ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿಯು ಕುಲದೀಪ್ ಯಾದವ್ (Kuldeep Yadav) ಅವರನ್ನು ಮೂರನೇ ಮತ್ತು ಅಂತಿಮ ಏಕದಿನ ಪಂದ್ಯಕ್ಕೆ ಭಾರತ ತಂಡಕ್ಕೆ (Team India) ಆಯ್ಕೆ ಮಾಡಿದೆ. ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಭಾರತದ ನಾಯಕ ರೋಹಿತ್ ಶರ್ಮಾ (Rohit Sharma) ಎರಡನೇ ಓವರ್ನಲ್ಲಿ ಹೆಬ್ಬೆರಳಿಗೆ ಗಾಯ ಮಾಡಿಕೊಂಡರು. ಅವರನ್ನು ಬಿಸಿಸಿಐ (BCCI) ವೈದ್ಯಕೀಯ ತಂಡವು ಮೌಲ್ಯಮಾಪನ ಮಾಡಿತು ಮತ್ತು ಢಾಕಾದ ಸ್ಥಳೀಯ ಆಸ್ಪತ್ರೆಯಲ್ಲಿ ಸ್ಕ್ಯಾನ್ ಮಾಡಲಾಯಿತು. ತಜ್ಞರ ಸಮಾಲೋಚನೆಗಾಗಿ ಮುಂಬೈಗೆ ತೆರಳಿದ್ದು, ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಕಣಕ್ಕಿಳಿಯುತ್ತಿಲ್ಲ. ಮುಂಬರುವ ಟೆಸ್ಟ್ ಸರಣಿಗೆ ಅವರ ಲಭ್ಯತೆಯ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟನೆ ದೊರಕಿಲ್ಲ.
ನಾಳಿನ ಪಂದ್ಯಕ್ಕೆ ಕುಲದೀಪ್ ಆಯ್ಕೆ:
ಇದರೊಂದಿಗೆ ವೇಗದ ಬೌಲರ್ ಕುಲದೀಪ್ ಸೇನ್ ಮೊದಲ ಏಕದಿನ ಪಂದ್ಯದ ನಂತರ ಬೆನ್ನಿನ ನೋವಿಗೆ ಒಳಗಾಗಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಅವರಿಗೆ ಚಿಕಿತ್ಸೆ ನೀಡಿದ ನಂತರ ವಿಶ್ರಾಂತಿ ಪಡೆಯುವಂತೆ ಸೂಚಿಸಿದೆ.
🚨 NEWS 🚨: Kuldeep Yadav added to #TeamIndia squad for the final ODI against Bangladesh. #BANvIND
Other Updates & More Details 🔽https://t.co/8gl4hcWqt7
— BCCI (@BCCI) December 9, 2022
ಕೆಎಲ್ ರಾಹುಲ್ (C/WK), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (WK), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ , ಮೊಹಮ್ಮದ್. ಸಿರಾಜ್, ಉಮ್ರಾನ್ ಮಲಿಕ್, ಕುಲದೀಪ್ ಯಾದವ್.
ಈ ಸರಣಿಯಿಂದ ಈಗಾಗಲೇ ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು, ತಂಡದ ಉಪ ನಾಯಕರಾಗಿರುವ ಕೆಎಲ್ ರಾಹುಲ್ ಅಂತಿಮ ಪಂದ್ಯಕ್ಕೆ ನಾಯಕರಾಗಲಿದ್ದಾರೆ ಎಂದು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ.
ಇದನ್ನೂ ಓದಿ: Team India: ಟೀಂ ಇಂಡಿಯಾದ ಆ 8 ಸೋಲುಗಳು, ಎಂದೂ ಮರೆಯದ ಕಹಿ ನೆನಪುಗಳು
ಭಾರತದ ಗಾಯಾಳುಗಳ ಪಟ್ಟಿ:
ರೋಹಿತ್ ಶರ್ಮಾ (ಹೆಬ್ಬೆರಳಿಗೆ ಗಾಯ)
ರಿಷಭ್ ಪಂತ್ (ಬೆನ್ನುನೋವು)
ಮೊಹಮ್ಮದ್ ಶಮಿ (ಭುಜದ ಗಾಯ)
ದೀಪಕ್ ಚಹಾರ್ (ಮಂಡಿರಜ್ಜು ಗಾಯ)
ಕುಲದೀಪ್ ಸೇನ್ (ಗಟ್ಟಿಯಾದ ಬೆನ್ನು)
ನಾಳೆ ಭಾರತ-ಬಾಂಗ್ಲಾ ಅಂತಿಮ ಪಂದ್ಯ:
ನಾಳೆ ಭಾರತ ಮತ್ತು ಬಾಂಗ್ಲಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ 3ನೇ ಏಕದಿನ ಪಂದ್ಯ ನಡೆಯಲಿದೆ. ನಾಳಿನ ಪಂದ್ಯ ಬಾಂಗ್ಲಾದ ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ 11:30ಕ್ಕೆ ಆರಂಭವಾಗಲಿದ್ದು, 11 ಗಂಟೆಗೆ ಟಾಸ್ ಆಗಲಿದೆ. ಈ ಪಂದ್ಯಗಳನ್ನು ಸೋನಿ ನೆಟ್ವರ್ಕ್ ನೇರ ಪ್ರಸಾರ ಮಾಡಲಿದೆ. ಸೋನಿ ಲೈವ್ ಅಪ್ಲಿಕೇಶನ್ನಲ್ಲಿ ನೀವು ಈ ಪಂದ್ಯಗಳನ್ನು ಲೈವ್ ಆಗಿ ವೀಕ್ಷಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ