• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs BAN ODI: ಕುಸಿದ ಬಾಂಗ್ಲಾಗೆ ಆಸರೆಯಾದ ಹಸನ್​, ಬ್ಯಾಟಿಂಗ್​ಗೆ ಕಂಬ್ಯಾಕ್​ ಮಡ್ತಾರಾ ಹಿಟ್​ಮ್ಯಾನ್​?

IND vs BAN ODI: ಕುಸಿದ ಬಾಂಗ್ಲಾಗೆ ಆಸರೆಯಾದ ಹಸನ್​, ಬ್ಯಾಟಿಂಗ್​ಗೆ ಕಂಬ್ಯಾಕ್​ ಮಡ್ತಾರಾ ಹಿಟ್​ಮ್ಯಾನ್​?

IND vs BAN ODI

IND vs BAN ODI

IND vs BAN 2nd ODI: ಬಾಂಗ್ಲಾ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ಗಳಲ್ಲಿ ನಷ್ಟಕ್ಕೆ 271 ರನ್ ಗಳಿಸುವ ಮೂಲಕ ಭಾರತ ತಂಡಕ್ಕೆ 272  ರನ್ ಗಳ ಟಾರ್ಗೆಟ್​ ನೀಡಿದೆ.

  • Share this:

ಭಾರತ ಮತ್ತು ಬಾಂಗ್ಲಾದೇಶ (IND vs BAN ODI) ನಡುವಿನ ಎರಡನೇ ಏಕದಿನ ಪಂದ್ಯ ಢಾಕಾದಲ್ಲಿ ಇಂದು ನಡೆಯುತ್ತಿದ್ದು,  ಈಗಾಗಲೇ ಟಾಸ್​ ಗೆದ್ದ ಬಾಂಗ್ಲಾ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್​ ಮಾಡಿದ ಬಾಂಗ್ಲಾದೇಶ ತಂಡದ ಪರ ಮೆಹಿದಿ ಹಸನ್ ಮಿರಾಜ್ 83 ಎಸೆತದಲ್ಲಿ 4 ಸಿಕ್ಸ್ ಮತ್ತು 8 ಫೋರ್​ಗಳ ನೆರವಿನಿಂದ ಆಕರ್ಷಕ ಶತಕ (100) ಸಿಡಿಸಿ ಮಿಂಚಿದರು, ಬಾಂಗ್ಲಾ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ಗಳಲ್ಲಿ ನಷ್ಟಕ್ಕೆ 271 ರನ್ ಗಳಿಸುವ ಮೂಲಕ ಭಾರತ ತಂಡಕ್ಕೆ 272  ರನ್ ಗಳ ಟಾರ್ಗೆಟ್​ ನೀಡಿದೆ. ಇದರ ನಡುವೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಗಾಯಗೊಂಡು ಪಂದ್ಯದ ಮದ್ಯದಲ್ಲಿಯೇ ಹೊರನಡೆದರು. 


ಭರ್ಜರಿ ಬ್ಯಾಟಿಂಗ್​ ಮಾಡಿದ ಬಾಂಗ್ಲಾ:


ಇನ್ನು, ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಬಾಂಗ್ಲಾ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ಗಳಲ್ಲಿ ನಷ್ಟಕ್ಕೆ 271 ರನ್ ಗಳಿಸಿದರು. ಅನಾಮುಲ್ ಹಕ್ 11 ರನ್, ಲಿಟ್ಟನ್ ದಾಸ್​ 7 ರನ್, ನಜ್ಮುಲ್ ಹೊಸೈನ್ ಶಾಂಟೊ 21 ರನ್, ಶಕೀಬ್ ಅಲ್ ಹಸನ್ 8 ರನ್, ಮುಶ್ಫಿಕರ್ ರಹೀಮ್ 12 ರನ್, ಮಹಮ್ಮದುಲ್ಲಾ 77 ರನ್, ಅಫೀಫ್ ಹೊಸೈನ್ ಶೂನ್ಯ, ಮೆಹಿದಿ ಹಸನ್ ಮಿರಾಜ್ 83 ಎಸೆತದಲ್ಲಿ 4 ಸಿಕ್ಸ್ ಮತ್ತು 8 ಫೋರ್​ಗಳ ನೆರವಿನಿಂದ ಆಕರ್ಷಕ ಶತಕ (100) ಸಿಡಿಸಿ ಮಿಂಚಿದರು, ನಸುಮ್ ಅಹ್ಮದ್ 18 ರನ್ ಗಳಿಸಿದರು.



ಸುಂದರ್​ ಸುಂದರ ಬೌಲಿಂಗ್​:


ಟಾಸ್​ ಸೋತು ಬೌಲಿಂಗ್​ ಮಾಡಿದ ಭಾರತ ತಂಡ ಆರಂಭದಲ್ಲಿ ಬಾಂಗ್ಲಾ ಬ್ಯಾಟ್ಸ್​ಮನ್​ಗಳ ಮೇಲೆ ಸವಾರಿ ಮಾಡಿದರು. ಪ್ರಮುಖ 6 ವಿಕೆಟ್​ಗಳು ಬೇಗನೇ ಉರುಳಿದರೂ ನಂತರ 7ನೇ ವಿಕೆಟ್​ ಅನ್ನು ಬೇರ್ಪಡಿಸುವಲ್ಲಿ ಭಾರತೀಯ ಬೌಲರ್​ಗಳಿಗೆ ಕಷ್ಟವಾಯಿತು. ಭಾರತದ ಪರ ವಾಷಿಂಗ್ಟನ್ ಸುಂದರ್ 10 ಓವರ್​ಗೆ 37 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಮೊಹಮ್ಮದ್ ಸಿರಾಜ್ 2 ಮತ್ತುಉಮ್ರಾನ್ ಮಲಿಕ್​ 2 ವಿಕೆಟ್​ ಪಡೆದು ಮಿಂಚಿದರು.


ಇದನ್ನೂ ಓದಿ: IND vs BAN 2nd ODI: ಟೀಂ ಇಂಡಿಯಾಗೆ ಬಿಗ್ ಶಾಕ್, ಆಸ್ಪತ್ರೆಗೆ ದಾಖಲಾದ ರೋಹಿತ್ ಶರ್ಮಾ


ಮತ್ತೆ ಕಣಕ್ಕಿಳಿಯುತ್ತಾರಾ ರೋಹಿತ್?:


ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಾಯಗೊಂಡು ಮೈದಾನ ತೊರೆದಿದ್ದಾರೆ. ಫೀಲ್ಡಿಂಗ್ ಮಾಡುವಾಗ ಚೆಂಡು ರೋಹಿತ್ ಬೆರಳಿಗೆ ಬಲವಾಗಿ ಬಡಿದಿತ್ತು. ಸ್ವಲ್ಪ ಹೊತ್ತು ನೋವಿನಿಂದ ಬಳಲುತ್ತಿದ್ದ ರೋಹಿತ್ ನಂತರ ಮೈದಾನದಿಂದ ನಿರ್ಗಮಿಸಿದರು. ರೋಹಿತ್‌ನನ್ನು ಸ್ಕ್ಯಾನಿಂಗ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಮೊಹಮ್ಮದ್ ಸಿರಾಜ್ ಎಸೆದ ಇನಿಂಗ್ಸ್ ನ ಎರಡನೇ ಓವರ್ ನಲ್ಲಿ ನಾಲ್ಕನೇ ಎಸೆತದಲ್ಲಿ ಅನಾಮೊಲ್ ನೀಡಿದ ಕ್ಯಾಚ್ ಹಿಡಿಯುವ ಯತ್ನದಲ್ಲಿ ರೋಹಿತ್ ಶರ್ಮಾ ಕೈಗೆ ಗಾಯ ಮಾಡಿಕೊಂಡರು.



ಆದರೆ ಇದೀಗ ರೋಹಿತ್ ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದು, ಎಡಗೈ ಹೆಬ್ಬರಳಿಗೆ ಬ್ಯಾಂಡೇಜ್​ ಮಾಡಿಕೊಂಡಿರುವುದು ಕಂಡುಬರುತ್ತದೆ. ಅಲ್ಲದೇ ಅವರು ಇಂದು ಬ್ಯಾಟಿಂಗ್​ಗೆ ಬರುವುದು ಅನುಮಾನ ಎನ್ನಲಾಗುತ್ತಿದ್ದು, ಧವನ್ ಜೊತೆ ರಾಹುಲ್​ ಟೀಂ ಇಂಡಿಯಾ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.


ಭಾರತ-ಬಾಂಗ್ಲಾ ಪ್ಲೇಯಿಂಗ್​ 11:


ಭಾರತ ತಂಡದ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ) (ಇಂದು ಮತ್ತೆ ಕಣಕ್ಕಿಳಿಉವ ಬಗ್ಗೆ ಮಾಹಿತಿ ಇಲ್ಲ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.


ಬಾಂಗ್ಲಾದೇಶ ತಂಡದ ಪ್ಲೇಯಿಂಗ್​ 11: ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್ (ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಇಬಾದತ್ ಹೊಸೈನ್, ಮುಸ್ತಫಿಜುರ್ ರೆಹಮಾನ್

Published by:shrikrishna bhat
First published: