• Home
  • »
  • News
  • »
  • sports
  • »
  • KL Rahul: ರಾಹುಲ್​ ಓರ್ವ ಆಲ್​ರೌಂಡರ್​, ಅಚ್ಚರಿಯ ಹೇಳಿಕೆ ನೀಡಿದ ಗವಾಸ್ಕರ್

KL Rahul: ರಾಹುಲ್​ ಓರ್ವ ಆಲ್​ರೌಂಡರ್​, ಅಚ್ಚರಿಯ ಹೇಳಿಕೆ ನೀಡಿದ ಗವಾಸ್ಕರ್

ಕೆಎಲ್ ರಾಹುಲ್-ಸುನಿಲ್​ ಗವಾಸ್ಕರ್

ಕೆಎಲ್ ರಾಹುಲ್-ಸುನಿಲ್​ ಗವಾಸ್ಕರ್

IND vs BAN ODI: 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಭಾರತ ತಂಡ ಸಿದ್ಧತೆ ಆರಂಭಿಸಿದೆ. ಹೆಚ್ಚಿನ ಆಟಗಾರರು ತಮ್ಮ ಪ್ರದರ್ಶನದ ಆಧಾರದ ಮೇಲೆ ತಂಡಕ್ಕೆ ಕಂಬ್ಯಾಕ್ ಮಾಡುವ ನಿರೀಕ್ಷೆಯಿದೆ.

  • Share this:

ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ (ODI World Cup) ಟೀಂ ಇಂಡಿಯಾ ಸಿದ್ಧತೆ ಆರಂಭಿಸಿದೆ. ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಎಲ್ಲಾ ಬ್ಯಾಟಿಂಗ್ ಸ್ಪಾಟ್‌ಗೆ ನಂ.3 ರಲ್ಲಿ ಪೈಪೋಟಿ ಆರಂಭವಾಗಿದೆ. ಈ ನಡುವೆ ಚರ್ಚೆಯ ದೊಡ್ಡ ವಿಷಯವೆಂದರೆ ವಿಕೆಟ್ ಕೀಪರ್ ಪಾತ್ರದ ಬಗ್ಗೆ. ಭಾರತಕ್ಕೆ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಕೆಎಲ್ ರಾಹುಲ್ (KL Rahul) ಮತ್ತು ರಿಷಬ್ ಪಂತ್ ಆಯ್ಕೆಯಾಗಿದ್ದಾರೆ. ವಿಶ್ವಕಪ್‌ನಲ್ಲಿ ಆಯ್ಕೆಗಾರರು ಯಾರಿಗೆ ಆದ್ಯತೆ ನೀಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಏತನ್ಮಧ್ಯೆ, ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ವಿಕೆಟ್ ಕೀಪರ್ ಪಾತ್ರದ ಬಗ್ಗೆ ಇಂಟ್ರಸ್ಟಿಂಗ್​ ಕಾಮೆಂಟ್ ಮಾಡಿದ್ದಾರೆ.


ರಾಹುಲ್ ಪರ ಬ್ಯಾಟ್​ ಬೀಸಿದ ಗವಾಸ್ಕರ್:


ಸೋನಿ ಸ್ಪೋರ್ಟ್ಸ್‌ನಲ್ಲಿ ಗವಾಸ್ಕರ್ ಹೇಳಿದರು, “ಧವನ್ ಮತ್ತು ರೋಹಿತ್ ಶರ್ಮಾ ಹೆಚ್ಚಿನ ಓಪನಿಂಗ್ ಮಾಡುತ್ತಾರೆ. ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕೆಎಲ್ ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬಹುಶಃ ಅವರು ಈ ಸ್ಥಾನವನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಭಾರತಕ್ಕೆ ಹೆಚ್ಚುವರಿ ಆಯ್ಕೆಯನ್ನೂ ನೀಡಿದೆ. ನೀವು ಮಧ್ಯಮ ಕ್ರಮಾಂಕದಲ್ಲಿ ಆಯ್ಕೆಯಾಗಿ ವಿಕೆಟ್ ಕೀಪಿಂಗ್ ಮಾಡುವ ಬ್ಯಾಟ್ಸ್‌ಮನ್ ಹೊಂದಿದ್ದರೆ ಅದು ತಂಡಕ್ಕೆ ಉತ್ತಮ‘ ಎಂದು ಹೇಳಿದ್ದಾರೆ.


ನಾನು ರಾಹುಲ್ ಅನ್ನು ಆಲ್ ರೌಂಡರ್ ಎಂದು ಕರೆಯುತ್ತೇನೆ. ಏಕೆಂದರೆ ಅವರು ವಿಕೆಟ್ ಕೀಪಿಂಗ್ ಮಾಡಬಲ್ಲರು, ಅವರು 5ನೇ ಕ್ರಮಾಂಕದಲ್ಲಿಯೂ ಓಪನ್ ಮಾಡಬಹುದು ಮತ್ತು ಬ್ಯಾಟಿಂಗ್ ಮಾಡಬಹುದು. ನನ್ನ ಮಟ್ಟಿಗೆ ಕೆಎಲ್ ರಾಹುಲ್ ಆಲ್ ರೌಂಡರ್. ಅವರು ಹೊಂದಿರುವ ಅನುಭವ ಮತ್ತು ಅವರು ಹೊಂದಿರುವ ರೀತಿಯ ಹೊಡೆತಗಳು, ನೀವು ನಂ.5 ಅಥವಾ 6 ರಲ್ಲಿ ಆಡುವುದನ್ನು ನೋಡಲು ಬಯಸುವ ರೀತಿಯ ಫಿನಿಶರ್ ಆಗಿರಲಿದ್ದಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.


ಈ ವರ್ಷ ರಾಹುಲ್ ಕೇವಲ 8 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಲ್ಲಿ ಅವರು ಎರಡು ಅರ್ಧಶತಕಗಳೊಂದಿಗೆ 32.71 ಸರಾಸರಿಯಲ್ಲಿ 229 ರನ್ ಗಳಿಸಿದರು. ಅವರು ಬಾಂಗ್ಲಾದೇಶ ವಿರುದ್ಧದ ಮೊದಲ ODI ನಲ್ಲಿ 70 ಎಸೆತಗಳಲ್ಲಿ 73 ರನ್ ಗಳಿಸಿ ಮಿಂಚಿದರು.


ಇದನ್ನೂ ಓದಿ: IND vs BAN ODI: ಇಂದು ಭಾರತ-ಬಾಂಗ್ಲಾ 2ನೇ ಏಕದಿನ ಪಂದ್ಯ, ಟೀಂ ಇಂಡಿಯಾ ಪ್ಲೇಯಿಂಗ್​ 11ನಲ್ಲಿ 1 ಬದಲಾವಣೆ


ಇಂದು ಭಾರತ-ಬಾಂಗ್ಲಾ ಪಂದ್ಯ:


ಬಾಂಗ್ಲಾದೇಶದೊಂದಿಗೆ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಭಾರತ ಸಿದ್ಧವಾಗಿದೆ. ಸರಣಿ ಭರವಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಟೀಂ ಇಂಡಿಯಾ ಇಂದಿನ ಏಕದಿನ ಪಂದ್ಯದಲ್ಲಿ ಗೆಲ್ಲಲೇಬೇಕು. ಸೋತರೆ ಸರಣಿ ಬಾಂಗ್ಲಾದೇಶದ ಪಾಲಾಗಲಿದೆ. ಎರಡು ದಿನಗಳ ವಿರಾಮದ ನಂತರ ಭಾರತ ಮತ್ತು ಬಾಂಗ್ಲಾದೇಶ ಎರಡೂ ತಂಡಗಳು ಮೀರ್‌ಪುರದಲ್ಲಿ ಎರಡನೇ ಏಕದಿನ ಪಂದ್ಯಕ್ಕೆ ಸಿದ್ಧವಾಗಿವೆ. ಬಾಂಗ್ಲಾದೇಶ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಇಲ್ಲಿ ಸರಣಿ ಕೈವಶ ಮಾಡಿಕೊಳ್ಳುವ ಪ್ಲಾನ್ ಮಾಡುತ್ತಿದ್ದರೆ, ಭಾರತ ಮೊದಲ ಏಕದಿನ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.


ಟೀಂ ಇಂಡಿಯಾಗೆ ಮಾಡು ಇಲ್ಲವೇ ಮಡಿ ಪಂದ್ಯ:


ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಭಾರತ ತಂಡವು ಹೀನಾಯವಾಗಿ ಸೋತಿತ್ತು. ಮೊದಲ ಬ್ಯಾಟಿಂಗ್‌ನಲ್ಲಿ ಅವರು ಕೇವಲ 186 ರನ್ ಗಳಿಸಿದರು. ಸ್ಟಾರ್ ಆಟಗಾರರಾದ ರೋಹಿತ್, ಧವನ್ ಮತ್ತು ಕೊಹ್ಲಿ ಹೀನಾಯವಾಗಿ ವಿಫಲವಾದರು. ಆದರೆ ಬಾಂಗ್ಲಾದೇಶ ಬ್ಯಾಟಿಂಗ್‌ ವೇಳೆ ಭಾರತವು ಆರಂಭದಲ್ಲಿ ಅದ್ಭುತ ಬೌಲಿಂಗ್‌ ಮಾಡಿತು. ಆದರೆ, ಕೊನೇ ಕ್ಷಣದಲ್ಲಿ ಭಾರತ ತಂಡ ಬೌಲಿಂಗ್​ನಲ್ಲಿ ಎಡವಿತು. ಮೊದಲ ಏಕದಿನ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ಎರಡನೇ ಏಕದಿನದಲ್ಲಿ ಟೀಂ ಇಂಡಿಯಾ ಕಂಬ್ಯಾಕ್​ ಮಾಡಬೇಕಿದೆ.

Published by:shrikrishna bhat
First published: