• Home
  • »
  • News
  • »
  • sports
  • »
  • IND vs BAN ODI: ಕೊಹ್ಲಿ-ಕಿಶನ್​ ಅಬ್ಬರಕ್ಕೆ ತತ್ತರಿಸಿದ ಬಾಂಗ್ಲಾ, ದಾಖಲೆಯ ಮೊತ್ತ ಕಲೆಹಾಕಿದ ಟೀಂ ಇಂಡಿಯಾ

IND vs BAN ODI: ಕೊಹ್ಲಿ-ಕಿಶನ್​ ಅಬ್ಬರಕ್ಕೆ ತತ್ತರಿಸಿದ ಬಾಂಗ್ಲಾ, ದಾಖಲೆಯ ಮೊತ್ತ ಕಲೆಹಾಕಿದ ಟೀಂ ಇಂಡಿಯಾ

IND vs BAN

IND vs BAN

IND vs BAN 3rd ODI: ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್​ಗಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿತು. ಈ ಮೂಲಕ ಅಂತಿಮ ಪಂದ್ಯದಲ್ಲಿ ಬಾಂಗ್ಲಾಗೆ 410 ರನ್ ಗಳ ಬೃಹತ್ ಮೊತ್ತದ ಟಾರ್ಗೆಟ್​ ನೀಡಿದೆ.

  • Share this:

ಇಂದು ಕ್ರಿಕೆಟ್​ ಲೋಕವೇ ಒಮ್ಮೆ ಭಾರತ ತಂಡದ ಪ್ರದರ್ಶನದತ್ತ ತಿರುಗಿ ನೋಡಿದೆ. ಹೌದು, ಇಂದು ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ (IND vs BAN ODI) ನಡುವಿನ 3ನೇ ಏಕದಿನ ಪಂದ್ಯದಲ್ಲಿ ಭಾರತದ ಇಶಾನ್ ಕಿಶನ್ (Ishan Kishan) ಮತ್ತು ವಿರಾಟ್ ಕೊಹ್ಲಿ (Virat Kohli) ಬಾಂಗ್ಲಾ ಬೌಲರ್​ಗಳ ಬೆವರಿಳಿಸಿದರು. ಈ ಮೂಲಕ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತದ ಪರ ಕಿಶನ್ ದಾಖಲೆಯ ದ್ವಿಶತಕ ಮತ್ತು ಕೊಹ್ಲಿ ಸಹ ದಾಖಲೆಯ ಶತಕ ಸಿಡಿಸುವ ಮೂಲಕ ನಿಗದಿತ 50 ಓವರ್​ಗಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಗಳಿಸುವ ಮೂಲಕ ಅಂತಿಮ ಪಂದ್ಯದಲ್ಲಿ ಬಾಂಗ್ಲಾಗೆ 410 ರನ್ ಗಳ ಬೃಹತ್ ಮೊತ್ತದ ಟಾರ್ಗೆಟ್​ ನೀಡಿದೆ.


ಮಿಂಚಿದ ಕಿಶನ್-ಕೊಹ್ಲಿ:


ಇನ್ನು, ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್​ಗಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿತು. ಭಾರತದ ಪರ ಇಂದು ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಕೇವಲ 3 ರನ್ ಗಳಿಸಿ ವಿಕೆಟ್​ ಒಪ್ಪಿಸಿದ ನಂತರ ಇಶನ್ ಕಿಶನ್ 131 ಎಸೆತದಲ್ಲಿ 10 ಸಿಕ್ಸ್ ಮತ್ತು 24 ಫೋರ್​ ಮೂಲಕ ಆಕರ್ಷಕ 210 ರನ್ ಮತ್ತು ವಿರಾಟ್ ಕೊಹ್ಲಿ 91 ಎಸೆತದಲ್ಲಿ 2 ಸಿಕ್ಸ್ 11 ಪೋರ್​ ಮೂಲಕ 113 ರನ್ ಗಳಿಸುವ ಮೂಲಕ ಇಬ್ಬರೂ ಬಾಂಗ್ಲಾ ವಿರುದ್ಧ ಅಬ್ಬರಿಸಿದರು. ಉಳಿದಂತೆ ಶ್ರೇಯಸ್​ ಅಯ್ಯರ್ 3 ರನ್, ನಾಯಕ ಕೆಎಲ್ ರಾಹುಲ್ 8 ರನ್, ವಾಷಿಂಗ್ಟನ್ ಸುಂರ್ 37 ರನ್, ಅಕ್ಷರ್ ಪಟೇಲ್ 20 ರನ್, ಶಾರ್ದೂಲ್ ಠಾಕೂರ್ 3 ರನ್, ಕುಲದೀಪ್​ ಯಾದವ್ 3 ರನ್ ಗಳಿಸಿದರು.ಬಾಂಗ್ಲಾ ಬೌಲರ್​ಗಳು ಸುಸ್ತು:


ಇನ್ನು, ಟಾಸ್​ ಗೆದ್ದು ಮೊದಲು ಬೌಲಿಂಗ್ ಆರಂಭಿಸಿದ ಬಾಂಗ್ಲಾ ಲೆಕ್ಕಾಚಾರವನ್ನು ಕಿಶನ್ ಮತ್ತು ಕೊಹ್ಲಿ ತಲೆಕೆಳಗಾಗಿಸಿದರು. ಈ ಇಬ್ಬರ ನಿಯಂತ್ರಿಸಲು ಬಾಂಗ್ಲಾ ಬೌಲರ್​ಗಳ ಬಳಿ ಸಾಧ್ಯವಾಗಲಿಲ್ಲ. ಬಾಂಗ್ಲಾ ಪರ ಟಸ್ಕಿನ್ ಅಹ್ಮದ್, ಹಸೋನ್ನ ಮತ್ತು ಶಕೀಬ್ ಅಲ್ ಹಸನ್ ತಲಾ 2 ವಿಕೆಟ್ ಪಡೆದರೆ, ಮೆಹೆದ್ದಿ ಹಸನ್ 1 ವಿಕೆಟ್ ಪಡೆದರು.


ಇದನ್ನೂ ಓದಿ: Virat Kohli: ಇತಿಹಾಸ ಸೃಷ್ಟಿಸಿದ ಕಿಂಗ್ ಕೊಹ್ಲಿ, 72ನೇ ಶತಕ ಸಿಡಿಸಿ 'ವಿರಾಟ್' ವಿಶ್ವ ದಾಖಲೆ! ರಿಕಿ ಪಾಂಟಿಂಗ್ ರೆಕಾರ್ಡ್ಸ್ ಉಡೀಸ್!


ದಾಖಲೆ ಬರೆದ ಕಿಶನ್ ಮತ್ತು ಕೊಹ್ಲಿ:


ಇನ್ನು, ಏಕದಿನ ಮೊದಲ ಶತಕ ಸಿಡಿಸಿದ ಕಿಶನ್ ದ್ವಿಶತಕ ಸಿಡಿಸಿದ ಕಿಶನ್ 4ನೇ ಭಾರತೀಯ ಆಟಗಾರ ದ್ವಿಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೇ ವಿಕೆಟ್ ಕೀಪರ್ ಆಗಿ ದ್ವಿಶತಕ ಮತ್ತು ಅತೀ ಹೆಚ್ಚು ರನ್ ಗಳಿಸಿದ ಧೊನಿಯ ದಾಖಲೆಯನ್ನು ಮುರಿದರು. ಇದಲ್ಲದೇ ವಿರಾಟ್ ಕೊಹ್ಲಿ ಅತರಾಷ್ಟ್ರೀಯ ಕ್ರಿಕೆಟ್​ನಲ್ಲಿ 3 ಮಾದರಲ್ಲಿ ಸಚಿನ್ ಬಳಿಕ ಅತೀಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಅಲ್ಲದೇ ಈ ವೇಳೆ 72 ಶತಕ ಸಿಡಿಸಿ ಆಸೀಸ್​ ಮಾಜಿ ನಾಯಕ ರಿಕ್ಕಿ ಪಾಂಟಿಂಗ್​​ ದಾಖಲೆಯನ್ನು ಮುರಿದರು.ಭಾರತ-ಬಾಂಗ್ಲಾ ಪ್ಲೇಯಿಂಗ್​ 11:


ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (WK), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್​ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.


ಬಾಂಗ್ಲಾದೇಶ ತಂಡ: ಅನಾಮುಲ್ ಹಕ್, ಲಿಟನ್ ದಾಸ್ (ನಾಯಕ), ಶಕೀಬ್ ಅಲ್ ಹಸನ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ಮೆಹದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್ ಮತ್ತು ಇಬಾದತ್ ಹೊಸೈನ್.

Published by:shrikrishna bhat
First published: