• Home
  • »
  • News
  • »
  • sports
  • »
  • IND vs BAN ODI: ದಾಖಲೆಯ ದ್ವಿಶತಕ ಸಿಡಿಸಿದ ಇಶಾನ್ ಕಿಶನ್, ಬಾಂಗ್ಲಾ ಹುಲಿಗಳ ಹುಟ್ಟಡಗಿಸಿದ ಟೀಂ ಇಂಡಿಯಾ ಯಂಗ್​ ಟೈಗರ್​

IND vs BAN ODI: ದಾಖಲೆಯ ದ್ವಿಶತಕ ಸಿಡಿಸಿದ ಇಶಾನ್ ಕಿಶನ್, ಬಾಂಗ್ಲಾ ಹುಲಿಗಳ ಹುಟ್ಟಡಗಿಸಿದ ಟೀಂ ಇಂಡಿಯಾ ಯಂಗ್​ ಟೈಗರ್​

ಇಶನ್ ಕಿಶನ್

ಇಶನ್ ಕಿಶನ್

IND vs BAN 3rd ODI: ಇಶಾನ್ ಕಿಶನ್ (ಇಶನ್ ಕಿಶನ್) ತಮ್ಮ ODI ವೃತ್ತಿಜೀವನದ ಮೊದಲ ಶತಕವನ್ನು ಗಳಿಸುವ ಮೂಲಕ ಟೀಮ್ ಇಂಡಿಯಾ ಮೂರನೇ ODI ನಲ್ಲಿ ಉತ್ತಮ ರನ್ ಗಳಿಸಲು ಸಹಾಯಕರಾದರು.

  • Share this:

ಇಶಾನ್ ಕಿಶನ್ ಶನಿವಾರ ತಮ್ಮ ಏಕದಿನ ವೃತ್ತಿಜೀವನದ ಮೊದಲ ಶತಕ ದಾಖಲಿಸಿ ಅಬ್ಬರಿಸಿದದ್ದಲ್ಲದೇ ಇದೀಗ ದ್ವಿಶತಕ ಸಿಡಿಸಿ ಮಿಂಚಿದರು. 24 ವರ್ಷದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊದಲ ಬಾರಿಗೆ ಬಾಂಗ್ಲಾದೇಶ (IND vs BAN) ಪ್ರವಾಸದಲ್ಲಿ ಆಡಲು ಅವಕಾಶ ಪಡೆದರು. ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ಅವರು 85 ಎಸೆತಗಳಲ್ಲಿ ಶತಕ ಗಳಿಸಿದರು.  ಬಳಿಕ ಅಬ್ಬರಿಸಲು ಆರಂಭಿಸಿದ ಕಿಶನ್​ ಭಾರತದ ಪರ 4ನೇ ಆಟಗಾರನಾಗಿ ದ್ವಿಶತಕ ಸಿಡಿಸಿದ್ದಾರೆ. ಅಲ್ಲದೇ ವಿಕೆಟ್​ ಕೀಪರ್​ ಆಗಿ ಧೋನಿಯ ದಾಖಲೆಯನ್ನೂ ಮುರಿದಿದ್ದಾರೆ.


ಇನ್ನು,  3 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 0-2 ಹಿನ್ನಡೆಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ನಾಯಕತ್ವದಲ್ಲಿ ತಂಡ ಈ ಪಂದ್ಯವನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ತಪ್ಪಿಸಿಕೊಳ್ಳಲು ಹವಣಿಸುತ್ತಿದೆ. ಪಂದ್ಯದಲ್ಲಿ ಬಾಂಗ್ಲಾದೇಶ ನಾಯಕ ಲಿಟನ್ ದಾಸ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು, ಆದರೆ ಭಾರತ ತಂಡಕ್ಕೆ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ಶಿಖರ್ ಧವನ್ ಕೇವಲ 3 ರನ್ ಗಳಿಸಲಷ್ಟೇ ಶಕ್ತರಾದರು.  ಮೂರೂ ಪಂದ್ಯಗಳಲ್ಲಿ 20 ರನ್ ಕೂಡ ಗಳಿಸಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಇಶಾನ್ ಹಾಗೂ ಕೊಹ್ಲಿ ಶತಕದ ಜೊತೆಯಾಟದ ಕೊಡುಗೆ ನೀಡಿದರು.


ಭರ್ಜರಿ ದ್ವಿಶತಕ ಸಿಡಿಸಿದ ಕಿಶನ್:


ಇನ್ನು, ಆರಂಭಿಕರಾಗಿ ಕಣಕ್ಕಿಳಿದ ಇಶನ್​ ಕಿಶನ್​ ಧವನ್ ಜೊತೆ ಇನ್ನಿಂಗ್ಸ್​ ಆರಂಭಿಸಿದರು. ಆದರೆ ಕಿಶನ್​ ನಂತರದಲ್ಲಿ ಕೊಹ್ಲಿ ಜೊತೆ ಶತಕದ ಆಟವಾಡಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಸಹಕಾರಿ ಆಗುತ್ತಿದ್ದಾರೆ. ಅಲ್ಲದೇ ವೃತ್ತಿ ಜೀವನದ ಮೊದಲ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. 126 ಬೌಲ್​ಗೆ 23 ಫೋರ್​ ಮತ್ತು 9 ಸಿಕ್ಸ್ ಮೂಲಕ ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದರು.


ಟಾಸ್ ಸೋತ ಭಾರತ ತಂಡಕ್ಕೆ 5ನೇ ಓವರ್ ನಲ್ಲಿ ಮೊದಲ ವಿಕೆಟ್​ ಬಿತ್ತು. ಆಫ್ ಸ್ಪಿನ್ನರ್ ಮೆಹದಿ ಹಸನ್ ಎಲ್ಬಿಡಬ್ಲ್ಯೂ ಬಲೆಗೆ ಶಿಖರ್ ಧವನ್ ಬಿದ್ದರು. ಆದರೂ ಮೈದಾನದ ಅಂಪೈರ್ ಔಟ್ ನೀಡಲಿಲ್ಲ. ಇದರ ನಂತರ ಬಾಂಗ್ಲಾದೇಶ ರಿವ್ಯೂ ತೆಗೆದುಕೊಂಡಿತು ಮತ್ತು ಧವನ್ ಪೆವಿಲಿಯನ್‌ಗೆ ಮರಳಿದರು. ಅವರು 8 ಎಸೆತಗಳಲ್ಲಿ 3 ರನ್ ಗಳಿಸಿದರು. ಮೊದಲ ಪಂದ್ಯದಲ್ಲಿ ಕೇವಲ 7 ರನ್ ಮತ್ತು ಎರಡನೇ ಏಕದಿನ ಪಂದ್ಯದಲ್ಲಿ 8 ರನ್ ಗಳಿಸಲು ಸಾಧ್ಯವಾಯಿತು. ಈ ರೀತಿಯಾಗಿ, ಅವರು ODI ಸರಣಿಯ 3 ಪಂದ್ಯಗಳಲ್ಲಿ 6 ರ ಸರಾಸರಿಯಲ್ಲಿ ಕೇವಲ 18 ರನ್ ಗಳಿಸಿದರು. ಆದರೆ ಇಶಾನ್ ಕಿಶನ್ ಇಂದು ತನಮ್ಮ ಚೊಚ್ಚಲ ಶತಕ ಸಿಡಿಸಿ ಅಬ್ಬರಿಸಿದರು. ಅಲ್ಲದೇ 150+ ರನ್ ಹೊಡೆದು 200 ರನ್ ನತ್ತ ಮುನ್ನುಗ್ಗುತ್ತಿದ್ದಾರೆ.ಕಿಶನ್​ ಭರ್ಜರಿ ಆಟ:


ಇದು ಇಶಾನ್ ಕಿಶನ್ ಅವರ ಒಟ್ಟಾರೆ 9ನೇ ಏಕದಿನ ಇನ್ನಿಂಗ್ಸ್ ಆಗಿದೆ. ಅವರು ಇಲ್ಲಿಯವರೆಗೆ 3 ಅರ್ಧ ಶತಕ ಮತ್ತು ಒಂದು ಶತಕ ಗಳಿಸಿದ್ದಾರೆ. ಅಂದರೆ, ಪ್ರತಿ ಎರಡನೇ ಇನ್ನಿಂಗ್ಸ್‌ನಲ್ಲಿ 50ಕ್ಕೂ ಹೆಚ್ಚು ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡುತ್ತಿದ್ದಾರೆ. ಈ ಪಂದ್ಯಕ್ಕೂ ಮುನ್ನ ಇಶಾನ್ 8 ಏಕದಿನ ಪಂದ್ಯಗಳಲ್ಲಿ 33ರ ಸರಾಸರಿಯಲ್ಲಿ 267 ರನ್ ಗಳಿಸಿದ್ದರು. 93 ರನ್ ಅತ್ಯುತ್ತಮ ಇನ್ನಿಂಗ್ಸ್ ಆಗಿತ್ತು. ಸ್ಟ್ರೈಕ್ ರೇಟ್ 91 ಆಗಿತ್ತು, ಅವರು 21 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 589 ರನ್ ಗಳಿಸಿದ್ದಾರೆ. 4 ಅರ್ಧಶತಕಗಳನ್ನು ಗಳಿಸಿದ್ದಾರೆ.


ಇದನ್ನೂ ಓದಿ: IPL 2023: ಐಪಿಎಲ್​ ಫ್ರಾಂಚೈಸಿಗಳಿಗೆ ಬಿಗ್​ ಶಾಕ್​ ನೀಡಿದ ಬಿಸಿಸಿಐ, ಒಬ್ಬ ಭಾರತೀಯ ಆಟಗಾರನಿಗೆ ಮಾತ್ರ ಸಿಗಲಿದೆ ಚಾನ್ಸ್?


ಭಾರತ-ಬಾಂಗ್ಲಾ ಪ್ಲೇಯಿಂಗ್​ 11:


ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (WK), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್​ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.


ಬಾಂಗ್ಲಾದೇಶ ತಂಡ: ಅನಾಮುಲ್ ಹಕ್, ಲಿಟನ್ ದಾಸ್ (ನಾಯಕ), ಶಕೀಬ್ ಅಲ್ ಹಸನ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ಮೆಹದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್ ಮತ್ತು ಇಬಾದತ್ ಹೊಸೈನ್.

Published by:shrikrishna bhat
First published: