ಭಾರತ ಮತ್ತು ಬಾಂಗ್ಲಾದೇಶ (IND vs BAN ODI) ಕ್ರಿಕೆಟ್ ತಂಡಗಳು ಇಂದು ಅಂದರೆ ಶನಿವಾರದಂದು ಸರಣಿಯ ಮೂರನೇ ಮತ್ತು ಕೊನೆಯ ODI ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಚಟ್ಟೋಗ್ರಾಮ್ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ (Zahur Ahmed Chowdhury Stadium) ಉಭಯ ತಂಡಗಳ ನಡುವಿನ ಈ ಪಂದ್ಯ ನಡೆಯುತ್ತಿದೆ. ಆತಿಥೇಯ ಬಾಂಗ್ಲಾದೇಶ ಈಗಾಗಲೇ 3 ಪಂದ್ಯಗಳ ಸರಣಿಯನ್ನು ಗೆದ್ದುಕೊಂಡಿದೆ. ಈಗಾಗಲೇ ಟಾಸ್ ಗೆದ್ದಿರುವ ಬಾಂಗ್ಲಾದೇಶ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡ (Team India) ಮೊದಲು ಬ್ಯಾಟಿಂಗ್ ಮಾಡಲಿದೆ.
ಭಾರತ-ಬಾಂಗ್ಲಾ ಪ್ಲೇಯಿಂಗ್ 11:
ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (WK), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.
ಬಾಂಗ್ಲಾದೇಶ ತಂಡ: ಅನಾಮುಲ್ ಹಕ್, ಲಿಟನ್ ದಾಸ್ (ನಾಯಕ), ಶಕೀಬ್ ಅಲ್ ಹಸನ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ಮೆಹದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್ ಮತ್ತು ಇಬಾದತ್ ಹೊಸೈನ್.
ಪಂದ್ಯದ ನೇರಪ್ರಸಾರ ಯಾವ ಚಾನಲ್ನಲ್ಲಿ?:
ಇಂದು ಭಾರತ ಮತ್ತು ಬಾಂಗ್ಲಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ 3ನೇ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯಗಳನ್ನು ಸೋನಿ ನೆಟ್ವರ್ಕ್ ನೇರ ಪ್ರಸಾರ ಮಾಡಲಿದೆ. ಸೋನಿ ಲೈವ್ ಅಪ್ಲಿಕೇಶನ್ನಲ್ಲಿ ನೀವು ಈ ಪಂದ್ಯಗಳನ್ನು ಲೈವ್ ಆಗಿ ವೀಕ್ಷಿಸಬಹುದು.
🚨 Team News 🚨
2⃣ changes for #TeamIndia as @ishankishan51 & @imkuldeep18 are named in the team. #BANvIND
Follow the match 👉 https://t.co/HGnEqugMuM
A look at our Playing XI 🔽 pic.twitter.com/pZY5cfh8HR
— BCCI (@BCCI) December 10, 2022
ಚಟ್ಟೋಗ್ರಾಮ್ನಲ್ಲಿರುವ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಜಹೂರ್ ಅಹ್ಮದ್ ಚೌಧರಿ ಸ್ಟೇಡಿಯಂನ ವಿಕೆಟ್ ಬ್ಯಾಟ್ಸ್ಮನ್ಗಳಿಗೆ ಸಹಕಾರಿಯಾಗಿದೆ. ಈ ಪಿಚ್ನಲ್ಲಿ 300 ಕ್ಕಿಂತ ಹೆಚ್ಚು ಸ್ಕೋರ್ ಮಾಡಬಹುದು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಬೃಹತ್ ಮೊತ್ತ ಕಲೆಹಾಕುವ ಸಾಧ್ಯತೆ ಇದೆ. ಇದು ನಂತರ ಚೇಸಿಂಗ್ ಮಾಡುವ ತಂಡಕ್ಕೆ ಕೊಂಚ ಹಿನ್ನಡೆ ಆಗಲಿದೆ.
ಪಂದ್ಯಕ್ಕೆ ಮಳೆ ಅಡ್ಡಿ?:
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸರಣಿಯ ಮೂರನೇ ಮತ್ತು ಕೊನೆಯ ODI ಶನಿವಾರ ಚಟ್ಟೋಗ್ರಾಮ್ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಮಳೆ ವಿಲನ್ ಆಗಲಿದೆಯೇ ಎಂದು ನೋಡುವುದಾರೆ, ಸ್ಥಳೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಬಾಂಗ್ಲಾದೇಶದ ಚಟ್ಟೋಗ್ರಾಮ್ ನಗರದಲ್ಲಿ ಹಗಲಿನ ತಾಪಮಾನವು ಶನಿವಾರ 29 ಡಿಗ್ರಿ ಸೆಲ್ಸಿಯಸ್ ಆಗಿದ್ದು ರಾತ್ರಿ 17 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಸಂಪೂರ್ಣ ಪಂದ್ಯ ನಡೆಯಲಿದೆ.
ಇದನ್ನೂ ಓದಿ: IND vs BAN: ಟೀಂ ಇಂಡಿಯಾ ಸೋಲಿಗೆ ಆ ಇಬ್ಬರು ಮಾಡಿದ ತಪ್ಪೇ ಕಾರಣ, ಕಾರ್ತಿಕ್ ಶಾಕಿಂಗ್ ಹೇಳಿಕೆ
ಟೀಂ ಇಂಡಿಯಾ ಮುನ್ನಡೆಸಲಿರುವ ರಾಹುಲ್:
ಟೀಮ್ ಇಂಡಿಯಾದ ನಿಯಮಿತ ನಾಯಕ ರೋಹಿತ್ ಶರ್ಮಾ ಅವರು ಗಾಯದ ಕಾರಣ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ರೋಹಿತ್ ಬದಲಿಗೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ