ಚಟ್ಟೋಗ್ರಾಮ್ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (India vs Bangladesh) ಮೊದಲ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿದೆ. 48 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಗೆ (Team India) ಅನುಭವಿ ಆಟಗಾರ ಪೂಜಾರ (Cheteshwar Pujara), ರಿಷಭ್ ಪಂತ್ ಚೇತರಿಕೆ ನೀಡಿದರು. 46 ರನ್ ಗಳಿಸಿ ಪಂತ್ ಔಟಾದ ಬಳಿಕ ಬಂದ ಶ್ರೇಯಸ್ ಅಯ್ಯರ್ (Shreyas Iyer), ಪೂಜಾರ ಜೊತೆಗೂಡಿ ತಂಡದ ಸ್ಕೋರ್ ಹೆಚ್ಚಿಸುವ ಕೆಲಸ ಮಾಡಿದರು. ನಾಲ್ಕನೇ ವಿಕೆಟ್ಗೆ ಈ ಇಬ್ಬರ ಜೋಡಿ 149 ರನ್ಗಳ ಜೊತೆಯಾಟ ನೀಡಿದರು. ಇನ್ನೇನು ದಿನದಾಟ ಮುಗಿಯುತ್ತೆ ಅನ್ನೋ ವೇಳೆ ಉತ್ತಮವಾಗಿ ಆಡುತ್ತಿದ್ದ ಪೂಜಾರ 90 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಅಕ್ಷರ್ ಪಟೇಲ್ ಮೊದಲ ದಿನದಾಟದ ಕೊನೆಯ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು.
ಶತಕದ ಅಂಚಿನಲ್ಲಿ ಎಡವಿದ ಪೂಜಾರ
42 ರನ್ಗಳಿಗೆ 3 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಪೂಜಾರ, ಅಯ್ಯರ್ ಉತ್ತಮ ಬ್ಯಾಟಿಂಗ್ ಮೂಲಕ ಚೇತರಿಕೆ ನೀಡಿದರು. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಪೂಜಾರ ಶತಕದ ಅಂಚಿನಲ್ಲಿ ಎಡವಿದರು. ಇನ್ನಿಂಗ್ಸ್ನ 85 ಓವರ್ನಲ್ಲಿ ತೈಜುಲ್ ಇಸ್ಲಾಂ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರ್ಗಮಿಸಿದರು.
ಇದನ್ನೂ ಓದಿ: IND vs BAN: ವಿಶೇಷ ದಾಖಲೆ ಬರೆದ ಶ್ರೇಯಸ್ ಐಯ್ಯರ್, ಭಾರತೀಯ ಕ್ರಿಕೆಟ್ನಲ್ಲಿಈ ಸಾಧನೆ ಮಾಡಿದ ಮೊದಲ ಪ್ಲೇಯರ್!
ವಿಶೇಷ ಎಂದರೇ, ಇದಕ್ಕೂ ಮುನ್ನ ಓವರ್ನಲ್ಲಿ ಶ್ರೇಯಸ್ ಅಯ್ಯರ್ ಔಟ್ ಆಗಬೇಕಿತ್ತು. ವೇಗಿ ಇಬಾದತ್ ಹೊಸೈನ್ ಎಸೆದ ಚೆಂಡನ್ನು ಡಿಫೇನ್ಸ್ ಮಾಡಲು ಮುಂದಾದ ಅಯ್ಯರ್, ಸಂಪೂರ್ಣವಾಗಿ ವಿಫಲರಾಗಿದ್ದರು. ಪರಿಣಾಮ ಚೆಂಡು ಬ್ಯಾಟ್ಗೆ ಟಚ್ ಆಗದೆ, ನೇರ ವಿಕೆಟ್ಗೆ ಬಡಿದಿತ್ತು. ಆದರೆ ಸ್ಟಂಪ್ಸ್ ಮೇಲಿದ್ದ ಬೇಲ್ಸ್ ಪಕ್ಕಕ್ಕೆ ಸರಿದರೂ ನೆಲಕ್ಕೆ ಬೀಳಲಿಲ್ಲ.
ಇದನ್ನು ಕಂಡ ಪೂಜಾರ, ಅಯ್ಯರ್ ಇಬ್ಬರು ನಕ್ಕು ಸುಮ್ಮನಾದರೆ, ಬಾಂಗ್ಲಾ ಆಟಗಾರರು ಮಾತ್ರ ಅಚ್ಚರಿಗೆ ಒಳಗಾದ್ರು. ಇದೇ ಓವರ್ನಲ್ಲಿ ಅಂಪೈರ್ ಬೇಲ್ಸ್ ಮಾರ್ಪಡಿಸಿದ್ದರು. ಆ ವೇಳೆಗಾಗಲೇ ಅಯ್ಯರ್ 78 ರನ್ ಗಳಿಸಿದ್ದರು. ಇದಕ್ಕೂ ಮುನ್ನ 67 ರನ್ ಗಳಿಸಿದ್ದ ವೇಳೆಯೂ ಅಯ್ಯರ್ ಜೀವದಾನ ಪಡೆದುಕೊಂಡಿದ್ದರು.
ಇದನ್ನೂ ಓದಿ: IPL 20203: ಆರ್ಸಿಬಿಯ ಈ ಅಂಡರ್ ರೇಟೆಡ್ ಆಟಗಾರರು ಸಿಡಿದರೆ ಎದುರಾಳಿ ತಂಡಗಳು ಉಡೀಸ್
ಮೊದಲ ದಿನವೇ ಅಯ್ಯರ್ಗೆ ಎರಡು ಜೀವದಾನ
ಮೆಹಿದಿ ಹಸನ್ ಬೌಲಿಂಗ್ನಲ್ಲಿ ಶ್ರೇಯಸ್ ಬಿಗ್ ಶಾಟ್ಗೆ ಯತ್ನಿಸಿದ ವೇಳೆ ಚೆಂಡು ಡೀಪ್ ಮಿಡ್ ವಿಕೆಟ್ ಬಳಿಯಿದ್ದ ಇಬಾದತ್ ಹೊಸೈನ್ ಕೈ ಸೇರಿತ್ತು. ಆದರೆ ಸುಲಭ ಕ್ಯಾಚ್ಅನ್ನು ಇಬಾದತ್ ಹೊಸೈನ್ ಕೈ ಬಿಟ್ಟು ಅಯ್ಯರ್ಗೆ ಜೀವದಾನ ನೀಡಿದ್ದರು.
ಅಯ್ಯರ್ಗೆ ಮೊದಲ ದಿನವೇ ಎರಡು ರೂಪದಲ್ಲಿ ಜೀವದಾನ ಲಭಿಸಿತ್ತು. ಇತ್ತ ತಾಳ್ಮೆಯ ಆಟದೊಂದಿಗೆ ಬಾಂಗ್ಲಾ ಬೌಲರ್ಗಳ ಬೆರವರು ಇಳಿಸುತ್ತಿದ್ದ ಪೂಜಾರ ಮಾತ್ರ, ತೈಜುಲ್ ಇಸ್ಲಾಂ ಎಸೆದ ಅದ್ಭುತ ಎಸೆತದಲ್ಲಿ ಔಟಾದರು.
An incredible sequence of play in the #BANvIND Test match as @ShreyasIyer15 is bowled by Ebadot Hossain but the 𝗯𝗮𝗶𝗹𝘀 𝗷𝘂𝘀𝘁 𝗿𝗲𝗳𝘂𝘀𝗲 𝘁𝗼 𝗳𝗮𝗹𝗹 🤯
Your reaction on this close 'escape' ❓🤔#SonySportsNetwork #ShreyasIyer pic.twitter.com/q6BXBScVUz
— Sony Sports Network (@SonySportsNetwk) December 14, 2022
ಮೊದಲ ದಿನದ ಆಟ ಮುಗಿಯೋ ವೇಳೆಗೆ ಟೀಂ ಇಂಡಿಯಾ 90 ಓವರ್ಗಳಿಗೆ 6 ವಿಕೆಟ್ ಕಳೆದುಕೊಂಡು 278 ರನ್ ಗಳಿಸಿದೆ. ಶ್ರೇಯಸ್ ಅಯ್ಯರ್ 169 ಎಸೆತಗಳಲ್ಲಿ 82 ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಅಂತಿಮ ಎಸೆತದಲ್ಲಿ 14 ರನ್ ಗಳಿಸಿದ್ದ ಅಕ್ಷರ್ ಪಟೇಲ್ ಔಟಾಗಿದರು. ಇದರೊಂದಿಗೆ ಭಾರತ 6ನೇ ವಿಕೆಟ್ ಕಳೆದುಕೊಂಡಿತು. ಬಾಂಗ್ಲಾ ಪರ ತೈಜುಲ್ ಇಸ್ಲಾಂ ಮೂರು ವಿಕೆಟ್ ಉರುಳಿಸಿದರೆ, ಮೆಹಿದಿ ಹಸನ್ 2 ವಿಕೆಟ್, ಖಲೀದ್ ಅಹ್ಮದ್ ಒಂದು ವಿಕೆಟ್ ಪಡೆದುಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ