ಭಾರತ ಮತ್ತು ಬಾಂಗ್ಲಾದೇಶ (IND vs BAN ODI) ನಡುವಿನ ಎರಡನೇ ಏಕದಿನ ಪಂದ್ಯ ಢಾಕಾದಲ್ಲಿ ಇಂದು ನಡೆಯಿತು. ಟಾಸ್ ಗೆದ್ದ ಬಾಂಗ್ಲಾ ಮೊದಲು ಬ್ಯಾಟಿಂಗ್ ಮಾಡಿತು. ಬಾಂಗ್ಲಾದೇಶ ಪರ ಮೆಹಿದಿ ಹಸನ್ ಮಿರಾಜ್ 83 ಎಸೆತದಲ್ಲಿ 4 ಸಿಕ್ಸ್ ಮತ್ತು 8 ಫೋರ್ಗಳ ನೆರವಿನಿಂದ ಆಕರ್ಷಕ ಶತಕ (100) ಸಿಡಿಸುವ ಮೂಲಕ ಬಾಂಗ್ಲಾ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗಳಲ್ಲಿ ನಷ್ಟಕ್ಕೆ 271 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಭಾರತ ತಂಡವು (Team India) 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 266 ರನ್ ಗಳಿಸುವ ಮೂಲಕ 5 ರನ್ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಬಾಂಗ್ಲಾದೇಶ ತಂಡವು 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಂಡಿದೆ.
ಶ್ರೇಯಸ್-ಅಕ್ಷರ್ ಹೋರಾಟ ವ್ಯರ್ಥ:
ಬಾಂಗ್ಲಾದೇಶ ನೀಡಿದ 272 ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 266 ರನ್ ಗಳಿಸುವ ಮೂಲಕ 5 ರನ್ ಗಳಿಂದ ಸೋಲನ್ನಪ್ಪಿತು. ಭಾರತ ತಂಡದ ಪರ 7 ವರ್ಷಗಳ ಬಳಿಕ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ವಿರಾಟ್ ಬ್ಯಾಟ್ ಇಂದೂ ಸಹ ಅಬ್ಬರಿಸಲಿಲ್ಲ. ಕೊಹ್ಲಿ ಕೇವಲ 5 ರನ್ ಗಳಿಸುವ ಮೂಲಕ ವಿಕೆಟ್ ಒಪ್ಪಿಸಿದರು. ಇತ್ತ ಧವನ್ ಸಹ 8 ರನ್ಗೆ ಔಟ್ ಆದರು. ಆದರೆ ಬಳಿಕ ಬಂದ ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಅವರು 102 ಬಾಲ್ನಲ್ಲಿ 3 ಸಿಕ್ಸ್ 6 ಫೋರ್ ಮೂಲಕ 82 ರನ್ ಗಳಿಸಿದರು.
Bangladesh hold their nerve to win a thriller 🙌#BANvIND | Scorecard 👉 https://t.co/A76VyZDXby pic.twitter.com/d2pDja0lQV
— ICC (@ICC) December 7, 2022
ಉತ್ತಮ ಬೌಲಿಂಗ್ ದಾಳಿ ನಡೆಸಿದ ಬಾಂಗ್ಲಾ:
ಇನ್ನು, ಬಾಂಗ್ಲಾದೇಶ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಇಬಾದತ್ ಹೊಸೈನ್ 10 ಓವರ್ಗೆ 45 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿದರು. ಉಳಿದಂತೆ ಶಕೀಬ್ ಅಲ್ ಹಸನ್ 2 ವಿಕೆಟ್, ಮೆಹಿದಿ ಹಸನ್ ಮಿರಾಜ್ 2 ವಿಕೆಟ್ ಮತ್ತು ಮುಸ್ತಫಿಜುರ್ ರೆಹಮಾನ್ 1 ವಿಕೆಟ್ ಪಡೆದರು.
ಇದನ್ನೂ ಓದಿ: IND vs BAN 2nd ODI: ಟೀಂ ಇಂಡಿಯಾದಲ್ಲಿ ಹೆಚ್ಚಾಯ್ತು ಗಾಯಾಳುಗಳ ಸಮಸ್ಯೆ, ಮತ್ತೊಬ್ಬ ಸ್ಟಾರ್ ಬೌಲರ್ ಔಟ್!
ಶತಕ ಸಿಡಿಸಿ ಮಿಂಚಿದ್ದ ಹಸನ್:
ಅನಾಮುಲ್ ಹಕ್ 11 ರನ್, ಲಿಟ್ಟನ್ ದಾಸ್ 7 ರನ್, ನಜ್ಮುಲ್ ಹೊಸೈನ್ ಶಾಂಟೊ 21 ರನ್, ಶಕೀಬ್ ಅಲ್ ಹಸನ್ 8 ರನ್, ಮುಶ್ಫಿಕರ್ ರಹೀಮ್ 12 ರನ್, ಮಹಮ್ಮದುಲ್ಲಾ 77 ರನ್, ಅಫೀಫ್ ಹೊಸೈನ್ ಶೂನ್ಯ, ಮೆಹಿದಿ ಹಸನ್ ಮಿರಾಜ್ 83 ಎಸೆತದಲ್ಲಿ 4 ಸಿಕ್ಸ್ ಮತ್ತು 8 ಫೋರ್ಗಳ ನೆರವಿನಿಂದ ಆಕರ್ಷಕ ಶತಕ (100) ಸಿಡಿಸಿ ಮಿಂಚಿದರು, ನಸುಮ್ ಅಹ್ಮದ್ 18 ರನ್ ಗಳಿಸಿದರು.
ಬೌಲಿಂಗ್ನಲ್ಲಿ ಮಿಂಚಿದ ಸುಂದರ್:
ಟಾಸ್ ಸೋತು ಬೌಲಿಂಗ್ ಮಾಡಿದ ಭಾರತ ತಂಡ ಆರಂಭದಲ್ಲಿ ಬಾಂಗ್ಲಾ ಬ್ಯಾಟ್ಸ್ಮನ್ಗಳ ಮೇಲೆ ಸವಾರಿ ಮಾಡಿದರು. ಪ್ರಮುಖ 6 ವಿಕೆಟ್ಗಳು ಬೇಗ ಉರುಳಿದರೂ ನಂತರ 7ನೇ ವಿಕೆಟ್ ಅನ್ನು ಬೇರ್ಪಡಿಸುವಲ್ಲಿ ಭಾರತೀಯ ಬೌಲರ್ಗಳಿಗೆ ಕಷ್ಟವಾಯಿತು. ಭಾರತದ ಪರ ವಾಷಿಂಗ್ಟನ್ ಸುಂದರ್ 10 ಓವರ್ಗೆ 37 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಮೊಹಮ್ಮದ್ ಸಿರಾಜ್ 2 ಮತ್ತುಉಮ್ರಾನ್ ಮಲಿಕ್ 2 ವಿಕೆಟ್ ಪಡೆದು ಮಿಂಚಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ