ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಮೂರು ವರ್ಷಗಳ ನಂತರ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ನವೆಂಬರ್ 2019 ರಿಂದ ಸೆಪ್ಟೆಂಬರ್ 2022ರ ವರೆಗೆ ವಿರಾಟ್ ಕೊಹ್ಲಿ (Virat Kohli) ಒಂದೇ ಒಂದು ಶತಕವನ್ನು ಗಳಿಸಲು ಸಾಧ್ಯವಾಗಲಿಲ್ಲ. ಇದರ ನಂತರ, ಏಷ್ಯಾ ಕಪ್ 2022ರಲ್ಲಿ (Asia Cup 2022), ವಿರಾಟ್ ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸಿದರು, ಅದರೊಂದಿಗೆ ಅವರ ಶತಕಗಳ ಬರ ಕೂಡ ಕೊನೆಗೊಂಡಿತು. ಇದು ಟಿ20 ಮಾದರಿಯಲ್ಲಿ ವಿರಾಟ್ ಅವರ ಮೊದಲ ಶತಕವಾಗಿದೆ. ಇದರ ನಂತರ, ಡಿಸೆಂಬರ್ 10ರಂದು ವಿರಾಟ್ ಬಾಂಗ್ಲಾದೇಶ (IND vs BAN) ವಿರುದ್ಧದ ಏಕದಿನ ಪಂದ್ಯದಲ್ಲಿ 113 ರನ್ ಗಳಿಸುವ ಮೂಲಕ ವರ್ಷದ ಮತ್ತೊಂದು ಶತಕವನ್ನು ಗಳಿಸಿದರು. ಈ ಮೂಲಕ ಮತ್ತೆ ಕೊಹ್ಲಿ ಫಾರ್ಮ್ಗೆ ಬಂದಿದ್ದು, ಮುಂದಿನ ಏಕದಿನ ವಿಶ್ವಕಪ್ಗೆ ಕೊಹ್ಲಿ ಭರ್ಜರಿಯಾಗಿ ಸಿದ್ಧರಾಗುತ್ತಿದ್ದಾರೆ.
ಕೊಹ್ಲಿ ಡೆಡಿಕೇಶನ್ಗೆ ಮೆಚ್ಚುಗೆ:
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಅಭಿಮಾನಿಗಳು ವಿರಾಟ್ ಅವರಿಂದ ಶತಕದ ನಿರೀಕ್ಷೆಯಲ್ಲಿದ್ದರು ಆದರೆ ಮೊದಲ ದಿನವೇ ವಿರಾಟ್ 1 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. 5 ಎಸೆತಗಳಲ್ಲಿ 1 ರನ್ ಗಳಿಸಿ ಔಟಾದ ಬಳಿಕ ವಿರಾಟ್ ಕೆಲ ಟೀಕೆಗಳನ್ನು ಎದುರಿಸಿದ್ದರು. ಆದರೆ ಔಟಾದ ನಂತರ ವಿರಾಟ್ ಮಾಡಿದ ಆ ಒಂದು ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ವಿರಾಟ್ ಔಟಾದಾಗ ಭಾರತದ ಸ್ಕೋರ್ 48/3 ಆಗಿತ್ತು.
Virat Kohli practicing against the left-arm spinner during tea break, the dedication to get better always. (Source - Sports Yaari) pic.twitter.com/CSg2C5jf8t
— Johns. (@CricCrazyJohns) December 14, 2022
2019ರಲ್ಲಿ ಕೊಹ್ಲಿ ಲಾಸ್ಟ್ ಟೆಸ್ಟ್ ಶತಕ:
ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಅವರ ಕೊನೆಯ ಶತಕವು 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಈಡನ್ ಗಾರ್ಡನ್ಸ್ನಲ್ಲಿ ಬಂದಿತ್ತು., ಅದರ ನಂತರ ವಿರಾಟ್ 33 ಇನ್ನಿಂಗ್ಸ್ಗಳಲ್ಲಿ ಕೇವಲ 6 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರ ಸರಾಸರಿ ಕೇವಲ 26.45 ಆಗಿದೆ. ಈ ಪಂದ್ಯದಲ್ಲಿ ತೈಜುಲ್ ಇಸ್ಲಾಂ ಅವರ ಬೌಲಿಂಗ್ನಲ್ಲಿ ವಿರಾಟ್ ಔಟಾದರು.
ಭಾರತ-ಬಾಂಗ್ಲಾದೇಶ ಪ್ಲೇಯಿಂಗ್ 11:
ಭಾರತದ ಆಡುವ XI : ಶುಭಮನ್ ಗಿಲ್, ಕೆಎಲ್ ರಾಹುಲ್ (ಸಿ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್
ಬಾಂಗ್ಲಾದೇಶ ಪ್ಲೇಯಿಂಗ್ XI: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್, ಶಾಕಿಬ್ ಅಲ್ ಹಸನ್ (ಸಿ), ಮುಶ್ಫಿಕರ್ ರಹೀಮ್ (ವಾಕ್), ಯಾಸಿರ್ ಅಲಿ, ನೂರುಲ್ ಹಸನ್, ಮೆಹದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಾಲಿದ್ ಅಹ್ಮದ್ ಮತ್ತು ಇಬಾದತ್ ಹೊಸೈನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ