.
ಇದನ್ನೂ ಓದಿ: Rohit Sharma: ಮತ್ತೆ ವಿಫಲರಾದ ರೋಹಿತ್ ಶರ್ಮಾ, 35 ತಿಂಗಳಾದ್ರೂ ಇಲ್ಲ ಒಂದೇ ಒಂದು ಶತಕ!
ಉತ್ತಮ ಬೌಲಿಂಗ್ ಮಾಡಿದ್ದ ಬಾಂಗ್ಲಾ:
ಇನ್ನು, ಟಾಸ್ ಗೆದ್ದು ಬೌಲಿಂಗ್ ಮಾಡಿದ ಬಾಂಗ್ಲಾ ಮೊದಲಿನಿಂದಲೂ ಟೀಂ ಇಂಡಿಯಾ ಬ್ಯಾಟರ್ಗಳ ಮೇಲೆ ಹಿಡಿತ ಸಾಧಿಸಿತು. ಬಾಂಗ್ಲಾದೇಶ ಪರ ಶಾಕಿಬ್ ಅಲ್ ಹಸನ್ ಉತ್ತಮ ದಾಳಿ ನಡೆಸಿದರು. ಅವರು 10 ಓವರ್ ಮಾಡಿ 36 ರನ್ ನೀಡಿ ಪ್ರಮುಖ 5 ವಿಕೆಟ್ ಕಬಳಿಸುವುದರ ಜೊತೆಗೆ 2 ಓವರ್ ಮೇಡಿನ್ ಮಾಡುವ ಮೂಲಕ ಭಾರತದ ಕುಸಿತಕ್ಕೆ ಕಾರಣರಾದರು. ಉಳಿದಂತೆ ಎಬಾಡೋತ್ ಹೊಸೈನ್ 4 ವಿಕೆಟ್ ಮತ್ತು ಮೆಹಿದಿ ಹಸನ್ 1 ವಿಕೆಟ್ ಪಡೆದು ಮಿಂಚಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ