• Home
  • »
  • News
  • »
  • sports
  • »
  • IND vs BAN Test: ಭಾರತ-ಬಾಂಗ್ಲಾ ಟೆಸ್ಟ್​ಗೆ ಮಳೆ ಅಡ್ಡಿ? ಇಲ್ಲಿದೆ ಹವಾಮಾನ ವರದಿ, ಪಿಚ್​ ರಿಪೋರ್ಟ್​

IND vs BAN Test: ಭಾರತ-ಬಾಂಗ್ಲಾ ಟೆಸ್ಟ್​ಗೆ ಮಳೆ ಅಡ್ಡಿ? ಇಲ್ಲಿದೆ ಹವಾಮಾನ ವರದಿ, ಪಿಚ್​ ರಿಪೋರ್ಟ್​

IND vs BAN

IND vs BAN

IND vs BAN Test: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23ರ ಫೈನಲ್‌ನಲ್ಲಿ ಸ್ಥಾನ ಪಡೆಯಲು, ಭಾರತವು ಮೊದಲು ಬಾಂಗ್ಲಾದೇಶ ಮತ್ತು ನಂತರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯನ್ನು ಗೆಲ್ಲಬೇಕಿದೆ.

  • Share this:

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ (IND vs BAN) ಚಿತ್ತಗಾಂಗ್‌ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ (Zahur Ahmed Chowdhury Stadium) ಡಿಸೆಂಬರ್ 14 ಬುಧವಾರ ಆರಂಭವಾಗಲಿದೆ. ರೋಹಿತ್ ಶರ್ಮಾ (Rohit Sharma) ಗಾಯಗೊಂಡಿರುವ ಕಾರಣ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಕೆಎಲ್ ರಾಹುಲ್ (KL Rahul) ಹೆಗಲ ಮೇಲಿರುತ್ತದೆ. 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC) ಫೈನಲ್‌ನಲ್ಲಿ ಸ್ಥಾನ ಪಡೆಯಲು ಈ ಸರಣಿಯು ಬಹಳ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡವು ಏಕದಿನ ಸರಣಿಯಲ್ಲಿ ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳದಿದ್ದಲ್ಲಿ, ಟೆಸ್ಟ್ ಸರಣಿ ಗೆಲುವಿಗೆ ಕಷ್ಟವಾಗುತ್ತದೆ.


ವಿರಾಟ್-ಪೂಜಾರ ಮೇಲೆ ದೊಡ್ಡ ಜವಾಬ್ದಾರಿ:


ಚಿತ್ತಗಾಂಗ್ ಟೆಸ್ಟ್‌ನಲ್ಲಿ ಭಾರತಕ್ಕೆ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಅವರ ದೊಡ್ಡ ಇನ್ನಿಂಗ್ಸ್ ಅಗತ್ಯವಿದೆ. ಅಂಕಿಅಂಶಗಳ ಪ್ರಕಾರ, ಆಟದ ದೀರ್ಘ ಸ್ವರೂಪದಲ್ಲಿ, ಆತಿಥೇಯರ ಮೇಲೆ ಭಾರತದ ಬಲ ಹೆಚ್ಚಿದೆ. ಈವರೆಗೂ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ ನಮ್ಮನ್ನು ಸೋಲಿಸಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ನೆರೆಯ ದೇಶದ ವಿರುದ್ಧ ತನ್ನ ಗೆಲುವಿನ ಓಟವನ್ನು ಮುಂದುವರಿಸಲು ಪ್ರಯತ್ನಿಸಲಿದೆ.ಪಿಚ್ ವರದಿ:


ಚಿತ್ತಗಾಂಗ್‌ನ ಪಿಚ್ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ. ಇದಾಗಿಯೂ ಇಲ್ಲಿ ಸಾಕಷ್ಟು ರನ್‌ಗಳನ್ನು ಮಾಬಹುದಾಗಿದೆ. ಶ್ರೀಲಂಕಾದ ಕುಮಾರ ಸಂಗಕ್ಕಾರ ಕೂಡ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ತ್ರಿಶತಕ ಬಾರಿಸಿದ್ದರು. ಈ ಪಿಚ್‌ನಲ್ಲಿ ಸರಾಸರಿ ಸ್ಕೋರ್ 372 ರನ್ ಆಗಿದೆ. ಇಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಶಕೀಬ್ ಅವರು ನೀಡಿದ್ದು, ಅವರು ಈ ಪಿಚ್​ನಲ್ಲಿ ಇಂದು ಇನ್ನಿಂಗ್ಸ್​ನಲ್ಲಿ ಏಳು ವಿಕೆಟ್ ಕಬಳಿಸಿದ್ದರು.


ಹವಾಮಾನ ಪರಿಸ್ಥಿತಿ:


ಚಿತ್ತಗಾಂಗ್‌ನ ಹವಾಮಾನದ ಬಗ್ಗೆ ಮಾತನಾಡುತ್ತಾ, ಇಲ್ಲಿ ಬಿಸಿಲು ಹೆಚ್ಚು ಇರುತ್ತದೆ. ಎಲ್ಲಾ ಐದು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ಇಡೀ ಪಂದ್ಯವನ್ನು ಅಭಿಮಾನಿಗಳು ವೀಕ್ಷಿಸಲಿದ್ದಾರೆ. ಇಲ್ಲಿ ತಾಪಮಾನವು 28 ರಿಂದ 17 ಡಿಗ್ರಿಗಳ ನಡುವೆ ಇರುತ್ತದೆ. ಪಂದ್ಯದ ಕೊನೆಯ ಎರಡು ದಿನಗಳಲ್ಲಿ ಆಕಾಶದಲ್ಲಿ ಮೋಡ ಕವಿದ ವಾತಾವರಣವಿರಬಹುದು ಆದರೆ ಮಳೆ ಬರುವ ಸಾಧ್ಯತೆ ಇಲ್ಲ ಎಂದು ಸ್ಥಳೀಯ ಹವಾಮಾನ ಇಲಾಖೆ ತಿಳಿಸಿದೆ.


ಇದನ್ನೂ ಓದಿ: IND vs BAN: ಬಾಂಗ್ಲಾ ತಂಡಕ್ಕೆ ಬಿಗ್​ ಶಾಕ್​; ಸ್ಟಾರ್​ ಆಟಗಾರನಿಗೆ ಗಾಯ, ಅಂಬ್ಯುಲೆನ್ಸ್​ನಲ್ಲಿ ಸ್ಥಳಾಂತರ!


ಪಂದ್ಯದ ಸಮಯ-ನೇರಪ್ರಸಾರ:


ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ನಾಳೆಯಿಂದ (ಡಿಸೆಂಬರ್ 14 ರಿಂದ 18) ನಡೆಯಲಿದೆ. ಇದು ಚಿತ್ತಗಾಂಗ್​ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಚಿತ್ತಗಾಂಗ್​ಗೆ ತಲುಪಿರುವ ಟೀಂ ಇಂಡಿಯಾ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದೆ. ಈ ಪಂದ್ಯವು 9:00 AM ISTಗೆ ನಡೆಯಲಿದೆ. ಟಾಸ್ ಅರ್ಧ ಗಂಟೆ ಮುಂಚಿತವಾಗಿ ನಡೆಯಲಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ನೇರ ಪ್ರಸಾರವನ್ನು ನೀವು ವೀಕ್ಷಿಸಬಹುದು.  ಲೈವ್ ಸ್ಟ್ರೀಮಿಂಗ್ ಅನ್ನು ನೀವು ಸೋನಿ ಲಿವ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು.


ಭಾರತ-ಬಾಂಗ್ಲಾದೇಶ ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್​ 11: ಕೆಎಲ್ ರಾಹುಲ್ (ನಾಯಕ), ಶುಭ್​ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಸೌರಭ್ ಕುಮಾರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್.


ಬಾಂಗ್ಲಾದೇಶ ಸಂಭಾವ್ಯ ಪ್ಲೇಯಿಂಗ್​ 11: ನಜ್ಮುಲ್ ಹೊಸೈನ್ ಶಾಂಟೊ, ನಜ್ಮುಲ್ ಹಕ್, ಮೊಮಿನುಲ್ ಹಕ್, ಶಾಕಿಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಲಿಯಾನ್ ದಾಸ್, ಮೆಹದಿ ಹಸನ್, ತಸ್ಕಿನ್ ಅಹ್ಮದ್, ಶರೀಫುಲ್ ಇಸ್ಲಾಂ, ಎಬಾದತ್ ಹುಸೇನ್, ತೈಜುಲ್ ಇಸ್ಲಾಂ.

Published by:shrikrishna bhat
First published: