• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs BAN ODI: ಇಂದು ಭಾರತ-ಬಾಂಗ್ಲಾ 2ನೇ ಏಕದಿನ ಪಂದ್ಯ, ಟೀಂ ಇಂಡಿಯಾ ಪ್ಲೇಯಿಂಗ್​ 11ನಲ್ಲಿ 1 ಬದಲಾವಣೆ

IND vs BAN ODI: ಇಂದು ಭಾರತ-ಬಾಂಗ್ಲಾ 2ನೇ ಏಕದಿನ ಪಂದ್ಯ, ಟೀಂ ಇಂಡಿಯಾ ಪ್ಲೇಯಿಂಗ್​ 11ನಲ್ಲಿ 1 ಬದಲಾವಣೆ

IND vs BAN ODI

IND vs BAN ODI

IND vs BAN 2nd ODI: ಬಾಂಗ್ಲಾದೇಶದೊಂದಿಗೆ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಭಾರತ ಸಿದ್ಧವಾಗಿದೆ. ಇಂದಿನ ಪಂದ್ಯ ಗೆದ್ದರೆ ಮಾತ್ರ ಭಾರತ ತಂಡ ಸರಣಿಯಲ್ಲಿ ಜೀವಂತವಾಗಿ ಇರಲಿದೆ.

  • Share this:

ಬಾಂಗ್ಲಾದೇಶದೊಂದಿಗೆ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಭಾರತ (IND vs BAN ODI) ಸಿದ್ಧವಾಗಿದೆ. ಸರಣಿ ಭರವಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಟೀಂ ಇಂಡಿಯಾ ಇಂದಿನ ಏಕದಿನ ಪಂದ್ಯದಲ್ಲಿ ಗೆಲ್ಲಲೇಬೇಕು. ಸೋತರೆ ಸರಣಿ ಬಾಂಗ್ಲಾದೇಶದ (Bangladesh) ಪಾಲಾಗಲಿದೆ. ಎರಡು ದಿನಗಳ ವಿರಾಮದ ನಂತರ ಭಾರತ (Team India) ಮತ್ತು ಬಾಂಗ್ಲಾದೇಶ ಎರಡೂ ತಂಡಗಳು ಮೀರ್‌ಪುರದಲ್ಲಿ ಎರಡನೇ ಏಕದಿನ ಪಂದ್ಯಕ್ಕೆ ಸಿದ್ಧವಾಗಿವೆ. ಬಾಂಗ್ಲಾದೇಶ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಇಲ್ಲಿ ಸರಣಿ ಕೈವಶ ಮಾಡಿಕೊಳ್ಳುವ ಪ್ಲಾನ್ ಮಾಡುತ್ತಿದ್ದರೆ, ಭಾರತ ಮೊದಲ ಏಕದಿನ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.


ಪಂದ್ಯದ ವಿವರ:


ನಾಳೆ ಭಾರತ ಮತ್ತು ಬಾಂಗ್ಲಾ ವಿರುದ್ಧದ 3 ಪಂದ್ಯಗಳ ಸರಣಿಯ 2ನೇ ಏಕದಿನ ಪಂದ್ಯ ನಡೆಯಲಿದೆ. ನಾಳಿನ ಪಂದ್ಯ ಬಾಂಗ್ಲಾದ ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ 11:30ಕ್ಕೆ ಆರಂಭವಾಗಲಿದ್ದು, 11 ಗಂಟೆಗೆ ಟಾಸ್​ ಆಗಲಿದೆ. ಈ ಪಂದ್ಯಗಳನ್ನು ಸೋನಿ ನೆಟ್‌ವರ್ಕ್ ನೇರ ಪ್ರಸಾರ ಮಾಡಲಿದೆ. ಸೋನಿ ಲೈವ್ ಅಪ್ಲಿಕೇಶನ್‌ನಲ್ಲಿ ನೀವು ಈ ಪಂದ್ಯಗಳನ್ನು ಲೈವ್ ಆಗಿ ವೀಕ್ಷಿಸಬಹುದು. ಇವುಗಳ ಜೊತೆಗೆ ಡಿಡಿ ಸ್ಪೋರ್ಟ್ಸ್ ಕೂಡ ಈ ಪಂದ್ಯಗಳನ್ನು ನೇರ ಪ್ರಸಾರ ಮಾಡಲಿದೆ.



ಒತ್ತಡದಲ್ಲಿ ಟೀಂ ಇಂಡಿಯಾ:


ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಭಾರತ ತಂಡವು ಹೀನಾಯವಾಗಿ ಸೋತಿತ್ತು. ಮೊದಲ ಬ್ಯಾಟಿಂಗ್‌ನಲ್ಲಿ ಅವರು ಕೇವಲ 186 ರನ್ ಗಳಿಸಿದರು. ಸ್ಟಾರ್ ಆಟಗಾರರಾದ ರೋಹಿತ್, ಧವನ್ ಮತ್ತು ಕೊಹ್ಲಿ ಹೀನಾಯವಾಗಿ ವಿಫಲವಾದರು. ಆದರೆ ಬಾಂಗ್ಲಾದೇಶ ಬ್ಯಾಟಿಂಗ್‌ ವೇಳೆ ಭಾರತವು ಆರಂಭದಲ್ಲಿ ಅದ್ಭುತ ಬೌಲಿಂಗ್‌ ಮಾಡಿತು. ಆದರೆ, ಕೊನೇ ಕ್ಷಣದಲ್ಲಿ ಭಾರತ ತಂಡ ಬೌಲಿಂಗ್​ನಲ್ಲಿ ಎಡವಿತು. ಮೊದಲ ಏಕದಿನ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ಎರಡನೇ ಏಕದಿನದಲ್ಲಿ ಟೀಂ ಇಂಡಿಯಾ ಕಂಬ್ಯಾಕ್​ ಮಾಡಬೇಕಿದೆ.


ಕುಲದೀಪ್ ಸೇನ್ ಔಟ್!:


ಮೊದಲ ಏಕದಿನ ಪಂದ್ಯದಲ್ಲಿ ಕುಲದೀಪ್ ಸೇನ್ 2 ವಿಕೆಟ್ ಕಬಳಿಸಿದ್ದರು. ಆದರೆ ಅವರು ಉದಾರವಾಗಿ ರನ್ ನೀಡಿದ್ದರು. 2 ಏಕದಿನ ಪಂದ್ಯದಲ್ಲಿ ಅವರು ಹೊರಗುಳಿಯುವ ಸಾಧ್ಯತೆ ಇದೆ. ಹಾಗಿದ್ದರೆ ಉಮ್ರಾನ್ ಮಲಿಕ್ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಪಕ್ಕೆಲುಬಿನ ಗಾಯದಿಂದ ಅಕ್ಷರ್ ಪಟೇಲ್ ಚೇತರಿಸಿಕೊಂಡರೆ ಅವರ ಬದಲಿಗೆ ಶಹಬಾಜ್ ಅಹ್ಮದ್ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಈ ಎರಡು ಬದಲಾವಣೆಗಳನ್ನು ಹೊರತುಪಡಿಸಿ, ಮೊದಲ ಏಕದಿನದಲ್ಲಿ ಆಡಿದ ಅದೇ ತಂಡವನ್ನು ಭಾರತವು ಕಣಕ್ಕಿಳಿಸುವ ಸಾಧ್ಯತೆಯಿದೆ. ರಾಹುಲ್ ತ್ರಿಪಾಠಿ ಮತ್ತು ರಜತ್ ಪಾಟಿದಾರ್ ಮತ್ತೊಮ್ಮೆ ನಿರಾಸೆ ಆಗು ಸಾಧ್ಯತೆ ಇದೆ.


ಪಿಚ್​ ರಿಪೋರ್ಟ್​:


ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಳೆದ ಐದು ODI ಪಂದ್ಯಗಳಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 212 ರನ್ ಆಗಿದ್ದು, ಮೊದಲು ಬ್ಯಾಟ್ ಮಾಡಿದ ತಂಡ ಮೂರು ಪಂದ್ಯಗಳನ್ನು ಗೆದ್ದಿದೆ. ಈ ಪಂದ್ಯದಲ್ಲಿ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಹೀಗಾಗಿ ನಾಳೆ ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ: FIFA World Cup 2022: ಅರೇ, ಇದೇನಿದು ಈ ಆಟಗಾರ ಸ್ಪೋರ್ಟ್ಸ್​​​ ಬ್ರಾ ಹಾಕಿದ್ದಾರೆ! ಇದರ ಹಿಂದಿನ ಕಾರಣವಂತೂ ರೋಚಕ


IND vs BAN ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಸೇನ್, ಶಾರ್ದೂಲ್ ಠಾಕೂರ್/ ಉಮ್ರಾನ್ ಮಲಿಕ್.


ಬಾಂಗ್ಲಾದೇಶ ಸಂಭಾವ್ಯ ಪ್ಲೇಯಿಂಗ್​ 11: ಬಾಂಗ್ಲಾದೇಶ: ಅನಾಮುಲ್ ಹಕ್, ಲಿಟ್ಟನ್ ದಾಸ್ (ಸಿ), ಶಾಕಿಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆ), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೊಸದ್ದೆಕ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಹಸನ್ ಮಹಮೂದ್, ಎಬಾಡೋತ್ ಹೊಸೈನ್, ಮುಸ್ತಫಿಜುರ್ ರೆಹಮಾನ್.

Published by:shrikrishna bhat
First published: