• Home
  • »
  • News
  • »
  • sports
  • »
  • IND vs BAN: ನಾನು ಔಟಾದಾಗ ಇನ್ನೂ 15 ಓವರ್​​ ಇತ್ತು, 300 ರನ್​​ ಹೊಡಿಬಹುದಿತ್ತು; ಇಶಾನ್ ಕಿಶನ್

IND vs BAN: ನಾನು ಔಟಾದಾಗ ಇನ್ನೂ 15 ಓವರ್​​ ಇತ್ತು, 300 ರನ್​​ ಹೊಡಿಬಹುದಿತ್ತು; ಇಶಾನ್ ಕಿಶನ್

ಭಾರತಕ್ಕೆ ಗೆಲುವು

ಭಾರತಕ್ಕೆ ಗೆಲುವು

IND vs BAN: ನಾನು ಔಟಾದಾಗ ಇನ್ನಿಂಗ್ಸ್​​ನಲ್ಲಿ 15 ಓವರ್​ಗಳು ಬಾಕಿ ಇತ್ತು. ಒಂದೊಮ್ಮೆ ನಾನು ಔಟಾಗದೆ ಇದಿದ್ದರೆ 300 ರನ್​ ಗಳಿಸುವ ಅವಕಾಶವಿತ್ತು ಎಂದು ಇಶಾನ್ ಕಿಶನ್ ಹೇಳಿದ್ದಾರೆ.

  • Share this:

ಬಾಂಗ್ಲಾದೇಶದಲ್ಲಿ (Bangladesh) ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಟೂರ್ನಿಯಲ್ಲಿ ಟೀಂ ಇಂಡಿಯಾ (Team India) ಬ್ಯಾಟರ್​ಗಳು ದೂಳೆಬ್ಬಿಸಿದ್ದಾರೆ. ಆರಂಭಿಕ ಇಶಾನ್ ಕಿಶನ್ (Ishan Kishan), ದ್ವಿಶತಕ ಸಿಡಿಸಿ ಮಿಂಚಿದರೆ, ವಿರಾಟ್ ಕೊಹ್ಲಿ (Virat Kohli) ಶತಕ ಸಿಡಿಸಿ ದಾಖಲೆ ನಿರ್ಮಿಸಿದರು. ಟೀಂ ಇಂಡಿಯಾ ಇನ್ನಿಂಗ್​ ಮುಕ್ತಾಯದ ಬಳಿಕ ದ್ವಿಶತಕದ ಕುರಿತು ಮಾತನಾಡಿದ ಇಶಾನ್ ಕಿಶನ್, ನಾನು ಔಟಾದಾಗ ಇನ್ನಿಂಗ್ಸ್​​ನಲ್ಲಿ 15 ಓವರ್​ಗಳು ಬಾಕಿ ಇತ್ತು. ಒಂದೊಮ್ಮೆ ನಾನು ಔಟಾಗದೆ ಇದಿದ್ದರೆ 300 ರನ್​ ಗಳಿಸುವ ಅವಕಾಶವಿತ್ತು ಎಂದು ಹೇಳಿದ್ದಾರೆ.


ಪಂದ್ಯದಲ್ಲಿ ಬಾಂಗ್ಲಾ ದೇಶಕ್ಕೆ ಟೀಂ ಇಂಡಿಯಾ 410 ರನ್​ ಗಳ ಗುರಿಯನ್ನು ನೀಡಿದೆ. ಟಾಸ್​ ಸೋತು ಬ್ಯಾಟಿಂಗ್​​ಗೆ ಇಳಿದ ಟೀಂ ಇಂಡಿಯಾ ನಿಗದಿತ 50 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್​ ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು. ಟೀಂ ಇಂಡಿಯಾ ಪರ ಇಶಾನ್ ಕಿಶನ್, 131 ಎಸೆತಗಳಲ್ಲಿ 24 ಬೌಂಡರಿ, 10 ಸಿಕ್ಸರ್ ಗಳೊಂದಿಗೆ 210 ರನ್ ಗಳಿಸಿದರು. ಉಳಿದಂತೆ ಬಾಂಗ್ಲಾ ಪರ ಟಸ್ಕಿನ್ ಅಹ್ಮದ್, ಹಸೋನ್ನ ಮತ್ತು ಶಕೀಬ್ ಅಲ್ ಹಸನ್ ತಲಾ 2 ವಿಕೆಟ್ ಪಡೆದರೆ, ಮೆಹೆದ್ದಿ ಹಸನ್ 1 ವಿಕೆಟ್ ಪಡೆದರು.


ಬೃಹತ್ ಮೊತ್ತ ಗಳಿಸೋದು ನಮ್ಮ ಉದ್ದೇಶವಾಗಿತ್ತು


ಪಂದ್ಯದ ಬಳಿಕ ಮಾತನಾಡಿದ ಕಿಶನ್, ಎದುರಾಳಿ ತಂಡಕ್ಕೆ ಬೃಹತ್ ಮೊತ್ತದ ಗುರಿಯನ್ನು ನೀಡುವುದು ನಮ್ಮ ಉದ್ದೇಶವಾಗಿತ್ತು. ಈ ಬಗ್ಗೆ ನಾನು ಸಂತೋಷದಿಂದಿದ್ದೇನೆ. ನಾನು ಔಟಾದ ಸಂದರ್ಭದಲ್ಲಿ ಇನ್ನಿಂಗ್ಸ್​ನಲ್ಲಿ ಇನ್ನು 15 ಓವರ್​ಗಳು ಬಾಕಿ ಇತ್ತು. ನಾನು ಔಟಾಗದೆ ಇದ್ದಿದ್ದರೆ 300 ರನ್ ಗಳಿಸುವ ಅವಕಾಶವಿತ್ತು. ವಿರಾಟ್ ಬಾಯ್ ಜೊತೆ ಬ್ಯಾಟಿಂಗ್ ಮಾಡಿದ್ದು ಸಖತ್ ಖುಷಿ ಕೊಟ್ಟಿದೆ. ನಾನು 90 ರನ್​ ಗಳಿಸಿದ್ದಾಗ ಸಿಂಗಲ್ ಮೂಲಕ ಶತಕ ಪೂರೈಸಬೇಕು ಎಂದಿತ್ತು. ಆದರೆ ಇದು ನನ್ನ ಮೊದಲ ದ್ವಿಶಕವಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Ishan Kishan: ಏಕದಿನ ಕ್ರಿಕೆಟ್​ನಲ್ಲಿ ಸಿಡಿದಿದ್ದು 9 ದ್ವಿಶತಕಗಳು, ಇದ್ರಲ್ಲಿ ಭಾರತೀಯರದ್ದೇ ಸಿಂಹಪಾಲು!ವಿರಾಟ್ ಕೊಹ್ಲಿ,  ಸೂರ್ಯಕುಮಾರ್ ಯಾದವ್​​ರನ್ನ ಹೊಗಳಿದ ಇಶಾನ್


ಸೂರ್ಯ ಬಾಯ್ ಕೂಡ ನನಗೆ ಹಲವು ಸಲಹೆ ನೀಡಿದ್ದರು. ಬ್ಯಾಟಿಂಗ್ ಮಾಡಲು ಹೋದಾಗ ನಿಮ್ಮ ಗಮನ ಚೆಂಡಿನ ಮೇಲೆ ಮಾತ್ರ ಇರಲಿ ಎಂದು ಸಲಹೆ ನೀಡಿದ್ದರು. ನಾನ ಹೆಚ್ಚು ಒತ್ತಡಕ್ಕೆ ಒಳಗಾಗಲಿಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದೇನೆ ಎಂದು ಕಿಶನ್ ತಿಳಿಸಿದ್ದಾರೆ.


ಇನ್ನು, ಬಾಂಗ್ಲಾ ಬೌಲರ್​ಗಳನ್ನು ನಿರ್ಭೀತಿಯಿಂದ ದಂಡಿಸಿದ ಕಿಶನ್​, ಏಕದಿನ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ ದ್ವಿಶಕತ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 24 ವರ್ಷದ ಕಿಶನ್, ಏಕದಿನ ಮಾದರಿ ಕ್ರಿಕೆಟ್​​​ನಲ್ಲಿ ದ್ವಿಶತಕ ಸಿಡಿಸಿದ ಭಾರತ ನಾಲ್ವನೇ ಹಾಗೂ ವಿಶ್ವದ ಏಳನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕಿಶನ್ ಇನ್ನಿಂಗ್​​ನ 35ನೇ ಓವರ್​​ನ ಕೊನೆಯ ಎಸೆತದಲ್ಲಿ ರನ್​ ಗಳಿಸುವ ಮೂಲಕ ದ್ವಿಶತಕ ಪೂರೈಸಿದ್ದರು. ಈ ಮೂಲಕ ವಿಕೆಟ್ ಕೀಪರ್ ಆಗಿ ದ್ವಿಶತಕ ಮತ್ತು ಅತೀ ಹೆಚ್ಚು ರನ್ ಗಳಿಸಿದ ಧೊನಿಯ ದಾಖಲೆಯನ್ನು ಮುರಿದರು.ಭಾರತ-ಬಾಂಗ್ಲಾ ಪ್ಲೇಯಿಂಗ್​ 11:


ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (WK), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್​ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.


ಬಾಂಗ್ಲಾದೇಶ ತಂಡ: ಅನಾಮುಲ್ ಹಕ್, ಲಿಟನ್ ದಾಸ್ (ನಾಯಕ), ಶಕೀಬ್ ಅಲ್ ಹಸನ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ಮೆಹದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್ ಮತ್ತು ಇಬಾದತ್ ಹೊಸೈನ್.

Published by:Sumanth SN
First published: