ಭಾರತ ಮತ್ತು ಬಾಂಗ್ಲಾದೇಶ (IND vs BAN ODI) ನಡುವಿನ ಎರಡನೇ ಏಕದಿನ ಪಂದ್ಯ ಢಾಕಾದಲ್ಲಿ ಇಂದು ನಡೆಯಲಿದೆ. ಈಗಾಗಲೇ ಟಾಸ್ ಗೆದ್ದಿರುವ ಬಾಂಗ್ಲಾದೇಶ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡವು ಚೇಸಿಂಗ್ ಮಾಡಲಿದೆ. ಈ ಪಂದ್ಯ ಭಾರತ ತಂಡಕ್ಕೆ (Team India) ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಕಳೆದ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ನಿಂದಾಗಿ ರೋಹಿತ್ (Rohit Sharma) ಪಡೆ ಸೋಲನ್ನು ಅನುಭವಿಸಿತು. ಇದೀಗ ಕಳೆದ ಪಂದ್ಯದ ತಪ್ಪುಗಳನ್ನು ಸರಿಪಡಿಸಿಕೊಂಡು ಇಂದಿನ ಪಂದ್ಯ ಗೆದ್ದರೆ ಮಾತ್ರ ಭಾರತ ಸರಣಿಯಲ್ಲಿ ಜೀವಂತವಾಗಿ ಉಳಿಯಲಿದೆ. ಇಲ್ಲವಾದಲ್ಲಿ ಇಂದೇ ಸರಣಿಯನ್ನು ಬಾಂಗ್ಲಾ ಕೈವಶ ಮಾಡಿಕೊಳ್ಳಲಿದೆ.
ಕುಲ್ದೀಪ್ ಸೇನ್ ಔಟ್ ಮಲಿಕ್ ಇನ್:
ಇನ್ನು, ಕಳೆದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಕುಲ್ದೀಪ್ ಸೇನ್ ಇಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಕುಲ್ದೀಪ್ ಬದಲಿಗೆ ವೇಗದ ಬೌಲರ್ ಆದ ಉಮ್ರಾನ್ ಮಲಿಕ್ ಅವರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡಲಾಗಿದೆ. ಅದರಂತೆ ಗಾಯದ ಸಮಸ್ಯೆಯಿಂದ ಗುಣಮುಖರಾಗಿರುವ ಅಕ್ಷರ್ ಪಟೇಳ್ ಮತ್ತೆ ತಂಡಕ್ಕೆ ಕಂಬ್ಯಾಕ್ ಮಾಡಿದ್ದು, ಶಹಬಾಜ್ ಅಹ್ಮದ್ ತಂಡದಿಂದ ಹೊರಗುಳಿದಿದ್ದಾರೆ.
A look at our Playing XI for the 2nd ODI.
Kuldeep Sen complained of back stiffness following the first ODI on Sunday. The BCCI Medical Team assessed him and has advised him rest. He was not available for selection for the 2nd ODI.#BANvIND pic.twitter.com/XhQxlQ6aMZ
— BCCI (@BCCI) December 7, 2022
ಭಾರತ-ಬಾಂಗ್ಲಾ ಹೆಡ್ ಟು ಹೆಡ್:
ಇನ್ನು, ಭಾರತ ಮತ್ತು ಬಾಂಗ್ಲಾದೇಶ ನಡುವಿನ ದಾಖಲೆಗಳ ಬಗ್ಗೆ ನೋಡುವುದಾದರೆ, ಟೀಮ್ ಇಂಡಿಯಾ ಮೇಲುಗೈ ಹೊಂದಿದೆ. ಏಕದಿನದಲ್ಲಿ ಉಭಯ ತಂಡಗಳು ಇದುವರೆಗೆ 37 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಬಾಂಗ್ಲಾದೇಶ ತಂಡವು ಕೇವಲ 6 ಗೆಲುವುಗಳನ್ನು ಪಡೆದರೆ ಒಂದು ಪಂದ್ಯ ಅನಿರ್ದಿಷ್ಟವಾಗಿ ಉಳಿಯಿತು. ಆತಿಥೇಯ ತಂಡವು 2015 ರಲ್ಲಿ ತವರಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿತು. ಹೀಗಾಗಿ ಈಸ ರಣಿಯನ್ನು ಗೆದ್ದು ಭಾರತ ಹಳೆಯ ಸೋಲಿನ ಸೇಡನ್ನು ತೀರಿಸಿಕೋಳ್ಳಬೇಕಿದೆ.
ಇದನ್ನೂ ಓದಿ: Ruturaj Gaikwad: ಸ್ಟಾರ್ ನಟಿ ಜೊತೆ ಟೀಂ ಇಂಡಿಯಾ ಪ್ಲೇಯರ್ ರೊಮ್ಯಾನ್ಸ್? ಕೊನೆಗೂ ಮೌನಮುರಿದ ಕ್ಯೂಟ್ ಬೆಡಗಿ!
ಭಾರತ-ಬಾಂಗ್ಲಾ ಪ್ಲೇಯಿಂಗ್ 11:
ಭಾರತ ತಂಡದ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.
ಬಾಂಗ್ಲಾದೇಶ ತಂಡದ ಪ್ಲೇಯಿಂಗ್ 11: ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್ (ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಇಬಾದತ್ ಹೊಸೈನ್, ಮುಸ್ತಫಿಜುರ್ ರೆಹಮಾನ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ